ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಡಗು ಯಾತ್ರಿಗಳಿಗೆ ಮಂಗಳೂರು ಬಂದರಿನಲ್ಲಿ ಇ-ವೀಸಾ ಸೌಲಭ್ಯ!

ಬಂದರುಗಳ ವ್ಯವಹಾರ ಸುಲಭಗೊಳಿಸಿ ಎನ್ನುವ ಕೇಂದ್ರ ಸರ್ಕಾರದ ನಿಯಮದಂತೆ ದೇಶದ ಬೃಹತ್ ಬಂದರುಗಳಲ್ಲೇ ಪ್ರಥಮ ಬಾರಿಗೆ ನವ ಮಂಗಳೂರು ಬಂದರಿನಲ್ಲಿ ಹಡಗು ಪ್ರಯಾಣಿಕರಿಗೆ ಇ-ವೀಸಾ ಸೌಲಭ್ಯ ಕಲ್ಪಿಸಲಾಗಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 13 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಇ-ವೀಸಾ ಸೌಲಭ್ಯ ಕಲ್ಪಿಸದ ಬೆನ್ನಲ್ಲಿಯೇ ಹಡಗು ಯಾತ್ರಿಗಳ ಆಗಮನಕ್ಕಾಗಿ ಇದೀಗ ನವ ಮಂಗಳೂರು ಬಂದರಿನಲ್ಲಿ ಇ-ವೀಸಾ ಸ್ಟಾಂಪಿಂಗ್ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಬಂದರುಗಳ ವ್ಯವಹಾರ ಸುಲಭಗೊಳಿಸಿ ಎನ್ನುವ ಕೇಂದ್ರ ಸರ್ಕಾರದ ನಿಯಮದಂತೆ ದೇಶದ ಬೃಹತ್ ಬಂದರುಗಳಲ್ಲೇ ಪ್ರಥಮ ಬಾರಿಗೆ ನವ ಮಂಗಳೂರು ಬಂದರಿನಲ್ಲಿ ಹಡಗು ಪ್ರಯಾಣಿಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. [ಏ,1ರಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸರ್ವೀಸ್]

ಎಂ. ಎಸ್ ಸೀಬೋರ್ನ್ ಎನ್ಕೋರ್ ಹಡಗಿನಲ್ಲಿ ಆಗಮಿಸಿದ ಇಂಗ್ಲೆಂಡ್, ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಆರು ಮಂದಿ ಪ್ರವಾಸಿಗರಿಗೆ ಮೊದಲ ಬಾರಿಗೆ ಇಮಿಗ್ರೇಷನ್ ವಿಭಾಗ ಇ-ವೀಸಾ ನೀಡಿತು. [ನವ ಮಂಗಳೂರು ಬಂದರಿನಲ್ಲಿ ಕಾರು ಸಾಗಾಟ ಸೇವೆ ಆರಂಭ]

ಇಮ್ಮಿಗ್ರೇಷನ್ ಬ್ಯುರೋಗೆ ಹಸ್ತಾಂತರ

ಇಮ್ಮಿಗ್ರೇಷನ್ ಬ್ಯುರೋಗೆ ಹಸ್ತಾಂತರ

ಇ-ವೀಸಾ ಸೌಲಭ್ಯ ಕಲ್ಪಿಸಲು ಎನ್ಎಂಪಿಟಿಯಿಂದ ಲಾನ್ ಕನೆಕ್ಷನ್, ವರ್ಕ್ ಸ್ಟೇಷನ್, ಏರ್ ಕಂಡೀಷನ್ ವ್ಯವಸ್ಥೆ, ಸಿಸಿ ಕ್ಯಾಮೆರಾ, ಕ್ಯೂ ಮ್ಯಾನೇಜರ್ ಗಳು 24 ಗಂಟೆ ವಿದ್ಯುತ್ ಸೌಲಭ್ಯ ಮತ್ತು ಬ್ಯಾಕ್ ಅಪ್ ವ್ಯವಸ್ಥೆಗಳನ್ನು ಮಾಡಿ ಇಮ್ಮಿಗ್ರೇಷನ್ ಬ್ಯುರೋಗೆ ಹಸ್ತಾಂತರಿಸಿತ್ತು.

ಮೊದಲ ಬಾರಿಗೆ 6 ಮಂದಿ ಪ್ರವಾಸಿಗರಿಗೆ ಇ-ವೀಸಾ

ಮೊದಲ ಬಾರಿಗೆ 6 ಮಂದಿ ಪ್ರವಾಸಿಗರಿಗೆ ಇ-ವೀಸಾ

ಎಂ. ಎಸ್ ಸೀಬೋರ್ನ್ ಎನ್ಕೋರ್ ಹಡಗಿನಲ್ಲಿ ಆಗಮಿಸಿದ ಇಂಗ್ಲೆಂಡ್, ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಆರು ಮಂದಿ ಪ್ರವಾಸಿಗರಿಗೆ ಮೊದಲ ಬಾರಿಗೆ ಇಮಿಗ್ರೇಷನ್ ವಿಭಾಗ ಇ-ವೀಸಾ ನೀಡಿತು.

ಎನ್ಎಂಪಿಟಿಯಲ್ಲಿ ಹಡಗು ಯಾತ್ರಿಕರ ಸಂಖ್ಯೆ ಹೆಚ್ಚಳ

ಎನ್ಎಂಪಿಟಿಯಲ್ಲಿ ಹಡಗು ಯಾತ್ರಿಕರ ಸಂಖ್ಯೆ ಹೆಚ್ಚಳ

ಕಳೆದ ಕೆಲವು ವರ್ಷಗಳಿಂದ ಎನ್ಎಂಪಿಟಿಯಲ್ಲಿ ಹಡಗು ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. 2016-17ನೇ ಸಾಲಿನಲ್ಲಿ ದಾಖಲೆಯ 28 ಹಡಗುಗಳಲ್ಲಿ 30246 ಪ್ರಯಾಣಿಕರು ಆಗಮಿಸಿದ್ದರೆ, 2015-16ರಲ್ಲಿ 23 ಹಡಗುಗಳಲ್ಲಿ 19000 ಪ್ರಯಾಣಿಕರು ಆಗಮಿಸಿದ್ದರು. ಹೀಗಾಗಿ ಹಡಗು ಸಂಚಾರ ಹೆಚ್ಚಾಗುತ್ತಿದ್ದು, ಹಡಗು ಯಾತ್ರಿಗಳ ಆಗಮನಕ್ಕಾಗಿ ಇ-ವೀಸಾ ಸೌಲಭ್ಯ ಕಲ್ಪಿಸಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ

ಏಪ್ರಿಲ್ ಒಂದರಿಂದಲೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ ಕಲ್ಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
In line with the Union government’s policy on ‘ease of doing business’ in ports, on arrival e-visa stamping facility has been extended to cruise tourists calling at the New Mangaluru Port.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X