ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ.ಕ.ದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಕೈ-ಕಮಲ ನಾಯಕರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ಮುಂದುವರೆದಿದ್ದು, ಜಿಲ್ಲೆಯ ಎರಡು ಕಡೆ ಇವಿಎಂ ಮೆಷಿನ್ ದೋಷ ಘಟನೆ ಹೊರತುಪಡಿಸಿ ಎಲ್ಲಾ 1861 ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಇಂದು ಮುಂಜಾನೆ ಮತದಾನ ಮಾಡಿದರು. ನಗರದ ಉರ್ವ ಸೈಂಟ್ ಅಲೋಷಿಯಸ್ ಪ್ರೌಢ ಶಾಲೆಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ನಳಿನ್ ಕುಮಾರ್ ಕಟೀಲ್ ತಮ್ಮ ಮತ ಚಲಾಯಿಸಿದರು.

Congress and BJP leaders stand in line for casting vote

ಕರ್ನಾಟಕ ಲೋಕ ಸಮರ LIVE: ಹಾಸನದಲ್ಲಿ ಮತಚಲಾಯಿಸಿದ ದೇವೇಗೌಡ ದಂಪತಿಕರ್ನಾಟಕ ಲೋಕ ಸಮರ LIVE: ಹಾಸನದಲ್ಲಿ ಮತಚಲಾಯಿಸಿದ ದೇವೇಗೌಡ ದಂಪತಿ

ಮೂಡಬಿದರೆಯಲ್ಲೂ ಮತದಾನ ಸಮಯಕ್ಕೆ ಸರಿಯಾಗಿ ಆರಂಭಗೊಂಡಿತ್ತು. ಜೈನ ಪ್ರಾಥಮಿಕ ಶಾಲೆಯ ಮತಗಟ್ಟೆ 70ರಲ್ಲಿ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಜಿ ಸಚಿವ ಕೆ.ಅಭಯಚಂದ್ರ ಪತ್ನಿ ಮಂಜುಳಾರ ಜತೆಗೂಡಿ ಬಂದು ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು.

Congress and BJP leaders stand in line for casting vote

ಮಾಜಿ ಸಚಿವ ಬಿ ರಮಾನಾಥ್ ರೈ ಬಂಟ್ವಾಳದಲ್ಲಿ ಮತ ಚಲಾಯಿಸಿದರು. ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿದ ರೈ ಕಳ್ಳಿಗೆ ತೊಡಂಬಿಲ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ರೈ ಮತ ಚಲಾವಣೆ ಮಾಡಿದರು.

Congress and BJP leaders stand in line for casting vote

ಸಚಿವ ಯುಟಿ ಖಾದರ್ ಬೋಳಿಯಾರು ರಂತಡ್ಕ ಜಾರದಗುಡ್ಡೆ ಮತಗಟ್ಟೆ ಸಂಖ್ಯೆ 103ರಲ್ಲಿ ಮತದಾನ ಮಾಡಿದರು. ಜನಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತ ಖಾದರ್ ಮತ ಚಲಾವಣೆ ಮಾಡಿದರು. ಖಾದರ್ ಜತೆ ಪತ್ನಿ ಲೆಮೀಸ್ ಕೂಡ ಆಗಮಿಸಿ ಮತ ಚಲಾವಣೆ ಮಾಡಿದರು.

English summary
Lok Sabha Election 2019:There is peaceful voting in Dakshina Kannada.Congress and BJP leaders stand in line for casting vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X