Get Updates
Get notified of breaking news, exclusive insights, and must-see stories!

ಮಂಗಳಾದೇವಿ ಉತ್ಸವದಲ್ಲಿ ಅಂಗಡಿಗಳಿಗೆ ಭಗವಾಧ್ವಜ: ಹಿಂದೂಗಳ ಬಳಿ ವ್ಯಾಪಾರಕ್ಕೆ ಮನವಿ

ಮಂಗಳೂರು, ಅಕ್ಟೋಬರ್‌ 17: ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಆರಂಭವಾಗಿದ್ದ ವ್ಯಾಪಾರ ದಂಗಲ್ ಅನ್ಯಮತೀಯರಿಗೆ ಅವಕಾಶ ನೀಡಿದ ಬಳಿಕ ತಣ್ಣಗಾಗಿತ್ತು. ಇದೀಗ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಿದ ಬಳಿಕ ಮತ್ತೊಂದು ಬೆಳವಣಿಗೆ ನಡೆದಿದೆ.

ಹಿಂದೂಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟುವ ಪ್ರಕ್ರಿಯೆಗೆ ವಿಶ್ವ ಹಿಂದು ಪರಿಷತ್, ಭಜರಂಗ ದಳ ಮುಂದಾಗಿದೆ.ಈ ಮೂಲಕ ಹಿಂದೂಗಳ ಅಂಗಡಿಯಲ್ಲೇ ವ್ಯಾಪಾರ ಮಾಡಿ ಎನ್ನುವ ವ್ಯಾಪಾರ ದಂಗಲ್ ನಡೆದಿದೆ.

dharma-dangal-bajrang-dal

ನಾಡಿನೆಲ್ಲೆಡೆ ನವರಾತ್ರಿ ಉತ್ಸವ ಆರಂಭವಾಗಿದೆ .ಎಲ್ಲಾ ದೇವಿ ದೇವಸ್ಥಾನಗಳಲ್ಲೂ ವಿಜೃಂಭಣೆಯಿಂದ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ. ಅದರಲ್ಲೂ ಮೈಸೂರು ದಸರಾ ಬಳಿಕ ಹೆಚ್ಚು ಪ್ರಖ್ಯಾತಿ ಪಡೆದ ದಸರಾವೆಂದರೆ ಅದು ಮಂಗಳೂರು ದಸರಾ.

ಮಂಗಳೂರಿನಲ್ಲೂ ಅನೇಕ ಪ್ರಸಿದ್ಧ ದೇವಿ ದೇವಸ್ಥಾನಗಳಿವೆ. ಅದರಲ್ಲಿ ಕಡಲನಗರಿಗೆ ಮಂಗಳೂರು ಎಂಬ ಹೆಸರು ಬರಲು ಮುಖ್ಯ ಕಾರಣವಾದ ದೇವಸ್ಥಾನ ಮಂಗಳಾದೇವಿ ದೇವಸ್ಥಾನ. ಆದರೆ ಈ ಬಾರಿ ನವರಾತ್ರಿ ಹಬ್ಬ ಆರಂಭಕ್ಕೂ ಮುನ್ನವೇ ಈ ದೇವಸ್ಥಾನ ವಿವಾದವೊಂದರಿಂದ ಸದ್ದು ಮಾಡಿತ್ತು.

ದೇವಸ್ಥಾನದ ಸುತ್ತ ಮುತ್ತ ನವರಾತ್ರಿ ಉತ್ಸವಕ್ಕೆ ಅಂಗಡಿ ಸ್ಟಾಲ್‌ಗಳನ್ನು ಹರಾಜು ಮಾಡುವ ವಿಚಾರದಲ್ಲಿ ಅನ್ಯಧರ್ಮಿಯರಿಗೆ ಅವಕಾಶ ನಿರಾಕರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಬೀದಿ ವ್ಯಾಪಾರಸ್ಥರ ಸಮನ್ವಯ ಸಮಿತಿಯವರು ಪ್ರತಿಭಟನೆ ನಡೆಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಉಳಿದ ಸ್ಟಾಲ್ ಗಳ ಹರಾಜು ಪ್ರಕ್ರಿಯೆಯಲ್ಲಿ ಅನ್ಯಧರ್ಮದವರಿಗೂ ಭಾಗವಹಿಸಲು ಅವಕಾಶ ನೀಡಿ ಪ್ರಕರಣ ಸುಖಾಂತ್ಯವಾಗಿತ್ತು. ಆದರೆ ಇದೀಗ ಎರಡನೇ ಬಾರಿ ಹರಾಜು ಪ್ರಕ್ರಿಯೆ ನಡೆಸಿದ ಬಗ್ಗೆ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಆಕ್ರೋಶ ವ್ಯಕ್ತಪಡಿಸಿದೆ.

