ಧರ್ಮಸ್ಥಳದಲ್ಲಿ ವೇದಿಕೆ ಕುಸಿತ: ಜ್ಯೋತಿಷಿಗಳ ಮಾತು ನಿಜವಾಗಿದೆ ಎಂದ ಡಾ.ಹೆಗ್ಗಡೆ
ಮಂಗಳೂರು, ಫೆಬ್ರವರಿ 15:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಿನ್ನೆ (ಫೆ.14) ನಡೆದ ಮುಖ್ಯ ವೇದಿಕೆ ಕುಸಿತ ದುರಂತದ ಸುಳಿವು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಮೊದಲೇ ದೊರೆತಿತ್ತಾ?. ಹೌದೆನ್ನುತ್ತಿವೆ ಸನ್ನಿವೇಶಗಳು.
ವೀರೆಂದ್ರ ಹೆಗ್ಗಡೆಯವರಿಗೆ ಪಂಚ ಮಹಾವೈಭವದ ಬೃಹತ್ ವೇದಿಕೆಯ ಪೆಂಡಾಲ್ ದುರಂತದ ಸುಳಿವು ಮೊದಲೇ ಸಿಕ್ಕಿತ್ತು. ಹೇಗೆಂದರೆ 15 ದಿನಗಳ ಹಿಂದೆಯೇ ವೀರೇಂದ್ರ ಹೆಗ್ಗಡೆಯವರಿಗೆ ಈ ಕುರಿತ ಸಣ್ಣದೊಂದು ಸೂಚನೆ ದೊರೆತಿತ್ತಂತೆ.
ಈ ಸಂಬಂಧ ಮಾತನಾಡಿದ ವೀರೇಂದ್ರ ಹೆಗ್ಗಡೆ, ನನಗೆ ಕಳೆದ 15 ದಿನಗಳಿಂದ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಏನೋ ಸರಿಯಿಲ್ಲ ಎಂಬ ಭಾವನೆ ಬರುತಿತ್ತು. ಜ್ಯೋತಿಷಿಗಳಿಗೆ ಮನಸ್ಸಿನ ಗೊಂದಲ ತಿಳಿಸಿದೆ. ವಿಘ್ನವಾಗುವ ಸೂಚನೆಯನ್ನು ಜ್ಯೋತಿಷಿಗಳು ನೀಡಿದ್ದರು. ಪೂಜೆಯನ್ನು ಮಾಡಿಸುವಂತೆ ಹೇಳಿದರು. ಜ್ಯೋತಿಷಿಗಳ ಮಾತು ನಿಜವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇವರ ದಯೆಯಿಂದ ದೊಡ್ಡ ಅಪಾಯ ತಪ್ಪಿದೆ. ಒಂದು ಗಂಟೆ ಮೊದಲು ಆಗಿದ್ದರೆ ನಾವು ಅಪಾಯಕ್ಕೆ ಸಿಲುಕುತ್ತಿದ್ದೆವು. ಜೈನ ಮುನಿಗಳ ತಪ್ಪಸ್ಸಿನಿಂದ ಅಪಾಯದಿಂದ ಪಾರಾಗಿದ್ದೇವೆ ಎಂದು ಹೆಗ್ಗಡೆ ತಿಳಿಸಿದ್ದಾರೆ.












Click it and Unblock the Notifications