ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಫೇಲ್ ಹಗರಣದ ಮಾಹಿತಿ ಕೈಪಿಡಿ ಮನೆ ಮನೆಗೆ ತಲುಪಿಸಲು ಕಾಂಗ್ರೆಸ್ ತಯಾರಿ

|
Google Oneindia Kannada News

ಮಂಗಳೂರು, ಮಾರ್ಚ್ 17: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ವಾಕ್ಸಮರ ಬಿರುಸುಗೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಫೇಲ್ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಲು ಕಾಂಗ್ರೆಸ್ ಮುಂದಾಗಿದೆ.

ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಮಾಹಿತಿ ಕೈಪಿಡಿಯನ್ನು ಮಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು.

'ರಾಹುಲ್ ರಫೆಲ್ ಅಂದ್ರೆ 3 ಚಕ್ರದ ಸೈಕಲ್ ಅಂದುಕೊಂಡಿದ್ದಾರೆ''ರಾಹುಲ್ ರಫೆಲ್ ಅಂದ್ರೆ 3 ಚಕ್ರದ ಸೈಕಲ್ ಅಂದುಕೊಂಡಿದ್ದಾರೆ'

ರಫೇಲ್ ಖರೀದಿಯಲ್ಲಿ 30 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್ ರಫೇಲ್ ಹಗರಣದ ಕುರಿತು 16 ಪುಟಗಳ ಮಾಹಿತಿ ಕೈಪಿಡಿ ಪುಸ್ತಕವನ್ನು ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕಾಂಗ್ರೆಸ್ ಹಿರಿಯ ಮುಖಂಡ ವಿಆರ್ ಸುದರ್ಶನ್ ಪುಸ್ತಕ ಬಿಡುಗಡೆ ಮಾಡಿದರು.

Dakshina Kannada Congress committee released hand book about Refale deal

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಈ ರಫೇಲ್ ಹಗರಣದ ಕುರಿತು 5 ಸಾವಿರ ಪ್ರತಿಯನ್ನು ಮನೆ ಮನೆಗೆ ತಲುಪಿಸಲಾಗುವುದೆಂದು ಹೇಳಿದರು.

 ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ

ನಂತರ ಜನಾರ್ಧನ ಪೂಜಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಯಾರನ್ನೂ ಕುದ್ರೋಳಿ ದೇವಾಲಯಕ್ಕೆ ಹೋಗದಂತೆ ತಡೆದಿಲ್ಲ. ಈ ವಿಚಾರವನ್ನು ದೇವರಿಗೆ ಬಿಟ್ಟಿದ್ದೇನೆ. ಸಿದ್ದರಾಮಯ್ಯರನ್ನು ಹೋಗದಂತೆ ತಡೆಯುವಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ ಎಂದು ತಿಳಿಸಿದರು.

 ರಫೇಲ್ ಖರೀದಿ: ಮಾಧ್ಯಮಗಳು ಬೆದರಿಕೆಗೆ ಜಗ್ಗಬಾರದು ಎಂದ ಎನ್ ರಾಮ್ ರಫೇಲ್ ಖರೀದಿ: ಮಾಧ್ಯಮಗಳು ಬೆದರಿಕೆಗೆ ಜಗ್ಗಬಾರದು ಎಂದ ಎನ್ ರಾಮ್

ಈ ಹಿಂದೆಯೂ ನನ್ನ ಮೇಲೆ ಅವರು ಆರೋಪಿಸುತ್ತಲೇ ಬಂದಿದ್ದಾರೆ. ಅವರಿಗೆ ನನ್ನನ್ನು ಕಂಡರೆ ಮೊದಲೇ ಆಗಲ್ಲ. ಮಾಧ್ಯಮದವರು ಅವರನ್ನು ಮತ್ತೆ ಮತ್ತೆ ಕೆಣಕಿ ಈ ಬಗ್ಗೆ ಪ್ರಶ್ನೆ ಮಾಡುತ್ತಾರೆ ಎಂದು ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ವಿ‌ಆರ್ ಸುದರ್ಶನ್ ಮೈತ್ರಿ ಸರಕಾರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಮಾ.19ರಂದು ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಇದೆ. ಒಂದೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆಯಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಗೊಂದಲವಿಲ್ಲ. ಈಗಾಗಲೇ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆ ಆಗಿದೆ ಎಂದು ಸ್ಪಷ್ಟಪಡಿಸಿದರು.

English summary
Dakshina Kannada Congress committee released hand book about Refale deal in Mangaluru Congress office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X