ಕಟೀಲು ದೇವಳಕ್ಕೂ ವ್ಯಾಪಿಸಿದ ಮನಿ ಮಾಫಿಯಾ, 100 ರೂ ಕೊಟ್ಟರೆ ಶೀಘ್ರದರ್ಶನ, ಭಕ್ತರ ಅಸಮಾಧಾನ
ಮಂಗಳೂರು, ಅಕ್ಟೋಬರ್ 8: ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಮಾಡಿರುವ ಮತ್ತೊಂದು ನಿಯಮ ಈಗ ವಿವಾದಕ್ಕೆ ಕಾರಣವಾಗಿದೆ.
ಪ್ರತಿನಿತ್ಯ ಸಾವಿರಾರು ಭಕ್ತರು ಯಾವುದೇ ನೂಕು ನುಗ್ಗಲು ಇಲ್ಲದೇ ಸಾವಕಾಶವಾಗಿ ಪಡೆಯುತ್ತಿದ್ದ ದುರ್ಗೆಯ ದರ್ಶನಕ್ಕೆ ಈಗ ಮೊತ್ತ ವಿಧಿಸಲಾಗಿದೆ. ಕ್ಷೇತ್ರದಲ್ಲಿ ಇದೀಗ ಶೀಘ್ರ ದರ್ಶನ ವ್ಯವಸ್ಥೆಯನ್ನು ಜಾರಿ ಮಾಡಲಾಗಿದ್ದು, ಶೀಘ್ರ ದರ್ಶನ ಪಡೆಯುವ ಪ್ರತಿಯೋರ್ವ ಭಕ್ತನು ನೂರು ರೂಪಾಯಿ ಪಾವತಿಸಿ ದೇವಸ್ಥಾನದ ಒಳಗೆ ಪ್ರವೇಶ ಮಾಡಬಹುದಾಗಿದೆ.
ನವರಾತ್ರಿ ಯ ಬಳಿಕ ಈ ಹೊಸ ನಿಯಮವನ್ನು ಕ್ಷೇತ್ರದಲ್ಲಿ ತರಲಾಗಿದೆ. ಸಾವಿರಾರು ಭಕ್ತರು ಸೇರಿದರೂ ಯಾವುದೇ ಗೊಂದಲ, ನೂಕು ನುಗ್ಗಲು ಆಗದಂತೆ ನಡೆಯುತ್ತಿದ್ದ ವ್ಯವಸ್ಥೆಗೆ ಈಗ ಶೀಘ್ರ ದರ್ಶನ ಎಂಬುದನ್ನು ಸೇರಿಸಿ ನೂರು ರೂಪಾಯಿ ಮೊತ್ತ ಹಾಕಲಾಗುತ್ತಿದೆ. ಈ ಹಿಂದೆ ಪಾರ್ಕಿಂಗ್ ಮೊತ್ತವನ್ನು ಹಾಕಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ಮಾಡಿತ್ತು. ಈ ನಿಯಮಕ್ಕೆ ಕ್ಷೇತ್ರದ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಭಕ್ತರ ವಿರೋಧ ಹಿನ್ನಲೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಈ ನಿರ್ಧಾರವನ್ನು ಹಿಂಪಡೆದಿತ್ತು. ಈಗ ಶೀಘ್ರ ದರ್ಶನದ ಹೆಸರಿನಲ್ಲಿ ಮತ್ತೆ ಹಣ ಮಾಡುವ ದಂಧೆಗೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವುದು ಕ್ಷೇತ್ರದ ಭಕ್ತರ ಅಸಮಾಧಾನವಾಗಿದೆ.

ಆಡಳಿತ ಮಂಡಳಿ ವಾದವೇನು?
ಶುಕ್ರವಾರ ಅತೀ ಹೆಚ್ಚು ಭಕ್ತರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ರಜಾದಿನದಲ್ಲೂ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತದೆ. ಹೀಗಾಗಿ ಹಲವು ಭಕ್ತರಿಗೆ ಸರತಿಸಾಲಿನಲ್ಲಿ ನಿಂತು ದರ್ಶನ ಪಡೆಯಲು ಸಾಧ್ಯವಾಗದ ಕಾರಣ ಶೀಘ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ವಾದವಾಗಿದೆ.

