• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು: ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ, 5 ಆರೋಪಿಗಳ ಬಂಧನ

|

ಮಂಗಳೂರು, ಜುಲೈ 03: ತಮ್ಮದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಈ ವರೆಗೆ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಪುತ್ತೂರು ತಾಲ್ಲೂಕಿನ ಬಜತ್ತೂರು ಗ್ರಾಮದ ಗಾಣದ ಮೂಲೆ ಮನೆ ನಿವಾಸಿ ಗುರುನಂದನ್ ಅಲಿಯಾಸ್ ರಾಧಾಕಷ್ಣ, ಅರ್ಯಾಪು ಗ್ರಾಮದ ಪಿಲಿಗುಂಡ ಮನೆ ನಿವಾಸಿ ಸುನಿಲ್ ಅಲಿಯಾಸ್ ಕಾಂತಪ್ಪ ಗೌಡ, ಬಂಟ್ವಾಳ ತಾಲ್ಲೂಕಿನ ಪೆರ್ನೆ ನಿವಾಸಿಗಳಾದ ಪ್ರಜ್ವಲ್ ಅಲಿಯಾಸ್ ನಾಗೇಶ್ ನಾಯ್ಕ್‌ ಮತ್ತು ಕಿಶನ್ ಅಲಿಯಾಸ್ ಸದಾಶಿವ, ಬರಿಮಾರು ಗ್ರಾಮದ ಬಲ್ಯ ಮನೆ ನಿವಾಸಿ ಪ್ರಖ್ಯಾತ್ ಅಲಿಯಾಸ್ ಸುಬ್ಬಣ್ಣ ಶೆಟ್ಟಿ ಎಂಬುವರನ್ನು ಈ ವರೆಗೆ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್; ಸು ಮೋಟೊ ಪ್ರಕರಣ

ಈ ಯುವಕರು ಗಾಂಜಾ ಮತ್ತಿನಲ್ಲಿ ತಮ್ಮದೆ ಕಾಲೇಜಿನ ಸಹಪಾಠಿ ವಿದ್ಯಾರ್ಥಿನಿಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಆಕೆಗೆ ಮತ್ತು ಬರುವಂತೆ ಮಾಡಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಈಗ ಆರೋಪಿಗಳನ್ನು ಬಂಧಿಸಿರುವ ದಕ್ಷಿಣ ಕನ್ನಡ ಪೊಲೀಸರು, ಅತ್ಯಾಚಾರದ ವಿಡಿಯೋ ಪ್ರಸಾರ ಮಾಡುವವರ ಮೇಲೆಯೂ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

ಮಂಗಳೂರಲ್ಲಿ ಚಾಕು ಇರಿತ : ನರ್ಸ್ ನಿಮ್ಮಿ ಕಾರ್ಯಕ್ಕೆ ಶ್ಲಾಘನೆ

ವಿದ್ಯಾರ್ಥಿಯನ್ನು ಅಮಲು ಬರಿಸಿ ಅತ್ಯಾಚಾರ ಮಾಡಿರುವ ವಿಡಿಯೋವನ್ನು ಯಾರೂ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣ ಮಾಡಬಾರದು, ಹಾಗೇನಾದರೂ ಮಾಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

English summary
Dakshin Kannada police arrested five accused in Mangaluru student gang rape case. district police SP said, spreading the gang rape video in social media is also crime, we will take action against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X