'ಇವ್ ನರ್ವಾ' ಡೈಲಾಗ್ ಹೇಳಿದ ಯಕ್ಷಗಾನ ಕಲಾವಿದನಿಗೆ ನೋಟಿಸ್!
Recommended Video

ಮಂಗಳೂರು, ಏಪ್ರಿಲ್ 04: ಯಕ್ಷಗಾನ ಪ್ರಸಂಗ ಒಂದರಲ್ಲಿ ವಿದೂಷಕ ಉಚ್ಚರಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯವರ 'ಇವನರ್ವ' ಡೈಲಾಗ್ ಮೇಲೆ ಚುನಾವಣಾ ಆಯೋಗ ಕೆಂಗಣ್ಣು ಬೀರಿ ಡೈಲಾಗ್ ಹೇಳಿದ್ದ ಯಕ್ಷಗಾನ ಕಲಾವಿದನ ವಿರುದ್ದ ನೋಟಿಸ್ ಜಾರಿ ಮಾಡಿತ್ತು.
ಆದರೆ ಆ ಯಕ್ಷಗಾನ ಪ್ರದರ್ಶನವು ಕೇರಳ ರಾಜ್ಯಕ್ಕೆ ಸೇರಿದ ಗ್ರಾಮದಲ್ಲಿ ನಡೆದಿದ್ದು, ಅಲ್ಲಿ ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲವಾದ ಕಾರಣ ಚುನಾವಣಾ ಆಯೋಗವು ನೊಟೀಸ್ ಅನ್ನು ವಪಾಸ್ಸು ಪಡೆದಿದೆ.
ಕಟೀಲು ಮೇಳದ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ ಮಂಗಳೂರಿನಲ್ಲಿ ಇತ್ತೀಚೆಗೆ ಪ್ರದರ್ಶನ ಗೊಂಡ ಯಕ್ಷಗಾನ ಪ್ರಸಂಗ ಒಂದರಲ್ಲಿ ರ ಸಂಭಾಷಣೆ ಸಂಧರ್ಭದಲ್ಲಿ ಇವನರ್ವ ಇವನರ್ವ ಎಂದು ರಾಹುಲ್ ಗಾಂಧಿಯನ್ನು ಅನುಕರಣೆ ಮಾಡಿ ಸಭಿಕರಿಂದ ಚಪ್ಪಅಳೆ ಗಿಟ್ಟಿಸಿಕೊಂಡಿದ್ದರು . ಯಕ್ಷಗಾನ ಪ್ರಸಂಗದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಬೆಂಗಳೂರು ಮತ್ತು ಮಂಗಳೂರು ಚುನಾವಣೆ ಆಯೋಗದ ಕಚೇರಿ ಯಿಂದ ಅಧಿಕಾರಿಗಳು ಕಟೀಲು ಮೇಳದ ಮುಖ್ಯಸ್ಥರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ವಿಚಾರಿಸಿಕೊಂಡು. ಮೂಡಬಿದ್ರೆ ಚುನಾವಣಾ ಕಚೇರಿ ಯಿಂದ ನೋಟಿಸ್ ಹೊರಡಿಸಿದ್ದು, ಯಕ್ಷಗಾನ ಪ್ರದರ್ಶನವನ್ನು ನಿಲ್ಲಿಸಬೇಕು ಮತ್ತು ಆ ಕಲಾವಿದನನ್ನು ಮೇಳದಿಂದ ತೆಗೆಯಬೇಕೆಂದು ಸೂಚನೆ ನೀಡಿದ್ದರು. ಇದು ಯಕ್ಷಗಾನ ಮೇಳಗಳ ವಿರೋಧಕ್ಕೆ ಕಾರಣವಾಗಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಚುನಾವಣಾ ಆಯೋಗದ ಕ್ರಮಕ್ಕೆ ಯಕ್ಷಗಾನ ಕಲಾವಿದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,ಯಕ್ಷಗಾನ ಪ್ರಸಂಗ ಸಂದರ್ಭದಲ್ಲಿ ವಿದೂಷಕ ಬಳಸಿದ "ಇವನರ್ವ" ಪದಕ್ಕೂ ರಾಜಕೀಯಗೂ ಯಾವುದೇ ಸಂಬಂಧ ಇಲ್ಲ. ಯಾರ ಹೆಸರನ್ನು ಇಲ್ಲಿ ಪ್ರಸ್ಥಪಿಸಲಾಗಿಲ್ಲ . ಹಾಗಾಗಿ ಕಲಾವಿದರ ಮೇಲೆ ಚುನಾವಣಾ ಆಯೋಗ ಪ್ರಹಾರ ನಡೆಸಲು ಮುಂದಾಗಿರೋದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದೀಗ ಚುನಾವಣಾ ಆಯೋಗವು ತನ್ನ ತಪ್ಪನ್ನು ತಿದ್ದಿಕೊಂಡಿದ್ದು, ಯಕ್ಷಗಾನ ಪ್ರದರ್ಶನವು ಕೇರಳದಲ್ಲಿ ನಡೆದಿರುವುದರಿಂದ ಅಲ್ಲಿ ಚುನಾವಣಾ ನೀತಿ ಸಂಹಿತೆ ಅನ್ವಯ ಆಗದ ಕಾರಣ, ಅದಲ್ಲದೆ ಪ್ರದರ್ಶನದಲ್ಲಿ ಯಾವುದೇ ವ್ಯಕ್ತಿಯ ಹೆಸರು ಬಳಕೆ ಮಾಡದೇ ಇರುವ ಕಾರಣ ನೊಟೀಸ್ ಅನ್ನು ವಾಪಾಸ್ ಪಡೆದಿದೆ.












Click it and Unblock the Notifications