'ಶಬರಿಮಲೆ ವಿಷಯದಲ್ಲಿ ಮಹಿಳಾ ಸಮಾನತೆ ವಿಚಾರ ಬರುವುದಿಲ್ಲ'
ಮಂಗಳೂರು, ಜನವರಿ 09: ಶಬರಿಮಲೆ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದು ಸರಿಯಲ್ಲ. ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಮಾರಕ ಎಂದು ಕಾಂಗ್ರೆಸ್ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂಡಿದೆ ಮಾತನಾಡಿದ ಅವರು, ಕೇರಳದ ಶಬರಿಮಲೆಯಲ್ಲಿ ಅದರದೇ ಆದ ಸಂಪ್ರದಾಯ , ಕಟ್ಟುಪಾಡುಗಳಿವೆ . ಅದರಲ್ಲಿ ಮಹಿಳಾ ಸಮಾನತೆಯ ವಿಚಾರವೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಶಬರಿಮಲೆಗೆ ಅದರದೇ ಆದ ವಿಶೇಷತೆಯಿದ್ದು, ಕೋಟ್ಯಾಂತರ ಜನರ ನಂಬಿಕೆ ಇದೆ. ಹಿಂದಿನಿಂದಲೂ ಕ್ಷೇತ್ರಕ್ಕೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ನಿಷೇಧವಿದೆ. ಶಬರಿಮಲೆ ಕ್ಷೇತ್ರಕ್ಕೆ 48 ಕಿಲೋ ಮೀಟರ್ ನಡೆದು ಹೋಗಬೇಕಾದ ಪರಿಸ್ಥಿತಿಯಿದ್ದು, ಅತ್ಯಂತ ಕ್ಲಿಷ್ಟಕರವಾದ ಹಾದಿಯಲ್ಲಿ ಮಹಿಳೆಯರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿಯೂ ಈ ರೀತಿಯ ನಿಷೇಧವಿರುವ ಸಾಧ್ಯತೆಯಿದೆ.

ಅಲ್ಲದೆ ದೇಹ ಸಂಬಂಧಿ ಸಮಸ್ಯೆಯಿಂದಲೂ ಮಹಿಳೆಯರಿಗೆ ಶಬರಿಮಲೆಗೆ ನಿಷೇಧವಿದೆ. ಕ್ಷೇತ್ರದಲ್ಲಿ ಯಾವುದಕ್ಕೆ ಅವಕಾಶ ನೀಡಬೇಕು , ನೀಡಬಾರದು ಎನ್ನುವ ವಿಚಾರ ದೇವಸ್ಥಾನದ ಅರ್ಚಕರು ಹಾಗೂ ಅದಕ್ಕೆ ಸಂಬಂಧಪಟ್ಟವರ ವಿವೇಚನೆಗೆ ಬೀಡಬೇಕಾಗಿದೆ ಎಂದು ಶಕುಂತಲಾ ಶೆಟ್ಟಿ ತಮ್ಮ ಅನಿಸಿಕೆ ಹೊರಹಾಕಿದ್ದಾರೆ.











Click it and Unblock the Notifications