ಮಂಗಳೂರು: ಗಾಂಜಾ ಮಾರಾಟ ಪ್ರಕರಣ ನಾಲ್ವರ ಬಂಧನ

ಮಂಗಳೂರು ಜುಲೈ 23: ಮಾದಕ ವಸ್ತು ಗಾಂಜಾವನ್ನು ಮಂಗಳೂರು ನಗರದಿಂದ ಬುಡ ಸಮೇತ ಕಿತ್ತೆಸೆಯಲು ಮಂಗಳೂರು ಪೊಲೀಸರು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ದಾಳಿಗಳನ್ನು ಈಗಾಗಲೇ ಮಾಡಿದ್ದಾರೆ.

ನಗರಕ್ಕೆ ಗಾಂಜಾ ಸರಬರಾಜು ಆಗುವ ಕೇರಳದ ಕಳ್ಳ ದಾರಿಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ನಿರಂತರ ದಾಳಿಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಹಲವಾರು ಗಾಂಜಾ ಸ್ಮಗ್ಲರ್ ಗಳನ್ನು ಬಂಧಿಸಿದ್ದಾರೆ. ಆದರೆ ನಗರದಲ್ಲಿ ಮಾತ್ರ ಗಾಂಜಾ ವ್ಯವಹಾರ ನಿಯತ್ರಣಕ್ಕೆ ಬರುತ್ತಿಲ್ಲ.

ಇಂದು ಸಂಜೆ ನಗರದ ಉರ್ವಾ ಠಾಣೆಯ ಪೊಲೀಸರು ನಡಡೆಸಿದ ದಾಲಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂದಿತರನ್ನು ಅಶೋಕ ನಗರ ನಿವಾಸಿಗಳಾದ ನಿಶೀತ್ (22), ವೈಶಾಕ್(18), ಶಕ್ತಿ ನಗರ ನಿವಾಸಿ ಪ್ರೀತಂ (24), ಹಾಗು ಕದ್ರಿ ನಿವಾಸಿ ಸೂರಜ್ (33) ಎಂದು ಗುರುತಿಸಲಾಗಿದೆ. ನಗರದ ದೆಂಬೆಲ್ ಎಂಬಲ್ಲಿ ದಾಳಿ ನಡೆಸಿದ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ.

Four Ganja Peddlers arrested in Mangaluru

ಈ ನಡುವೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಪೊಲೀಸರು ಬಂದಿಸಿದ್ದಾರೆ.

ಬಂಧಿತನನ್ನು ಮಹಮ್ಮದ್ ಹನೀಫ್ ಎಂದು ಗುರುತಿಸಲಾಗಿದ್ದು ಈತ ಈಗಾಗಲೇ ಬಂಧನದಲ್ಲಿರುವ ರೌಡಿ ಅಬ್ದುಲ್ ಅಜೀಝ್ ಎಂಬಾತನ ಸಹಚರ ಎಂದು ಹೇಳಲಾಗಿದೆ . ಬಂಧಿತನಿಂದ 300 ಗ್ರಾಂ ಗಾಂಜಾ ವಸಪಡಿಸಿ ಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+