ಮತ್ತೆ ಮುನ್ನಲೆಗೆ ಬಂತು ದೈವಾರಾಧನೆ ವಿವಾದ: ದೈವಾರಾಕರಿಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಾಥ್

ಮಂಗಳೂರು, ಫೆಬ್ರವರಿ.18: ಕಾಂತಾರ ಸಿನಿಮಾ ನಂತರ ಕರಾವಳಿ ದೈವಾರಾದನೆ ಎಷ್ಟು ಪ್ರಸಿದ್ಧಿ ಪಡೆಯಿತ್ತೋ ಅಷ್ಟೇ ಅವಹೇಳನಕ್ಕೆ ಒಳಗಾಯಿತು ಎನ್ನುವ ಅಪವಾದ ಇದೆ. ಸಿನಿಮಾ ಧಾರಾವಾಹಿ ಹಾಗೂ ಸಭಾ ಕಾರ್ಯಕ್ರಮದಲ್ಲಿ ದೈವಾರಾದನೆಗೆ ಅಪಮಾನ ಆಗುತ್ತಿದೆ ಅಂತ ದೈವಾರಾಕರು ಖಂಡಿಸಿದ್ದರು. ಸದ್ಯ ದೈವಾರಾಕರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಬೆಂಬಲ ನೀಡಿದ್ದು, ದೈವಾರಾದನೆ ಅಪಮಾನ ಆದ್ರೆ ಸಹಿಸುವುದಿಲ್ಲ ಅಂತ ಎಚ್ಚರಿಕೆ ನೀಡಿದೆ.

ಕರಾವಳಿಯಲ್ಲಿ ದೈವಾರಾದನೆಗೆ ತನ್ನದೇ ಆದ ಮಹತ್ವ ಇದೆ. ಕರಾವಳಿಗೆ ಮಾತ್ರ ಸೀಮಿತ ಆಗಿದ್ದ ದೈವಾರಾದನೆ ಕಾಂತಾರ ಸಿನಿಮಾ‌ ಬಳಿಕ ಜಗತ್ಪ್ರಸಿದ್ಧ ಆಯ್ತು ಆದ್ರೆ ಕೆಲವೊಂದು ಅಪವಾದಗಳು ಬಂತು.. ಕಾಂತಾರ ನಂತರ ಸಿನಿಮಾ, ನಾಟಕ, ಸಭಾ ಕಾರ್ಯಕ್ರಮ, ರೀಲ್ಸ್‌ಗಳಲ್ಲಿ ದೈವದ ವೇಷ ತೊಟ್ಟು ನರ್ತಿಸುವುದು ಶುರುವಾಗಿದೆ.

Daivaradhane is not an object of display says Sharan Pumpwell

ಈ ಘಟನೆಗಳು ದೈವಾರಾಕರ ಆಕ್ರೋಶಕ್ಕೆ ಕಾರಣ ಆಗಿದೆ. ಈ ಬಗ್ಗೆ ದೈವಾರಾಕರು ಯಾವುದೇ ಮನವಿ ನೀಡಿದ್ದರೂ ಕಮ್ಮಿ ಆಗಿಲ್ಲ. ಇವುಗಳ ಜೊತೆಗೆ ಇತ್ತೀಚಿನ ಕನ್ನಡ ಖಾಸಗಿ ವಾಹಿನಿಯ ಧಾರಾವಾಹಿಯಲ್ಲೂ ದೈವಾರಾದನೆ ದೃಶ್ಯ ತೋರಿಸಲಾಗಿದ್ದು ಇದರಿಂದ ದೈವಾರಾಕರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ದೈವಾರಾಕರಿಗೆ ವಿಎಚ್‌ಪಿ, ಭಜರಂಗದಳ ಸಾಥ್

ಇನ್ನೂ "ದೈವಾರಾಕರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಾಥ್ ನೀಡಿದೆ. ಮುಂದೆ ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಮುತ್ತಿಗೆ ಹಾಕುತ್ತೇವೆ. ನಟ ರಿಷಬ್ ಶೆಟ್ಟಿಗೂ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದೆ ಸಿನೆಮಾದಲ್ಲಿ ದೈವರಾಧನೆಯ ಪ್ರದರ್ಶನವಾಗಬಾರದು. ಪ್ರದರ್ಶನವಾದ್ರೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ" ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್‌ವೆಲ್ ಎಚ್ಚರಿಕೆ ನೀಡಿದ್ದಾರೆ.

Daivaradhane is not an object of display says Sharan Pumpwell

"ಯಾವುದೇ ಕಾರಣಕ್ಕೂ ದೈವಾರಾಧನೆ ದೃಶ್ಯಗಳನ್ನೊಳಗೊಂಡ ಧಾರಾವಾಹಿ ತೆರೆ ಮೇಲೆ ಬರಬಾರದು. ಪ್ರದರ್ಶನವಾದರೆ ಬೆಂಗಳೂರಿನಲ್ಲಿ ಮುತ್ತಿಗೆ ಹಾಕುತ್ತೇವೆ" ಅಂತ ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪಂಪ್‌ವೆಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ, ದೈವಾರಾದನೆ ಜನಪ್ರಿಯ ಆದಂತೆ, ಅವಹೇಳನ ಆಗುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ಮುಂದಾದರೂ ದೈವಾರಾದನೆಗೆ ‌ಆಗುವ ಅವಹೇಳನ ನಿಲ್ಲಲ್ಲಿ ಎನ್ನುವ ಮಾತು ಸಾರ್ವಜನಿಕ ವಲಯದಲ್ಲೂ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+