ಕೋಮು ಸೌಹಾರ್ದ ವೇದಿಕೆ ಭಟ್ಟರ ಮೇಲೆ ಸಗಣಿ ಎಸೆತ
ಮಂಗಳೂರು, ಏ.22: ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದ ಶೂಟೌಟ್ ನಲ್ಲಿ ಪ್ರಾಣತೆತ್ತ ಕಬೀರ್ ಗೆ ನ್ಯಾಯ ಸಿಗಬೇಕು ಎಂದು ಸುದ್ದಿಗೋಷ್ಠಿ ನಡೆಸಿ ಹೊರ ಬಂದ ಕೋಮು ಸೌಹಾರ್ದ ವೇದಿಕೆ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಅವರ ಮುಖದ ಮೇಲೆ ಸಗಣಿ ಎಸೆಯಲಾಗಿದೆ.
ನಗರದ ಹೋಟೆಲ್ ವುಡ್ ಲ್ಯಾಂಡ್ಸ್ ನಲ್ಲಿ ಕಬೀರ್ ಸಾವು ಪ್ರಕರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಲಾಗಿತ್ತು. ಶೃಂಗೇರಿ ಚಲೋ ನಡೆಸಬೇಕು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.
ಸುದ್ದಿಗೋಷ್ಠಿ ನಂತರ ಹೋಟೆಲಿನಿಂದ ಹೊರಬಂದ ಕರ್ನಾಟಕ ಕೋಮು ಸೌಹಾರ್ದ ವೇದಿಕೆ(ಕೆಕೆಎಸ್ ವಿ) ಜಿಲ್ಲಾಧ್ಯಕ್ಷ ಸುರೇಶ್ ಭಟ್ ಅವರ ಮೇಲೆ ಏಕಾಏಕಿ ಯುವಕನೊಬ್ಬ ಸಗಣಿ ಎಸೆದು ಓಟಕಿತ್ತಿದ್ದಾನೆ. ಕೆಕೆಎಸ್ ವಿ ಕಾರ್ಯಕರ್ತರು ಯುವಕರನ್ನು ಬೆನ್ನಟ್ಟಿಕೊಂಡು ಹೋಗಿ ಹಿಡಿದು ಬಂದರ್ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಆರೋಪಿಯನ್ನು ಹರೀಶ್ ಎಂದು ಗುರುತಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆಯನ್ನು ಮೋಯಿದ್ದೀನ್ ಖಾಮರ್, ತಹ್ಲಾ ಇಸ್ಮಾಯಿಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯಮಟ್ಟದ ಶೃಂಗೇರಿ ಚಲೋಗೆ ಕೋಮು ಸೌಹಾರ್ದ ವೇದಿಕೆ ಕರೆ ನೀಡಿದ್ದು, ಹಕ್ಕೊತ್ತಾಯ ಮಂಡನೆ ಮಾಡಿದೆ. ಸುದ್ದಿಗೋಷ್ಠಿ ವಿವರ ಇಂತಿದೆ:
* ಏ.19ರಂದು ಶೃಂಗೇರಿ ತಾಲೂಕಿನ ತನಿಕೋಡು ಅರಣ್ಯ ತಪಾಸಣಾ ಠಾಣೆ ಬಳಿ ನಕ್ಸಲ್ ದಳ ಸಿಬ್ಬಂದಿ ಕಬೀರ್ ಎಂಬ ಅಮಾಯಕ ಯುವಕನನ್ನು ಗುಂಡಿಕ್ಕಿ ಕೊಂದಿರುವನ್ನು ವೇದಿಕೆ ಖಂಡಿಸುತ್ತದೆ.
* ಯುವಕನ ಪಾರ್ಥೀವ ಶರೀರವನ್ನು ಪಡೆಯಲು ಹೋದ ಬಂಧುಗಳ ಮೇಲೆ ಬಜರಂಗ ದಳದವರೆನ್ನಲಾದ 30 ಜನರ ಗುಂಪೊಂದು ನಡೆಸಿರುವ ಅಪ್ರಚೋದಿತ, ಅಮಾನವೀಯ ಹಲ್ಲೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ.
* ಕೋಮು ಸೌಹಾರ್ದ ವೇದಿಕೆ ಜಿಲ್ಲಾ ಘಟಕಗಳು, ಮಾನವ ಹಕ್ಕು ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು, ಮೊದಲಾದವರು ಹಕ್ಕೊತ್ತಾಯಗಳೊಂದಿಗೆ ಏ.24ರಂದು ಶೃಂಗೇರಿಯಲ್ಲಿ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಲಾಗಿದೆ. [ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು]

ಕೆಕೆಎಸ್ ವಿ ಭಟ್ಟರ ಮೇಲೆ ಸಗಣಿ ಎಸೆತ
ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದ ಶೂಟೌಟ್ ನಲ್ಲಿ ಪ್ರಾಣತೆತ್ತ ಕಬೀರ್ ಗೆ ನ್ಯಾಯ ಸಿಗಬೇಕು ಎಂದು ಸುದ್ದಿಗೋಷ್ಠಿ ನಡೆಸಿ ಹೊರ ಬಂದ ಕೋಮು ಸೌಹಾರ್ದ ವೇದಿಕೆ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಕ್ರಾಬೈಲು ಅವರ ಮುಖದ ಮೇಲೆ ಸಗಣಿ ಎಸೆಯಲಾಗಿದೆ.