ಅನ್ಯಮತೀಯರಿಗೆ ಜಿಲ್ಲಾಡಳಿತ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟ ಹಿನ್ನಲೆಯಲ್ಲಿ ಎಲ್ಲಾ ಹಿಂದೂ ವ್ಯಾಪಾರಿಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟುವ ಕೆಲಸಕ್ಕೆ ಭಜರಂಗ ಮುಂದಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಅನ್ಯಧರ್ಮದವರ ಅಂಗಡಿಗಳಿಗೆ ತೆರಳುತ್ತಾರೆ ಎಂಬ ಉದ್ದೇಶದಿಂದ ಭಜರಂಗ ದಳ ಈ ಪ್ರಕ್ರಿಯೆಗೆ ಮುಂದಾಗಿದೆ.

dharma-dangal-bajrang-dal

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಮುಖಂಡ ಶರಣ್ ಪಂಪವೆಲ್ "ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರುವ ದೇವಸ್ಥಾನದಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು. ನಾವು ಮುಸಲ್ಮಾನ್ ವ್ಯಾಪಾರಿಗಳ ವಿರೋಧಿಗಳಲ್ಲ. ನಮ್ಮ ದೇವಸ್ಥಾನದ ಸುತ್ತ ಮುತ್ತ ಮೊದಲು ಹಿಂದುಗಳಿಗೆ ವ್ಯಾಪಾರಕ್ಕೆ ಅವಕಾಶ ಕೊಡಿ" ಎಂದಿದ್ದಾರೆ.

ಈ ಹಿಂದೆ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿದ ಸಂದರ್ಭ, ಬೀದಿ ಬದಿ ವ್ಯಾಪಾರಸ್ಥರ ಸಮನ್ವಯ ಸಮಿತಿ ದೇವಸ್ಥಾನದ ಎರಡು ಬದಿಯ ರಸ್ತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ಯಾರು ಬೇಕಾದರೂ ವ್ಯಾಪಾರ ನಡೆಸಬಹುದು ಎಂದಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಹಿಂದೂ ಮುಖಂಡ ಶರಣ್ ಪಂಪವೆಲ್ "ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬರುವ ನೂರಾರು ವರ್ಷಗಳ ಮುನ್ನವೇ ಈ ಜಾಗದಲ್ಲಿ ದೇವಸ್ಥಾನವಿತ್ತು. ಇದೆ ರಸ್ತೆಯಲ್ಲಿ ದೇವರ ರಥ ಓಡಾಡುತ್ತದೆ. ಮೊದಲು ಇದು ದೇವಸ್ಥಾನದ ಜಾಗ ಆಮೇಲೆ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಿದ್ದು. ಎಲ್ಲೆಲ್ಲಿ ದೇವಸ್ಥಾನದ ವಠಾರವಿದೆ ಅಲ್ಲಿ ಹಿಂದುಗಳೇ ವ್ಯಾಪಾರ ಮಾಡಬೇಕು.

ಹಿಂದೂ ಶಬ್ದದ ಮೇಲೇನೆ ನಂಬಿಕೆ ಇಲ್ಲದವರು, ಮೂರ್ತಿ ಪೂಜೆಯನ್ನು ನಂಬದವರು ನಮ್ಮ ಧರ್ಮವನ್ನ ಪ್ರಶ್ನೆ ಮಾಡುವವರು. ಸನಾತನ ಧರ್ಮದ ಬಗ್ಗೆನೇ ವಿರೋಧ ವ್ಯಕ್ತಪಡಿಸುವವರು ಹಿಂದೂ ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದರೆ ಅದು ಅರ್ಥವಿಲ್ಲದ ಹೇಳಿಕೆ" ಎಂದು ಕಿಡಿಕಾರಿದ್ದಾರೆ

ಒಟ್ಟಾರೆ ಎರಡನೇ ಹರಾಜು ನಡೆದರೂ ಮಂಗಳಾದೇವಿ ದೇವಸ್ಥಾನದ ವ್ಯಾಪಾರ ದಂಗಲ್ ತಣ್ಣಾಗಾಗಿಲ್ಲ.ಈ ಹಿಂದೇ ಜಾತ್ರೆಗಳ ಸಂದರ್ಭ ಬ್ಯಾನರ್, ಫ್ಲೆಕ್ಸ್ ಗಳ ಮೂಲಕ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ ನೀಡಬೇಕು ಎಂದು ವ್ಯಕ್ತವಾಗುತ್ತಿದ್ದ ಆಗ್ರಹ ಇದೀಗ ಹಿಂದೂಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟುವ ಹಂತಕ್ಕೆ ತಲುಪಿದ್ದು, ಎಲ್ಲಾ ಜಾತ್ರೆಗಳಲ್ಲೂ ಇದು ಮುಂದುವರೆಯುತ್ತಾ ಎಂದು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+