ಕರಾವಳಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೋಸ್ಕರ ದೀಪಾವಳಿ ಆಚರಣೆ
ಮಂಗಳೂರು, ಅಕ್ಟೋಬರ್, 23: ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಆದರೆ ಶಿಕ್ಷಣಕ್ಕಾಗಿ ಮನೆಯವರಿಂದ ದೂರ ಇರುವ ವಿದ್ಯಾರ್ಥಿಗಳು ಮಾತ್ರ ಹಬ್ಬದಿಂದ ವಂಚಿತರಾಗುತ್ತಾರೆ. ಮಂಗಳೂರಿಗೆ ದೇಶ -ವಿದೇಶಗಳಿಂದ ಲಕ್ಷಾಂತರ ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಇವರೆಲ್ಲರೂ ದೀಪಾವಳಿಯ ಸಂಭ್ರಮದಿಂದ ವಂಚಿತರಾಗುತ್ತಾರೆ. ಇದಕ್ಕಾಗಿಯೇ ಕರಾವಳಿ ಗ್ರೂಪ್ ಆಫ್ ಕಾಲೇಜು ಕ್ಯಾಂಪಸ್‌ನಲ್ಲೇ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದು, ಗಮನ ಸೆಳೆದಿಂದ.
ದೀಪಾವಳಿಯನ್ನು ಎಲ್ಲೆಡೆ ದೀಪ ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದೇಶದ ವಿವಿಧೆಡೆಯಿಂದ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಕ್ಕೆ ಬರುವ ವಿದ್ಯಾರ್ಥಿಗಳಿಗೆ ದೀಪಾವಳಿ ಸಂದರ್ಭದಲ್ಲಿ ತಮ್ಮ ಊರಿಗೆ ಹೋಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿಯೇ ಮಂಗಳೂರಿನ ಕೊಟ್ಟಾರದಲ್ಲಿರುವ ಕರಾವಳಿ ಗ್ರೂಪ್ ಆಫ್ ಕಾಲೇಜು ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದೆ. ದೀಪಾವಳಿ ರಜೆಯಲ್ಲಿ ಊರಿಗೆ ಹೋಗದ ವಿದ್ಯಾರ್ಥಿಗಳಿಗೆಂದು ಕಾಲೇಜಿನ ಆವರಣದಲ್ಲೇ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಯಿತು. ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಆಯಾ ಪ್ರದೇಶದ ಆಚರಣೆಯನ್ನು ತಮ್ಮ ನೃತ್ಯ ವೈವಿಧ್ಯದ ಮೂಲಕ ತೋರಿಸಿದರು. ಇನ್ನು ಕೆಲವರು ಜಾನಪದ, ಫಿಲ್ಮಿ ಡ್ಯಾನ್ಸ್, ಫ್ಯಾಷನ್ ಶೋ ಪ್ರದರ್ಶನವನ್ನು ತೋರಿದರು.

ಕರಾವಳಿ ಗ್ರೂಪ್ ಆಫ್ ಕಾಲೇಜಿನ ವಿಶೇಷತೆ
ಎಲ್ಲಾ ವಿದ್ಯಾರ್ಥಿಗಳು ಜಾತಿಮತವನ್ನು ಮರೆತು ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇನ್ನು ಕೆಲವು ಆಡಳಿತ ಮಂಡಳಿಗಳು ಕೇವಲ ಶಿಕ್ಷಣ ನೀಡಿ ಕೈತೊಳೆದುಕೊಳ್ಳುತ್ತೆ. ಆದರೆ ಕರಾವಳಿ ಗ್ರೂಪ್ ಆಫ್ ಕಾಲೇಜು ಮಂಡಳಿ ಮಾತ್ರ ವಿದ್ಯಾರ್ಥಿಗಳಿಗೆ ಮನೆಯವರಿಂದ ದೂರ ಇದ್ದೇವೆ, ಹಬ್ಬಗಳನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ ಅನ್ನುವ ಕೊರಗನ್ನು ದೂರ ಮಾಡುವಲ್ಲಿ ಯಶಸ್ವಿ ಆಗಿದೆ.

