ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಲಯಾಳಂ ಸೂಚನಾ ಫಲಕ ಅಳವಡಿಕೆ: ಸದಾನಂದ ಗೌಡ ಹೇಳಿದ್ದೇನು?
Mangaluru Rilway Station: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಮಲಯಾಳಂ ಸೂಚನಾ ಫಲಕವನ್ನು ಹಾಕಲಾಗಿದೆ. ಇದು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಮಾಜಿ ಸಿಎಂ ಸದಾನಂದ ಗೌಡ ಅವರು ಕೂಡ ತಮ್ಮ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಹಲವರು ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ರೈಲು ನಿಲ್ದಾಣಗಳು ದಕ್ಷಿಣ ರೈಲ್ವೆಯ ಅಡಿಯಲ್ಲಿ ಬರುತ್ತವೆ. ಆದರೆ ಅವುಗಳು ಕರ್ನಾಟಕದ ಮಂಗಳೂರಿನಲ್ಲಿವೆ. ಭಾರತೀಯ ರೈಲ್ವೆ ಮಾನದಂಡಗಳ ಪ್ರಕಾರ, ಇಲ್ಲಿನ ರೈಲ್ವೆ ನಿಲ್ದಾಣಗಳಲ್ಲಿನ ಸೂಚನಾ ಫಲಕಗಳು ಇಂಗ್ಲಿಷ್, ಹಿಂದಿ ಮತ್ತು ರಾಜ್ಯದ ಅಧಿಕೃತ ಭಾಷೆ ಕನ್ನಡದಲ್ಲಿರಬೇಕು. ಇದೀಗ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಹಾಕಿರುವ ಮಲಯಾಳಂ ಬೋರ್ಡ್ ಅನ್ನು ತೆಗೆದುಹಾಕಿಸುವಂತೆ ಟ್ವೀಟ್ ಮೂಲಕ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಮಲಯಾಳಂ ಬೋರ್ಡ್ ತೆಗೆಸಿ: ಇನ್ನು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಮಂಗಳೂರು ಮೂಲದವರೊಬ್ಬರು, "ದಕ್ಷಿಣ ಕನ್ನಡದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಟಿಕೆಟ್ ಕೌಂಟರ್ ಕಟ್ಟಡದಲ್ಲಿ ಇಲ್ಲಿನ ಪ್ರಾದೇಶಿಕ ಭಾಷೆ ಕನ್ನಡದ ಬದಲು ಮಲಯಾಳಂನಲ್ಲಿ ಬೋರ್ಡ್ ಹಾಕಲಾಗಿದೆ. ಇದು ತುಳು ಮತ್ತು ಕನ್ನಡವನ್ನು ಬಳಸುವ ಸ್ಥಳೀಯರಿಗೆ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಇದನ್ನು ತೆಗೆದುಹಾಕಸಿ," ಎಂದು ಅಶ್ವಿನಿ ವೈಷ್ಣವ್ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಅಧಿಕಾರಿಗೆ ಗುಮ್ಮಿದ ನೆಟ್ಟಿಗರು: ಮತ್ತೊಬ್ಬರು ಮಲಯಾಳಂ ಬೋರ್ಡ್ ಕಿತ್ತೆಸೆದು ಕನ್ನಡ ಬೋರ್ಡ ಅನ್ನು ಯಾಕೆ ಹಾಕಬಾರದು ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಅದು ಮಂಗಳೂರು, ಸ್ವಲ್ಪ ಅರಿವು ಇರಲಿ ನೀವೆ ಕನ್ನಡ ಹೆಸರು ಮರೆತು, ಬೇರೆಯವರಿಗೆ ಕನ್ನಡ ಬಳಕೆಯ ಉಪದೇಶ ಮಾಡಿದರೆ ಹೇಗೆ ಎಂದು ರಾಜ್ಯದಲ್ಲಿನ ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳಿಗೆ ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಗಂಚಾಲಿ ಕರ್ನಾಟಕದಿಂದ ಆಚೆ ಇಟ್ಕೊಳ್ಳಿ: ಇಂತಹ ಕುಚೇಷ್ಟೆಗಳನ್ನು ಕರ್ನಾಟಕದಿಂದ ಆಚೆ ಇಟ್ಕೊಳ್ಳಿ. ರೈಲಿನೊಳಗೆ ನೀವು ಮಲಯಾಳಂ ಬೋರ್ಡ್‌ಗಳನ್ನು ಮೊದಲು ಬದಲಾಯಿರಿಸಿ ಎಂದು ಚೇತನ್ ಕೆ ಅವರು ಬರೆದುಕೊಂಡಿದ್ದಾರೆ. ಇನ್ನು ಸದಾನಂದಗೌಡ ಅವರು ರೈಲ್ವೇ ಸಚಿವರಾಗಿದ್ದಾಗಲೂ ಇದು ನಡೆದಿತ್ತು. ಕರಾವಳಿ ಕರ್ನಾಟಕದ ಜನರಿಗೆ ಎಸ್‌ಡಬ್ಲ್ಯೂಆರ್ ಅಡಿಯಲ್ಲಿ ಮಂಗಳೂರು ಬೇಡ ಎಂದು ಹೇಳಲಾಗಿತ್ತು ಎಂದು ಚಂದ್ರಶೇಖರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications