ಡಾ. ಸಂತೋಷ್ ಸೋನ್ಸ್ ಏಷ್ಯನ್ ಪೀಡಿಯಾಟ್ರಿಶಿಯನ್ ಪ್ರಶಸ್ತಿಗೆ ಆಯ್ಕೆ
ಮಂಗಳೂರು, ಜುಲೈ. 26: ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ. ಸಂತೋಷ ಸೋನ್ಸ್ ಅವರನ್ನು ಪ್ರತಿಷ್ಠಿತ ಏಷ್ಯನ್ ಪೀಡಿಯಾಟ್ರಿಶಿಯನ್ 2018ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪೀಡಿಯಾಟ್ರಿಕ್ಸ್ ಕ್ಷೇತ್ರದಲ್ಲಿ ಸೋನ್ಸ್ ಅವರು ಮಾಡಿರುವ ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಡಾ .ಸಂತೋಷ್ ಸೋನ್ಸ್ ಪ್ರಸ್ತುತ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಸೋನ್ಸ್ ಅವರು ಹಲವಾರು ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿ ಸಂಶೋಧನಾ ವರದಿ ಮಂಡಿಸಿದ್ದಾರೆ. ಅದಲ್ಲದೇ ಎರಡು ಪುಸ್ತಕ ಪ್ರಕಟಿಸಿದ್ದಾರೆ.
ಮೂಲತಃ ಕುಂದಾಪುರದವರಾದ ಡಾ. ಸಂತೋಷ್ ಸೋನ್ಸ್ ಮಂಗಳೂರು ಮತ್ತು ಮಣಿಪಾಲದ ಕೆಎಂಸಿ ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗು ಮಂಗಳೂರಿನ ಪ್ರತಿಷ್ಠಿತ ಎ ಜೆ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಡಾ ಸಂತೋಷ ಸೋನ್ಸ್ ಈ ಪ್ರಶಸ್ತಿ ಪಡೆದ 3 ನೇ ಭಾರತೀಯ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಗಸ್ಟ್ 28 ರಂದು ಇಂಡೋನೇಷ್ಯಾದ ನುಸಾ ದುವಾ ದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿ ಯನ್ನು ಸೋನ್ಸ್ ಸ್ವೀಕರಿಸಲಿದ್ದಾರೆ.
16 ನೇ ಏಷಿಯಾ ಪೆಸಿಫಿಕ್ ಕಾಂಗ್ರೆಸ್ ಆಫ್ ಪಿಡಿಯಾಟ್ರಿಕ್ಸ್ 2018, ಇಂಡೋನೇಷಿಯನ್ ಪೀಡಿಯಾಟ್ರಿಕ್ಸ್ ಸೋಸೈಟಿಯ 9 ನೇ ವಾರ್ಷಿಕ ವೈಜ್ಞಾನಿಕ ಸಭೆ ಆಗಸ್ಟ್ 23 ರಂದು ನಡೆಯಲಿದೆ. ನಂತರ ನುಸಾದುವಾದಲ್ಲಿ ನಡೆಯಲಿರುವ 6 ನೇ ಏಷಿಯಾ ಪೆಸಿಫಿಕ್ ಕಾಂಗ್ರೆಸ್ ಆಫ್ ಪೀಡಿಯಾಟ್ರಿಕ್ಸ್ ಸಮಾವೇಶದಲ್ಲಿ ಈ ಪ್ರಶಸ್ತಿ ಪ್ರಧಾನ ನೆರವೇರಲಿದೆ.
ಭಾರತ ಸೇರಿದಂತೆ ಏಷ್ಯಾ ಪೆಸಿಫಿಕ್ ಪೀಡಿಯಾಟ್ರಿಕ್ಸ್ ಅಸೋಸಿಯೇಶನ್ ಆಸ್ಟ್ರೇಲಿಯಾ, ಜಪಾನ್, ಚೀನಾ, ನ್ಯೂಝಿಲ್ಯಾಂಡ್ ,ಹಾಂಗ್ ಕಾಂಗ್ , ಸಿಂಗಾಪುರ್ ಮತ್ತು ಮಲೇಷಿಯಾ ಸೇರದಂತೆ 26 ರಾಷ್ಟ್ರಗಳನ್ನು ಒಳಗೊಂಡಿದೆ.












Click it and Unblock the Notifications