ಗಮನ ಸೆಳೆಯಲಿರುವ ಹೊಂಡೆಯಾಟ
ದೀಪಾವಳಿ ಹಬ್ಬದ ಪ್ರಯುಕ್ತ ವಿವಿಧ ಕಡೆ ಆಯಾ ಸಂಪ್ರದಾಯದಂತೆ ಕ್ರೀಡೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಅದರಂತೆಯೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಹೊಂಡೆ ಆಟವೊಂದನ್ನು ಆಡಲಾಗುತ್ತದೆ. ವೀರತ್ವ ಪ್ರತೀಕವಾಗಿ ಹಾಗೂ ಸೌಹಾರ್ದತೆಯ ಸಂಕೇತವಾಗಿ ಹೊಂಡೆಕಾಯಿಯಿಂದ ಪರಸ್ಪರ ಹೊಡೆದಾಡಿಕೊಳ್ಳುವ ಸಂಪ್ರದಾಯವು ಎಲ್ಲರ ಗಮನ ಸೆಳೆಯುತ್ತದೆ. ಅಂಕೋಲಾ ಪಟ್ಟಣದಲ್ಲಿ ಕಳೆದ ಹಲವಾರು ವರ್ಷದಿಂದ ಕೋಮಾರಪಂಥ ಸಮಾಜದವರು ದೀಪಾವಳಿಯ ಬಲಿಪಾಡ್ಯ ದಿನದಂದು ಹೊಂಡೆ ಆಟವನ್ನು ಆಡುತ್ತಾರೆ. ವೀರತ್ವದ ಪ್ರತೀಕ, ಸೌಹಾರ್ದತೆಯ ಸಂಕೇತದವಾದ ಹೊಂಡೆಹಬ್ಬವನ್ನು ಅಕ್ಟೋಬರ್ 26ರ ಬುಧವಾರದಂದು ಆಚರಿಸಲಾಗುತ್ತಿದೆ. ದೀಪಾವಳಿಯ ಬಲಿ ಪಾಡ್ಯಮಿಯ ದಿನದಂದು ಇಲ್ಲಿನ ಕ್ಷತ್ರೀಯ ಕೋಮಾರಪಂಥ ಸಮಾಜದ ಬಾಂಧವರು ಆಡುವ ರೋಮಾಂಚನಕಾರಿ ಈ ಹೊಂಡೆ ಹಬ್ಬವನ್ನು ಸಹಸ್ರಾರು ಜನ ವೀಕ್ಷಿಸಲು ಕಾತುರದಲ್ಲಿ ಕಾಯುತ್ತಿದ್ದಾರೆ.

ಸಾಮರಸ್ಯಕ್ಕೆ ಸಾಕ್ಷಿಯಾದ ಹೊಂಡೆಯಾಟ
ಕೋಮಾರಪಂಥ ಸಮಾಜದವರು ಮೂಲತಃ ಕ್ಷತ್ರಿಯ ವರ್ಗಕ್ಕೆ ಸೇರಿದವರಾಗಿದ್ದು, ಯುದ್ಧದ ಸಂದರ್ಭದಲ್ಲಿ ಕೋಮಾರಪಂಥ ಸಮಾಜ ತನ್ನದೇ ಆದ ಕೊಡುಗೆ ನೀಡಿದ ಐತಿಹಾಸಿಕ ಹಿನ್ನೆಲೆಗಳಿವೆ. ಕೋಮಾರಪಂಥ ಸಮಾಜ ಅಂದು ನಾಡಿನ ರಕ್ಷಣೆಗೆ ಯುದ್ಧದಲ್ಲಿ ತೋರಿದ ಸಾಹಸದ ಸಂಕೇತವಾಗಿ ಇಂದು ಪ್ರಸ್ತುತವಾಗಿ ಹೊಂಡೆಕಾಯಿಯಿಂದ ಪರಸ್ಪರ ಹೊಡೆದಾಡುವುದರ ಮೂಲಕ ತಮ್ಮ ಸಂಪ್ರದಾಯವನ್ನು ಅನಾವರಣಗೊಳಿಸಲಿದೆ. ಈ ಆಟದಲ್ಲಿ ಸಮಾಜದ ಸೌಹಾರ್ದತೆಯ ಸಂಕೇತವನ್ನು ಕಾಣಬಹುದಾಗಿದೆ. ಎಲ್ಲ ಸಮುದಾಯದವರ ಸಾಮರಸ್ಯಕ್ಕೆ ಸಾಕ್ಷಿಯಾದ ಹೊಂಡೆಯಾಟವು ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಹೊಂಡೆಯಾಟವನ್ನು ಆಡುವ ವೀಧಾನ
ಈ ಹಬ್ಬದ ನಿಯಮದಂತೆ ಮಂಡಿಯ ಕೆಳಭಾಗಕ್ಕೆ ಹೊಡೆಯಬೇಕೆನ್ನುವ ನಿಯಮ ಪಾಲಿಸಬೇಕಾಗುತ್ತದೆ. ಆದರೂ ಕೆಲವೊಮ್ಮೆ ಗುರಿತಪ್ಪಿ ಎದುರಾಳಿಯು ತೀವ್ರ ತರಹದ ಹೊಡೆತಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇವುಗಳನ್ನು ನಿಯಂತ್ರಿಸಲು ಸಮಾಜದ ಮುಖಂಡರು ನಿರ್ಣಾಯಕರಾಗಿರುತ್ತಾರೆ. ಎರಡು ಪಂಗಡಗಳಲ್ಲಿ ಯಾರು ಸಮರ ವೀರರು ಎನ್ನುವುದನ್ನು ಮುಖಂಡರ ತೀರ್ಮಾನದ ಮೂಲಕ ನಿರ್ಧಾರವಾಗುತ್ತದೆ. ಹೊಂಡೆ ಹಬ್ಬದಲ್ಲಿ ಗೆದ್ದ ಪಂಗಡಕ್ಕೆ ದೊಡ್ಡ ಮೊಗೆ ಕಾಯಿಯನ್ನು ನೀಡಿದರೆ, ಎರಡನೇ ಪಂಗಡಕ್ಕೆ ಸಣ್ಣ ಮೊಗೆಕಾಯಿಯನ್ನು ನೀಡುವ ಸಂಪ್ರದಾಯ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ.
