ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಮಂಗಳೂರು, ಸೆಪ್ಟೆಂಬರ್ 20: ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇದೀಗ ಕೆಸ್‌ಆರ್‌ಟಿಸಿ ಬಸ್‌ ಹಾಗೂ ಕಾರು ಡಿಕ್ಕಿಯಾಗಿವೆ. ಪರಿಣಾಮ ಚಾಲಕಸಹಿತ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಕೆಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ಮಧ್ಯ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಚಾಲಕಸಹಿತ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಟ್ವಾಳದ ಮಣಿನಾಲ್ಕೂರು ಗ್ರಾಮದ ಉಜಿರಂಡಿ ಪಲ್ಕೆಯ ಪಲ್ಲದಲ್ಲಿ ನಡೆದಿದೆ.

Dakshina Kannada Two Seriously Injured as KSRTC Bus Collides with Car in Bantwal

ಘಟನೆಯಲ್ಲಿ ಗಾಯಗೊಂಡ ಕಾರು ಚಾಲಕ ಕಾವಳಮೂಡೂರು ಗ್ರಾಮದ ಮದಡ್ಕ ನಿವಾಸಿ ಧನುಷ್ ಹಾಗೂ ಪರಾರ್ದೋಟ್ಟು ನಿವಾಸಿ ದೀಕ್ಷಿತ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸಿಕೊಂಡಿದ್ದಾರೆ.

ಚಿಕಿತ್ಸೆ ವೆಚ್ಚ ಹೆಚ್ಚಳ: ಇನ್ನು ಇದೀಗ ರಸ್ತೆ ಅಪಘಾತ ಸಂತ್ರಸ್ತರಿಗೆ ನೀಡುತ್ತಿದ್ದ ನಗದು ರಹಿತ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರ್ಕಾರವು 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂಪಾವರೆಗೂ ನಗದು ರಹಿತ ಚಿಕಿತ್ಸೆಯನ್ನು ನೀಡುತ್ತಿತ್ತು. ಅಪಘಾತ ಸಂಭವಿಸಿದ ಒಂದು ವಾರದವರೆಗೂ ಈ ಸೌಲಭ್ಯ ಇತ್ತು.

ಇದೀಗ ರಾಜ್ಯ ಸರ್ಕಾರ ಅಪಘಾತ ಆಗಿ ಬಹುಅಂಗಾಂಗಗಳ ವೈಫಲ್ಯ ಆದರೆ, ಚಿಕಿತ್ಸೆಗಾಗಿ 1,00,000 ರೂಪಾಯಿ ಟಾಪ್ ಅಪ್‌ ನೀಡುವುದಾಗಿ ಘೋಷಣೆ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಪಘಾತ ಸಂತ್ರಸ್ತ ಯೋಜನೆ ಅಡಿ ಸಂತ್ರಸ್ತರಿಗೆ 2.5 ಲಕ್ಷ ರೂಪಾಯಿವರೆಗೂ ಚಿಕಿತ್ಸೆ ನೆರವು ಸಿಗಲಿದೆ. ರಸ್ತೆ ಅಪಘಾತದಿಂದ ಆಗುವ ಸಾವುಗಳನ್ನ ನಿಯಂತ್ರಣ ಮಾಡುವ ಚಿಕಿತ್ಸಾ ವೆಚ್ಚದ ಅನುದಾನ ಹೆಚ್ಚಳ ಮಾಡಲಾಗಿದೆ.

ರಾಜ್ಯದಲ್ಲಿ ಪ್ರತಿ ವರ್ಷಕ್ಕೆ ಸುಮಾರು 40,000 ರಸ್ತೆ ಅಪಘಾಗಳು ದಾಖಲಾಗುತ್ತುವೆ. ಪ್ರತಿ ವರ್ಷ ಸುಮಾರು 11,000 ಜನ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ಗಂಟೆಗೆ 4 ರಿಂದ 5 ರಸ್ತೆ ಅಪಘಾತಗಳು ದಾಖಲಾಗುತ್ತಿವೆ ಎಂದು ತಿಳಿದುಬಂದಿದೆ. ಇದೀಗ ರಸ್ತೆ ಅಪಘಾತ ಸಂಸ್ತ್ರಸ್ತರಿಗೆ ನೀಡಲಾಗುತ್ತಿದ್ದ ಚಿಕಿತ್ಸೆ ವೆಚ್ಚವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಅಪಘಾತಕ್ಕಳಗಾದವರಿಗೆ ಚಿಕಿತ್ಸೆಗೆ ತುಂಬಾ ಸಹಕಾರಿ ಆದಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+