Get Updates
Get notified of breaking news, exclusive insights, and must-see stories!

ಕಟೀಲು ಕ್ಷೇತ್ರದಲ್ಲಿ ಆಡಳಿತ ಮೊಕ್ತೇಸರ ಪಟ್ಟಕ್ಕೆ ಫೈಟ್- ಮಹತ್ವದ ತೀರ್ಪು ನೀಡಿದ ಕೋರ್ಟ್‌

ಮಂಗಳೂರು, ಸೆಪ್ಟೆಂಬರ್ 04: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ದ ದೇವಿ ದೇವಸ್ಥಾನ. ಧಾರ್ಮಿಕ ಧತ್ತಿ ಇಲಾಖೆಗೆ ಅತೀ ಹೆಚ್ಚಿನ ಆದಾಯ ತಂದುಕೊಡುವ ಟಾಪ್ ಟೆನ್ ದೇವಾಲಯಗಳ ಪಟ್ಟಿಯಲ್ಲಿದೆ. ಇದೀಗ ಆ ದೇವಾಲಯದಲ್ಲಿ ಅನುವಂಶಿಕ ಆಡಳಿತ ಟ್ರಸ್ಟಿ ಯಾರು ಎಂಬ ಪೈಪೋಟಿ ಶುರುವಾಗಿದೆ. ಈ ಬಗ್ಗೆ ಅನುವಂಶಿಕ ಗುತ್ತು ಮನೆತನದ ಸದಸ್ಯರು ನ್ಯಾಯಾಲಯದ ಕದ ತಟ್ಟಿದ್ದು, ಪ್ರಸ್ತುತ ಇರುವ ಟ್ರಸ್ಟಿಗೆ ಯಾವುದೇ ಅಧಿಕಾರ ಇಲ್ಲ ಎಂಬ ತೀರ್ಪನ್ನು ಕೋರ್ಟ್ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಪ್ರಸಿದ್ದ ದೇವಿ ದೇವಸ್ಥಾನಗಳಲ್ಲಿ ಒಂದು. ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈ ದೇವಸ್ಥಾನ ಧಾರ್ಮಿಕ ಧತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟರೂ ಸಹ ಇಲ್ಲಿ ವ್ಯವಸ್ಥಾಪನ ಸಮಿತಿಯಿಲ್ಲ. ಬದಲಾಗಿ ಅನುವಂಶಿಕವಾಗಿ ಬಂದಿರುವ ಆಡಳಿತ ಮೊಕ್ತೇಸರರು ಹಾಗೂ ಅನುವಂಶಿಕ ಅರ್ಚಕರು ಇಲ್ಲಿನ ಆಡಳಿತವನ್ನು ನೋಡಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರು ಅನುವಂಶಿಕವಾಗಿ ಬಂದವರು ಅಲ್ಲ ಎಂಬ ಗೊಂದಲ ಏರ್ಪಟ್ಟಿದೆ.

trustee-of-kateelu-sri-durgaparameshwari-temple

ಪ್ರಸ್ತುತ ಇರುವ ಆಡಳಿತ ಮೊಕ್ತೇಸರಾದ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಮನೆತನಕ್ಕೆ ಸೇರಿದವರಲ್ಲ ಎಂದು ಕೊಡೆತ್ತೂರು ಗುತ್ತು ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಸನತ್ ಕುಮಾರ್ ಶೆಟ್ಟಿಯವರು ಪುತ್ತಿಗೆಗುತ್ತಿನವರು ಎಂದು ಘೋಷಿಸಿದೆ. ಇದರ ಜೊತೆ ಟ್ರಸ್ಟಿ ಆಗಲು ಅವರು ಅರ್ಹರಲ್ಲ, ಇದರ ಅಧಿಕಾರ ಕೊಡೆತ್ತೂರು ಗುತ್ತಿನವರಿಗೆ ಸಂಬಂಧಿಸಿದ್ದು ಎಂದು ಆದೇಶಿಸಿದೆ.

ಕೊಡೆತ್ತೂರು ಗುತ್ತು ಕುಟುಂಬ ಬಂಟ ಸಮಾಜದ ಪುರಾತನ ಮನೆತನಕ್ಕೆ ಸೇರಿದ್ದು. ಇಲ್ಲಿನ ಹಿರಿಯ ಸದಸ್ಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಟ್ರಸ್ಟಿಯಾಗುವ ಕ್ರಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಪುತ್ತಿಗೆ ಗುತ್ತುವಿನ ಸನತ್ ಕುಮಾರ್ ಶೆಟ್ಟಿ 2017ರಲ್ಲಿ ನಾನೇ ಕೊಡೆತ್ತೂರು ಗುತ್ತಿನವನು ಎಂದು ಹೇಳಿ ಟ್ರಸ್ಟಿ ಆಗಿದ್ದಾರೆ ಎಂಬುದು ಕೊಡೆತ್ತೂರು ಗುತ್ತು ಮನೆತನದವರ ಆರೋಪ.

ಹೀಗಾಗಿ ಈ ಕ್ರಮದ ವಿರುದ್ದ ದೇವಸ್ಥಾನ, ರಾಜ್ಯ ಸರ್ಕಾರ, ಧಾರ್ಮಿಕ ಧತ್ತಿ ಇಲಾಖೆಯ ಕಮೀಷನರ್, ಧಾರ್ಮಿಕ ಪರಿಷತ್, ಜಿಲ್ಲಾ ಧಾರ್ಮಿಕ ಪರಿಷತ್, ಸನತ್ ಕುಮಾರ್ ಶೆಟ್ಟಿಯವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಕೊಡೆತ್ತೂರು ಗುತ್ತು ಕುಟುಂಬ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನೀಡಿದ್ದು ಪುತ್ತಿಗೆಗುತ್ತು ಕುಟುಂಬದವರು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಟ್ರಸ್ಟಿ ಆಗುವಂತಿಲ್ಲ ಎಂದು ಆದೇಶಿಸಿದೆ.

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿ ಆರು ಯಕ್ಷಗಾನ ಮೇಳ ಸೇರಿದಂತೆ ಶಾಲೆ, ಕಾಲೇಜುಗಳು ಸಹ ಇದೆ. ಇದೆಲ್ಲದರ ಉಸ್ತುವಾರಿ ಆಡಳಿತ ಮೊಕ್ತೇಸರರಿಗೆ ಬರುತ್ತದೆ. ಇದರ ಜೊತೆ ದೇವಸ್ಥಾನದಿಂದ ಸಿಗುವ ಗೌರವ, ಮರ್ಯಾದೆ, ಮನ್ನಣೆಗಳು ಸಹ ಇವರಿಗೆ ಲಭಿಸುತ್ತೆ.ಒಟ್ಟಿನಲ್ಲಿ ಕೋರ್ಟ್ ನೀಡಿರುವ ಈ ಆದೇಶ ಮುಂದೆ ಯಾವ ಬೆಳವಣಿಗೆಗೆ ಕಾರಣವಾಗುತ್ತೆ ಎಂದು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+