ಈ ಹಬ್ಬದ ನಿಯಮದಂತೆ ಮಂಡಿಯ ಕೆಳಭಾಗಕ್ಕೆ ಹೊಡೆಯಬೇಕೆನ್ನುವ ನಿಯಮ ಪಾಲಿಸಬೇಕಾಗುತ್ತದೆ. ಆದರೂ ಕೆಲವೊಮ್ಮೆ ಗುರಿತಪ್ಪಿ ಎದುರಾಳಿಯು ತೀವ್ರ ತರಹದ ಹೊಡೆತಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇವುಗಳನ್ನು ನಿಯಂತ್ರಿಸಲು ಸಮಾಜದ ಮುಖಂಡರು ನಿರ್ಣಾಯಕರಾಗಿರುತ್ತಾರೆ. ಎರಡು ಪಂಗಡಗಳಲ್ಲಿ ಯಾರು ಸಮರ ವೀರರು ಎನ್ನುವುದನ್ನು ಮುಖಂಡರ ತೀರ್ಮಾನದ ಮೂಲಕ ನಿರ್ಧಾರವಾಗುತ್ತದೆ. ಹೊಂಡೆ ಹಬ್ಬದಲ್ಲಿ ಗೆದ್ದ ಪಂಗಡಕ್ಕೆ ದೊಡ್ಡ ಮೊಗೆ ಕಾಯಿಯನ್ನು ನೀಡಿದರೆ, ಎರಡನೇ ಪಂಗಡಕ್ಕೆ ಸಣ್ಣ ಮೊಗೆಕಾಯಿಯನ್ನು ನೀಡುವ ಸಂಪ್ರದಾಯ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ.
ನಗರದ ಮಧ್ಯವರ್ತಿ ಸ್ಥಳಗಳ ನಾಲ್ಕು ಕಡೆಗಳಲ್ಲಿ ಹೊಂಡೆಯೊಂದಿಗೆ ಹೋರಾಟಕ್ಕಿಳಿದು ತಮ್ಮ ಕ್ಷತ್ರೀಯ ವರ್ಚಸನ್ನು ತೋರ್ಪಡಿಸುತ್ತಾರೆ. ನಂತರ ಎರಡು ಪಂಗಡಗಳು ಒಂದಾಗಿ ಊರಿನ ದೊಡ್ಡ ದೇವರನಿಸಿಕೊಂಡ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಹೋರಾಟದ ನೆನಪುಗಳನ್ನು ಮೆಲಕು ಹಾಕುತ್ತಾರೆ. ಅಲ್ಲದೆ ಹೊಂಡೆ ಹಬ್ಬದ ಸಮಯದಲ್ಲಿ ಆದ ಸಣ್ಣಪುಟ್ಟ ತಪ್ಪುಗಳನ್ನು ಒಪ್ಪಿಕೊಂಡು ಸಮಾಜದವರೆಲ್ಲ ಒಂದಾಗಿ ಬಾಳೋಣ ಎನ್ನುವ ಸಾಮರಸ್ಯವನ್ನು ಮೂಡಿಸುತ್ತಾರೆ. ಅನಾದಿಕಾಲದಿಂದಲೂ ಕೋಮಾರಪಂಥ ಸಮಾಜ ಹೊಂಡೆ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದು, ಇದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಇಂದಿನ ಆಧುನಿಕ ಯುಗದಲ್ಲೂ ಈ ಸಮಾಜ ತಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಶ್ರೀವೆಂಕರಮಣ ದೇವಾಲಯದ ಧರ್ಮದರ್ಶಿಗಳು ಹೇಳುತ್ತಿದ್ದಾರೆ.












Click it and Unblock the Notifications