ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯ, ನರಿಮೊಗರುವಿನಲ್ಲಿ ತಪ್ಪಿದ ಭಾರೀ ಅನಾಹುತ
ಮಂಗಳೂರು, ನವೆಂಬರ್ 14:ರೈಲು ಬರುವ ಸಂದರ್ಭದಲ್ಲಿ ರೈಲ್ವೆ ಸಿಬ್ಬಂದಿ ರೈಲ್ವೆ ಗೇಟ್ ಹಾಕದೇ ನಿರ್ಲಕ್ಷ್ಯ ತೋರಿದ ಆಘಾತಕಾರಿ ಘಟನೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಪುತ್ತೂರು ತಾಲೂಕಿನ ಕಬಕ ಪುತ್ತೂರು ನೆಟ್ಟಣ ಎಂಬಲ್ಲಿ ಈ ಅಚಾತುರ್ಯ ನಡೆದಿದೆ.
ಇಲ್ಲಿಯ ನರಿಮೊಗರುವಿನಲ್ಲಿ ರೈಲ್ವೆ ಗೇಟ್ ಹಾಕದೆ ಇರುವ ಸಂದರ್ಭದಲ್ಲಿ ರೈಲು ಚಲಿಸಿದೆ. ಆದರೆ ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ. ರೈಲು ಬರುವ ಸಮಯದಲ್ಲಿ ಗೇಟು ಹಾಕಬೇಕಾದ ಸಿಬ್ಬಂದಿ ಗೇಟು ಹಾಕದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನರಿಮೊಗರು ಸಾಂದೀಪಿನಿ ವಿದ್ಯಾಸಂಸ್ಥೆ ಬಳಿ ಇರುವ ರೈಲ್ವೆ ಗೇಟ್ ಅನ್ನು ಹಾಕದೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ದುರಂತ ತಪ್ಪಿದೆ. ರೈಲ್ವೆ ಗೇಟ್ ಮುಚ್ಚದ ಕಾರಣ ಮಹಿಳೆಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ಹಳಿ ದಾಟಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ರೈಲು ಬರುವ ಶಬ್ದ ಮಹಿಳೆಗೆ ಕೇಳಿದೆ.

ಆಗ ಅವರು ಕೂಡಲೇ ಹಿಂದೆ ಸರಿದು ಪಾರಾಗಿದ್ದಾರೆ. ಒಂದು ವೇಳೆ ಅವರು ಮುಂದೆ ಚಲಿಸುತ್ತಿದ್ದರೆ ಭಾರೀ ಅಪಾಯ ಸಂಭವಿಸುತ್ತಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.












Click it and Unblock the Notifications