ಫೇಸ್ಬುಕ್ ನಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಅವಹೇಳನಕಾರಿ ಪೋಸ್ಟ್
ಮಂಗಳೂರು, ಜನವರಿ 30: ಹಿರಿಯ ಆರ್.ಎಸ್.ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ರಿಗೆ ಅವಮಾನ ಮಾಡಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಲಾಗಿದ್ದು ವೈರಲ್ ಆಗಿದೆ. ಈ ಪೋಸ್ಟ್ ನಲ್ಲಿ ಬಳಸಿರುವ ಭಾಷೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.
ಜನವರಿ 28ರಂದು 'ಟ್ರೂ ಮೀಡಿಯಾ ನೆಟವರ್ಕ್' ಎನ್ನುವ ಫೇಸ್ಬುಕ್ ಪೇಜ್ ನಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಆರ್.ಎಸ್.ಎಸ್ ಯೂನಿಫಾರ್ಮ್ ನಲ್ಲಿರುವ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.
ಇದರಲ್ಲಿ ಪ್ರಭಾಕರ್ ಭಟ್ ಸೂರ್ಯ ನಮಸ್ಕಾರ ಮಾಡುವ ಚಿತ್ರವನ್ನು ನಾಯಿಗಳ ಚಿತ್ರದ ಜತೆ ಸೇರಿಸಲಾಗಿದೆ. ಜತೆಗೆ ಚಿತ್ರದ ಮೇಲೆ 'ಅಯ್ಯಯ್ಯೋ ಭಯೋತ್ಪಾದಕ ಮುದುಕ ಭಟ್ಟಾ' ಎಂದು ಬರೆಯಲಾಗಿದೆ.

ಈ ಪೋಸ್ಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಪೇಜ್ ಅಡ್ಮಿನ್ ರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಪಿಟಿಐಗೆ ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್. ರವಿಕಾಂತೇ ಗೌಡ, "ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ನಿಂದನಾತ್ಮಕ ಕಾಮೆಂಟ್ ಮಾಡುವವರ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳಲಾಗುತ್ತದೆ," ಎಂದು ಹೇಳಿದ್ದಾರೆ.











Click it and Unblock the Notifications