• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರಾವಳಿ ಅಲೆ ಸಂಪಾದಕ ಸೀತಾರಾಂಗೆ 30 ತಿಂಗಳ ಜೈಲುವಾಸ

By Mahesh
|

ಮಂಗಳೂರು, ಡಿ.5: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಲೇಖನಗಳನ್ನು ಪ್ರಕಟಿಸಿದ ಆರೋಪ ಹೊತ್ತಿರುವ ಕರಾವಳಿ ಅಲೆ ಸಂಪಾದಕ, ಮಾಲೀಕ ಬಿ.ವಿ ಸೀತಾರಾಂ ಅವರಿಗೆ ಜೆಎಂಎಫ್ ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಅವಹೇಳನಕಾರಿ ಲೇಖನ ಪ್ರಕಟಿಸಿದ ಬಿ.ವಿ ಸೀತಾರಾಂ ಅವರಿಗೆ 30 ತಿಂಗಳ ಜೈಲುವಾಸ ಹಾಗೂ ಸಂಜೆ ಪತ್ರಿಕೆ ಕರಾವಳಿಯ ಮೂವರು ಸಿಬ್ಬಂದಿಗೆ 15,000 ರು ದಂಡ ವಿಧಿಸಿ ಗುರುವಾರ ಆದೇಶ ಹೊರಡಿಸಲಾಗಿದೆ.

ಕರಾವಳಿ ಅಲೆ ಪತ್ರಿಕೆಯಲ್ಲಿ ಅನಾಮಧೇಯನೊಬ್ಬನ ಹೆಸರಿನಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀಕ್ಷೇತ್ರದ ವಿರುದ್ಧ ಸರಣಿ ಲೇಖನಗಳನ್ನು ಪ್ರಕಟಿಸಲಾಗಿತ್ತು. ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸದಂತೆ ಸಿವಿಎಲ್ ನ್ಯಾಯಾಲಯದ ಆದೇಶವಿದ್ದರೂ ಕರಾವಳಿ ಅಲೆಯಲ್ಲಿ ಲೇಖನಗಳು ಪ್ರಕಟಗೊಂಡಿತ್ತು.

ಇದನ್ನು ಪ್ರಶ್ನಿಸಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕರಾವಳಿ ಅಲೆ ವಿರುದ್ಧ ಬಿ. ವರ್ಧಮಾನ್ ಜೈನ್ ಮೂಲಕ ಐದು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು. ಲೇಖನಗಳು ಸತ್ಯಕ್ಕೆ ದೂರವಾಗಿದ್ದು, ಈ ಅಂಕಣ ಪ್ರಕಟಿಸಿದ ಸಂಪಾದಕ, ಮಾಲೀಕ, ಪ್ರಕಾಶಕರ ಮೇಲೆ ಕ್ರಮ ಜರುಗಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಎಸ್ ಡಿಎಂ ಕಾನೂನು ಕಾಲೇಜಿನ ಬಿ ವರ್ಧಮಾನ್ ಜೈನ್, ಡಾ. ಬಿಕೆ ರವೀಂದ್ರ, ಆದರ್ಶ ಇನ್ಸ್ಟಿಟ್ಯೂಟ್ ನ ಸಂಚಾಲಕ ಬಾಲಕೃಷ್ಣ ಭಂಡಾರಿ ಅವರನ್ನು ಈ ಪ್ರಕರಣದಲ್ಲಿ ಸಾಕ್ಷಿಗಳಾಗಿ ಪರಿಗಣಿಸಲಾಗಿತ್ತು. ವಿಚಾರಣೆ ವೇಳೆ ಕರಾವಳಿ ಅಲೆಯಲ್ಲಿ ಅನಾಮಧೇಯ ಹೆಸರಿನಲ್ಲಿ ಪ್ರಕಟಗೊಂಡಿರುವ ಲೇಖನಗಳೆಲ್ಲವೂ ಶ್ರೀಕ್ಷೇತ್ರ ಧರ್ಮಸ್ಥಳದ ಮಾನಹಾನಿ ಮಾಡಲು ಪ್ರಕಟಿಸಲಾಗಿದೆ ಎಂಬುದು ಸಾಬೀತಾಗಿತ್ತು.

ಮೂರನೇ ಜೆಎಂಎಫ್ ಸಿ ಕೋರ್ಟ್ ಜಡ್ಜ್ ಉಂಡಿ ಮಂಜುಳಾ ಶಿವಪ್ಪ ಅವರು ಐದು ಪ್ರಕರಣದ ವಿಚಾರಣೆ ಬಳಿಕೆ ಕರಾವಳಿ ಅಲೆ ಸಂಪಾದಕ ಬಿ.ವಿ ಸೀತಾರಾಂ ಅವರಿಗೆ 30 ತಿಂಗಳ ಜೈಲುವಾಸ ಶಿಕ್ಷೆ ವಿಧಿಸಿದ್ದಾರೆ. ದಂಡವನ್ನು ಕಟ್ಟಲು ಸಾಧ್ಯವಾಗದಿದ್ದರೆ ಒಂದು ವರ್ಷ ಅಧಿಕ ಅವಧಿ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಪರ ವಕೀಲರಾದ ಪಿಪಿ ಹೆಗ್ಡೆ ಹಾಗು ರಾಜೇಶ್ ಅಂತಾಡಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The third JMFC court slapped a 30 month jail term and Rs 15,000 penalty for three persons in connection with printing false news about Shri Kshetra Dharmasthala and Dharmadhikari Veerendra Heggade on the Kannada evening paper Karavali Ale here on December 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more