ಪೊಲೀಸರು ಆರೋಪಿ ವಿಚಾರಣೆ ನಡೆಸಿದ್ದಾರೆ
ಕೆಕೆಎಸ್ ವಿ ಕಾರ್ಯಕರ್ತರು ಯುವಕರನ್ನು ಬೆನ್ನಟ್ಟಿಕೊಂಡು ಹೋಗಿ ಹಿಡಿದು ಬಂದರ್ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಆರೋಪಿಯನ್ನು ಹರೀಶ್ ಎಂದು ಗುರುತಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ರಾಜ್ಯಮಟ್ಟದ ಶೃಂಗೇರಿ ಚಲೋಗೆ ಕರೆ
ಕೋಮು ಸೌಹಾರ್ದ ವೇದಿಕೆ ಜಿಲ್ಲಾ ಘಟಕಗಳು, ಮಾನವ ಹಕ್ಕು ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು, ಮೊದಲಾದವರು ಹಕ್ಕೊತ್ತಾಯಗಳೊಂದಿಗೆ ಏ.24ರಂದು ಶೃಂಗೇರಿಯಲ್ಲಿ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಲಾಗಿದೆ.

ಶೃಂಗೇರಿ ಶೂಟೌಟ್ ಘಟನೆಗೆ ತೀವ್ರ ಖಂಡನೆ
ಯುವಕನ ಪಾರ್ಥೀವ ಶರೀರವನ್ನು ಪಡೆಯಲು ಹೋದ ಬಂಧುಗಳ ಮೇಲೆ ಬಜರಂಗ ದಳದವರೆನ್ನಲಾದ 30 ಜನರ ಗುಂಪೊಂದು ನಡೆಸಿರುವ ಅಪ್ರಚೋದಿತ, ಅಮಾನವೀಯ ಹಲ್ಲೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ.

ಪ್ಲಾಸಿಕ್ಟ್ ಕವರ್ ನಲ್ಲಿ ಸಗಣಿ ತಂದಿದ್ದ
ಆರೋಪಿ ಯುವಕ ಹರೀಶ್ ಪ್ಲಾಸಿಕ್ಟ್ ಕವರ್ ನಲ್ಲಿ ಸಗಣಿ ತಂದಿದ್ದ. ಈ ಹಿಂದೆ ಕೂಡಾ ಸುರೇಶ್ ಭಟ್ ಅವರ ಮೇಲೆ ಇದೇ ರೀತಿ ಹಲ್ಲೆ ನಡೆದ ಉದಾಹರಣೆಗಳಿವೆ

ಕಬೀರ್ ಸಾವಿಗೆ ನ್ಯಾಯ ಸಿಗಬೇಕಿದೆ
ಮಂಗಳೂರಿನ ಹೋಟೆಲ್ ವುಡ್ ಲ್ಯಾಂಡ್ ನಲ್ಲಿ ನಡೆದ ಕೋಮು ಸೌಹಾರ್ದ ವೇದಿಕೆ ಸಭೆಯಲ್ಲಿ ವಿವಿಧ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು. ಎಲ್ಲರೂ ಕಬೀರ್ ಸಾವಿಗೆ ನ್ಯಾಯ ಸಿಗಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಹಕ್ಕೊತ್ತಾಯಗಳ ಪಟ್ಟಿ ಹೀಗಿದೆ
* ಎಎನ್ಎಫ್ ಸಿಬ್ಬಂದಿ ಅಮಾನತುಗೊಳಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿರ್ದೇಶನದಂತೆ ಎಫ್ ಐಆರ್ ದಾಖಲಿಸಿಕೊಂಡು ನ್ಯಾಯಾಂಗ ತನಿಖೆ ನಡೆಸಬೇಕು.
* ಜಾನುವಾರು ಸಾಗಾಟಗಾರರ ಮೇಲಿನ ಸುಳ್ಳು ಕೇಸು ಹಿಂಪಡೆಯಬೇಕು.
* ಹಲ್ಲೆಕೋರರು, ಸಂಘತನೆಯ ಮುಖಂಡರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ಹಾಕಿ ಬಂಧಿಸಬೇಕು.
* ಶೂಟೌಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ ಸಮಗ್ರ ತನಿಖೆ ನಡೆಸಬೇಕು
*ಸಂತ್ರಸ್ತ ಯುವಕನ ಕುಟುಂಬಕ್ಕೆ ವೈಜ್ಞಾನಿಕವಾಗಿ ಲೆಕ್ಕ ಹಾಕಿ ಪರಿಹಾರ ನೀಡಬೇಕು
ಸಹಿ: ಸುರೇಶ್ ಭಟ್ ಬಾಕ್ರಬೈಲು, ಕಕೋಸೌ ವೇದಿಕೆ ಜಿಲ್ಲಾಧ್ಯಕ್ಷ
* ಅಲಿ ಹಸನ್, ಉಪಾಧ್ಯಕ್ಷ, ಕಲಂದರ್ ಕೊಯ್ಲ, ಜಂಟಿ ಕಾರ್ಯದರ್ಶಿ
* ವಾಸುದೇವ ಬೋಳೂರು, ಅಹಿಂದ ಅಧ್ಯಕ್ಷರು
* ಡೇವಿಡ್ ಡಿಸೋಜ, ಪಿಯುಸಿಲ್ ಜಿಲ್ಲಾಧ್ಯಕ್ಷರು
* ವಾಲ್ಟರ್ ಮಾಬೆನ್, ಅಧ್ಯಕ್ಷ, ಕರ್ನಾಟಕ ಮಿಷನ್ಸ್ ನೆಟ್ ವರ್ಕ್ಸ್
* ಶಬೀರ್ ಅಹಮದ್ ಜಮಾತೆ ಇಸ್ಲಾಮಿ ಹಿಂದ್, ಯೂತ್ ವಿಂಗ್












Click it and Unblock the Notifications