ಶೀಘ್ರ ದರ್ಶನ ವ್ಯವಸ್ಥೆ ಮಾಡುವ ಅವಶ್ಯಕತೆ ಇಲ್ಲ
ಇತರ ದೇವಸ್ಥಾನದಲ್ಲಿ ಇರುವಂತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶೀಘ್ರ ದರ್ಶನ ವ್ಯವಸ್ಥೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ದೇವಳದ ಭಕ್ತರ ಅಭಿಪ್ರಾಯವಾಗಿದೆ. ದೇವಳದ ಒಳಾಂಗಣ ವಿಶಾಲವಾಗಿರೋದರಿಂದ ವಿಶೇಷ ದರ್ಶನದಲ್ಲಿ ಬರುವ ಭಕ್ತನಿಗೂ ಸಾಮಾನ್ಯ ಸರತಿಸಾಲಿನಿಂದ ಬರುವ ಭಕ್ತನಿಗೂ ಯಾವುದೇ ವ್ಯತ್ಯಾಸ ಇಲ್ಲದೇ ದೇವರ ದರ್ಶನವನ್ನು ಪಡೆಯಬಹುದಾಗಿದೆ. ನೇರವಾಗಿ ದೇವಸ್ಥಾನದ ಒಳಗೆ ಪ್ರವೇಶಕ್ಕೆ ಮಾತ್ರ ಶೀಘ್ರ ದರ್ಶನ ಟಿಕೆಟ್ ಸಹಾಯವಾಗಬಲ್ಲದು, ಅದರ ಹೊರತು ಇದರಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುವುದು ಕ್ಷೇತ್ರದ ಭಕ್ತರೋರ್ವರ ಅಭಿಪ್ರಾಯವಾಗಿದೆ.

ಲಕ್ಷಾಂತರ ಭಕ್ತರ ಭೇಟಿ
ನವರಾತ್ರಿ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಭಕ್ತರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕ್ಷೇತ್ರದಲ್ಲಿ ಹತ್ತು ದಿನಗಳ ಕಾಲ 43,366 ಹೂವಿನ ಪೂಜೆ ಸಲ್ಲಿಕೆಯಾಗಿದೆ. 23,601 ಕುಂಕುಮ ಸೇವೆಗಳು ಸಲ್ಲಿಕೆಯಾಗಿದೆ. ಆಯುಧ ಪೂಜೆಯ ದಿನ 2,636 ವಾಹನಗಳ ಪೂಜೆಯಾಗಿದೆ. ಶ್ರೀ ದೇವಿಗೆ ಭಕ್ತರಿಂದ 1549 ಸೀರೆಗಳು ಸಲ್ಲಿಕೆಯಾಗಿದೆ. ಹತ್ತು ದಿನಗಳ ಸಮಯದಲ್ಲಿ ಒಂದು ಸಾವಿರ ಭಕ್ತರು ಕ್ಷೇತ್ರದಲ್ಲಿ ಭಜನಾ ಸೇವೆ ಸಲ್ಲಿಸಿದ್ದಾರೆ. ಸಾವಿರಕ್ಕಿಂತಲೂ ಅಧಿಕ ವೇಷಧಾರಿಗಳು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ವಿಜಯದಶಮಿ ದಿನ ಮಕ್ಕಳಿಗೆ ಅಕ್ಷರಾಭ್ಯಾಸ
ವಿಜಯದಶಮಿಯ ದಿನ 88 ಅಕ್ಷರಾಭ್ಯಾಸವನ್ನು ಮಕ್ಕಳಿಗೆ ಮಾಡಲಾಗಿದೆ. ವಿಜಯದಶಮಿ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭಿಸಿದರೆ ಒಳ್ಳೆಯದು ಎಂಬ ಭಾವನೆ ಭಕ್ತರದ್ದಾಗಿದೆ. ಹೀಗಾಗಿ ದೇಗುಲದ ಮುಂಭಾಗದ ಗೋಪುರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತದೆ. ಹರಿವಾಣದಲ್ಲಿ ಬೆಳ್ತಿಗೆ ಅಕ್ಕಿ ಹಾಕಿ ಮಕ್ಕಳ ಕೈಗೆ ಹಳದಿಯ ತುಂಡನ್ನು ಕೊಟ್ಟು ಅಕ್ಕಿಯ ಮೇಲೆ ಅ ಆ ಇ ಈ ಮತ್ತು ಓಂ ಎಂದು ಬರೆಸಲಾಗುತ್ತದೆ. ಬಳಿಕ ದೇವರ ಪ್ರಸಾದವನ್ನು ಮಕ್ಕಳಿಗೆ ನೀಡಲಾಗುತ್ತದೆ.
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications