• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಸಭೆ ಚುನಾವಣೆ: ಸಂಸದ ನಳೀನ್ ಕಟೀಲ್‌ಗೆ ಪಕ್ಷದಲ್ಲೇ ಪ್ರತಿಸ್ಪರ್ಧಿಗಳು, ಟಿಕೆಟ್ ಯಾರಿಗೆ?

|

ಮಂಗಳೂರು, ಡಿಸೆಂಬರ್ 15: ಲೋಕ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂದಿದೆ . ರಾಜಕೀಯ ಪಕ್ಷಗಳು ಮುಂದಿನ ಚುನಾವಣಾ ತಂತ್ರಗಾರಿಕೆಗಳ ಬಗ್ಗೆ ಈಗಾಗಲೇ ಚಿಂತನೆ ಆರಂಭಿಸಿವೆ. ಆಭ್ಯರ್ಥಿಗಳ ಆಯ್ಕೆ ಕಸರತ್ತು ಚುರುಕುಗೊಂಡಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಾಳಯದಲ್ಲಿ ಚುನಾವಣೆಗೆ ಪೂರ್ವ ತಯಾರಿಗಳು ಆರಂಭವಾಗಿದೆ.

ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಲ್ಲಿ ಚಟುವಟಿಕೆ ಶುರುವಾಗಿದೆ. ಬಿಜೆಪಿಯಿಂದ ಕಳೆರಡು ಬಾರಿ ಸತತ ಗೆಲುವು ದಾಖಲಿಸಿದ ನಳಿನ್ ಕುಮಾರ್ ಕಟೀಲ್ ಅವರನ್ನೇ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಆದರೆ ಈ ನಿರ್ಧಾರಕ್ಕೆ ಬಿಜೆಪಿ ಪಾಳಯದಲ್ಲೇ ವಿರೋಧ ಧ್ವನಿ ಕೂಡ ಕೇಳಿಬರುತ್ತಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಗಳು ಆರಂಭವಾಗಿದೆ.

ಚುನಾವಣಾ ಅಖಾಡಕ್ಕೆ ಮತ್ತೆ ತಯಾರಾದ ಬಿಜೆಪಿ: ನೀಲನಕ್ಷೆ ಈಗಲೇ ಸಿದ್ಧ

ಈ ನಡುವೆ ಮಂಗಳೂರಿನ ಖ್ಯಾತ ನೇತ್ರತಜ್ಞ ಹಾಗು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಮುಖಂಡ ಡಾ.ಸುದೀರ್ ಹೆಗ್ಡೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಬಿಜೆಪಿಯಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದವಿರುವುದಾಗಿ ಅವರು ತಿಳಿಸಿದ್ದಾರೆ.

'ಕಾರ್ಯಕರ್ತರ ಒತ್ತಡ ಇದೆ'

'ಕಾರ್ಯಕರ್ತರ ಒತ್ತಡ ಇದೆ'

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಕ್ಷದ ಕಾರ್ಯಕರ್ತರ ಒತ್ತಡದ ಮೇರೆಗೆ ನಾನು ಲೋಕಸಭೆಗೆ ಸ್ಪರ್ಧಿಸಲು ಸಿದ್ಧ ನಿದ್ದೇನೆ. ಟಿಕೆಟ್ ನೀಡುವ ವಿಚಾರ ಪಕ್ಷದ ಮುಖಂಡರಿಗೆ ಬಿಟ್ಟಿದ್ದು. ಒಂದು ವೇಳೆ ಅವಕಾಶ ಸಿಕ್ಕಿದರೆ ಕೈ ಮೀರಿ ಸೇವೆ ಮಾಡಲು ಸಿದ್ದ ಎಂದು ಅವರು ತಿಳಿಸಿದ್ದಾರೆ.

ಸೋಲಿನ ಆಘಾತ: ಸರಣಿ ಸಭೆಯ ಮೊರೆಹೋದ ಬಿಜೆಪಿ

ಅನುಮಾನ ಸೃಷ್ಠಿಸಿರುವ ಹೇಳಿಕೆ

ಅನುಮಾನ ಸೃಷ್ಠಿಸಿರುವ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿಯವರ ನಿಷ್ಕಲ್ಮಶ ಮನಸ್ಸು, ದೇಶರಕ್ಷಣೆಗಾಗಿ ಅವರ ನಿಲುವು. ನೇರ ದಿಟ್ಟ ನಿರ್ಧಾರ ನಮಗೆ ಪ್ರೇರಣೆ . ಕಾರ್ಯಕರ್ತರ ಇಚ್ಛೆಯಂತೆ ಪಕ್ಷ ಅವಕಾಶ ನೀಡಿದರೆ ಜನಸೇವೆ ಮಾಡುವಲ್ಲಿ ಎರಡು ಮಾತಿಲ್ಲ . ಧಾರ್ಮಿಕ , ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿದೆ.ಯುವಜನರಿಗೆ ಸರಿಯಾದ ಶಿಕ್ಷಣ ಜೊತೆಗೆ ಆರೋಗ್ಯದ ಅರಿವು ಮೂಡಿಸುವುದೇ ನನ್ನ ಗುರಿ ಎಂದಿದ್ದಾರೆ.

ಪಂಚ ರಾಜ್ಯ ಚುನಾವಣೆ ಫಲಿತಾಂಶ: ಎಚ್ಚೆತ್ತ ಬಿಎಸ್‌ವೈ, ಸಭೆಗೆ ನಿರ್ಧಾರ

ಸುದೀರ್‌ ಹೆಗ್ಡೆ ಬಗ್ಗೆ ಒಲವು

ಸುದೀರ್‌ ಹೆಗ್ಡೆ ಬಗ್ಗೆ ಒಲವು

ಡಾ.ಸುದೀರ್ ಹೆಗ್ಡೆ ಅವರ ಈ ಹೇಳಿಕೆ ದಕ್ಷಿಣ ಕನ್ನಡ ಬಿಜೆಪಿ ಪಾಳಯದಲ್ಲಿ ಚರ್ಚೆಗೆ ಕಾರಣ ವಾಗಿದೆ. ಮುಂದಿನ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಈಗ ಪ್ರತಿಸ್ಪರ್ಧಿಯ ತಲೆ ನೂವು ಆರಂಭವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತದ ಬಿಜೆಪಿ ಟಿಕೆಟ್ ಮೇಲೆ ಕೇವಲ ಡಾ ಸುದೀರ್ ಹಗ್ಡೆ ಮಾತ್ರವಲ್ಲದೇ ಬಿಜೆಪಿ ಯುವ ಮುಖಂಡ ಬ್ರಿಜೇಶ್ ಚೌಟ ಸೇರದಂತೆ ಇನ್ನಿತರರು ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲಿ ಟಿಕೆಟ್ ರಾಜಕೀಯ ಬಿರುಸುಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ವಿವಾದಿತರಿಗೆ ಟಿಕೆಟ್ ಇಲ್ಲ

ವಿವಾದಿತರಿಗೆ ಟಿಕೆಟ್ ಇಲ್ಲ

ವಿವಾದಿತ ನಾಯಕರಿಗೆ ಈ ಬಾರಿ ಟಿಕೆಟ್ ನೀಡುವುದು ಬೇಡ ಎಂದು ಬಿಜೆಪಿ ಯೋಚಿಸುತ್ತಿದೆ ಎನ್ನಲಾಗಿದೆ. ಅಂತೆಯೇ ನಡೆದರೆ ನಳಿನ್ ಕಟೀಲ್, ಅನಂತ್‌ಕುಮಾರ್ ಹೆಗ್ಡೆ ಅವರುಗಳು ಟಿಕೆಟ್‌ ವಂಚಿತರಾಗಲಿದ್ದಾರೆ. ನಳಿಕ್‌ ಕಟಿಲ್‌ ಅವರು ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ದೂರು ಸಹ ಕ್ಷೇತ್ರದಲ್ಲಿ ಇದೆ ಹಾಗಾಗಿ ಈ ಬಾರಿ ಬಿಜೆಪಿ ಹೊಸಬರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP leader and famous Eye Specialist of Mangaluru interested to Contest next upcoming Lok Sabha election from Dakshina Kannada constituency over BJP ticket.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more