ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಿಂದ ಬೆಂಗಳೂರಿಗೆ ಪೈಪ್ ಲೈನ್ ಏಕೆ?

By Mahesh
|
Google Oneindia Kannada News

ಚಿಕ್ಕಮಗಳೂರು, ನ.13: ನಿತ್ಯ ಹರಿದ್ವರ್ಣ ಕಾಡುಗಳು, ವಿರಳವಾದರೂ ಕಾಡು ನಂಬಿ ಬದುಕುವ ಜನಸಮೂಹ ನೆಲೆಸಿರುವ ತಾಣಗಳ ಮಧ್ಯೆ ನೀರಿನ ಪೈಪ್ ಹರಿಸುವುದಕ್ಕೆ ಕಳಸದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಈಗ ಮಂಗಳೂರು-ಬೆಂಗಳೂರು ನಡುವೆ ಗ್ಯಾಪ್ ಪೈಪ್ ಲೈನ್ ಎಳೆಯುವ ಕ್ರಿಯೆ ಸಾಗುತ್ತ್ತಿದ್ದು, ಪರಿಸರವಾದಿಗಳು ಹೋರಾಟಕ್ಕೆ ಮುಂದಾಗಿದ್ದಾರೆ.

ಮೂಡಿಗೆರೆ ಸಮೀಪ ಹಾದು ಹೋಗುವ ಈ ಅನಿಲ ಪೈಪ್ ಅಳವಡಿಕೆಗೆ ಸ್ಥಳೀಯ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಮೂಡಿಗೆರೆಯ ಕರ್ನಾಟಕ ಧ್ವನಿ ಸಂಘಟನೆಯ ಹೊರಟ್ಟಿ ರಘು ಅವರು ಈ ಬಗ್ಗೆ ಮಾತನಾಡಿ, ಈಗಾಗಲೇ ಇಲ್ಲಿನ ಕಾಡುಗಳಲ್ಲಿ ಇಂಧನ ಕೊಳವೆಗಳು ಹಾದುಹೋಗುತ್ತಿದ್ದು, ಪರಿಸರ ನಾಶವಾಗುತ್ತಿದೆ. ಅಲ್ಲದೆ ಆಗಾಗ ಕಳ್ಳತನ ಪ್ರಕರಣಗಳು ಹೆಚ್ಚಿವೆ. ಈಗ ಅನಿಲ ಕೊಳವೆ ಈ ಮಾರ್ಗದಲ್ಲಿ ಸಾಗಿದರೆ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂದಿದ್ದಾರೆ.

Environmentalist oppose Mangaluru to Bengaluru Gas pipeline

ಮಂಗಳೂರಿನಿಂದ ಬೆಂಗಳೂರು ತನಕ 384 ಕಿ.ಮೀ ಉದ್ದದ ಅನಿಲ ಕೊಳವೆ ಮಾರ್ಗ ನಿರ್ಮಾಣವಾಗುತ್ತಿದೆ. ಮೂಡಿಗೆರೆ, ಸಕಲೇಶಪುರ, ಹಾಸನ ಹಾಗೂ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ 'ಗ್ಯಾಸ್' ತಲುಪಲಿದೆ. ಸುಮಾರು 2,000 ಮರಗಳು ಮಾರ್ಗ ಮಧ್ಯದಲ್ಲಿ ನಾಶವಾಗಲಿದೆ. ಜೊತೆಗೆ ಅರಣ್ಯವಾಸಿಗಳು ಹಾಗೂ ವನ್ಯಜೀವಿಗಳಿಗೂ ತೊಂದರೆಯಾಗಲಿದೆ.

ಎರಡೂವರೆ ತಿಂಗಳ ಹಿಂದೆ ಕಳಸ ಮಾರ್ಗವಾಗಿ ನೀರಿನ ಪೈಪ್ ಅಳವಡಿಕೆಗೆ ವಿರೋಧ ವ್ಯಕ್ತವಾಗಿತ್ತು. ಆದರೆ, ಈಗ ಸಂಘಟಿತ ಹೋರಾಟದ ಮೂಲಕ ಈ ಉದ್ದೇಶಿತ ಯೋಜನೆಯನ್ನು ನಿಲ್ಲಿಸಬೇಕಿದೆ ಎಂದಿದ್ದಾರೆ. ಈಗಾಗಲೇ ಸ್ಥಳೀಯ ಪರಿಸರ ಸಂಘಟನೆಗಳು ಚಿಕ್ಕಮಗಳೂರು ಡಿಸಿ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಲಾಗಿದೆ.

ಅದರೆ, ಈ ಉದ್ದೇಶಿತ ಯೋಜನೆ ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿದೆಯಂತೆ. ಈ ಯೋಜನೆಯಿಂದ ಮೂಡಿಗೆರೆಯೊಂದರಲ್ಲೇ 400ಕ್ಕೂ ಅಧಿಕ ಮರಗಳು ಧರೆಗುರುಳಲಿವೆ.

English summary
A pipeline being laid to carry gas from Mangaluru to Bengaluru, which could destroy a large number of trees enroute, is not going down well with eco activists, Environmentalists Particulary with Mudigere residents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X