Get Updates
Get notified of breaking news, exclusive insights, and must-see stories!

ಯೂರೋಪ್ ರಾಷ್ಟ್ರಗಳಲ್ಲಿ ಕರಾವಳಿಯ ಯಕ್ಷಗಾನ ಕಲರವ

ಮಂಗಳೂರು, ಜೂನ್‌, 16: ಭಾರತದ ಅಭಿಜಾತ ಕಲಾಪ್ರಕಾರವಾಗಿ ಗುರುತಿಸಬೇಕಾದ ಯಕ್ಷಗಾನವು ಕರಾವಳಿಯ ಕಡಲಾಚೆಯೂ ತನ್ನ ಕಂಪನ್ನು ಪಸರಿಸುತ್ತಿದೆ. ಮಳೆಗಾಲದಲ್ಲಿ ರಾಜ್ಯದ ಇತರೆಡೆಗಳಲ್ಲಿ, ಮುಂಬೈ, ದೆಹಲಿಯಲ್ಲಿ ಕರಾವಳಿಯ ಯಕ್ಷಗಾನ ಸದ್ದು ಮಾಡುತ್ತಿದೆ. ಅದೇ ರೀತಿ ಇದೀಗ ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಯುರೋಪ್ ದೇಶದ ವಿವಿಧ ಭಾಗಗಳಲ್ಲಿ ಯಕ್ಷಗಾನ ಪ್ರದರ್ಶನ ನಿನ್ನೆಯಿಂದ ಆರಂವಾಗಿದ್ದು, ಇನ್ನು ಒಂದು ವಾರಗಳ ಕಾಲ ನಡೆಯಲಿದೆ.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ತಂಡ ಲಂಡನ್ ತಲುಪಿದೆ. ಒಂದು ವಾರ ಲಂಡನ್, ಮಿಡ್ಲ್ಯಾಂಡ್, ಎಡಿನ್ ಬರ್ಗ್, ಸ್ಕಾಟ್ ಲ್ಯಾಂಡ್‌ಗಳಲ್ಲಿ ಯಕ್ಷಗಾನ ಪ್ರದರ್ಶನ ಮಾಡಲಿದ್ದಾರೆ. ಕನ್ನಡಿಗರೊಂದಿಗೆ ಬ್ರಿಟೀಷ್ ಪ್ರಜೆಗಳು ಇಲ್ಲಿ ಯಕ್ಷಗಾನವನ್ನು ಆಸ್ವಾದಿಸಲು ಸಜ್ಜಾಗಿದ್ದಾರೆ.

Coastal karnataka yakshagana performance in European countries

ಇನ್ನು ದುರಾಅಮ್‌ ಹಾಗೂ ಲೀಡ್ಸ್ ವಿಶ್ವವಿದ್ಯಾಲಯಗಳಲ್ಲಿ ಯಕ್ಷಗಾನದ ಶಿಬಿರ ನಡೆಯಲಿದೆ. ಇಲ್ಲಿ ಬಣ್ಣಗಾರಿಕೆಯೊಂದಿಗೆ ಕುಣಿತ, ಅಭಿನಯಗಳೊಂದಿಗೆ ಪ್ರಾತ್ಯಕ್ಷಿಕೆ ನಡೆಯಲಿದೆ. ನಂತರ ಆಗಸ್ಟ್‌ನಲ್ಲಿ ಫ್ರಾನ್ಸ್, ಪ್ಯಾರಿಸ್, ಫ್ರಾಂಕ್ ಫರ್ಟ್, ಮನಿಚ್, ಜರ್ಮನಿ, ಬಿಲ್ಲಿಂಗಾಮ್‌ಗಳಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ವೇಳೆ ಕಲಾವಿದರು ಶ್ರೀಕೃಷ್ಣ ಲೀಲೆ - ಕಂಸವಧೆ, ನರಕಾಸುರ ಮೋಕ್ಷ, ಸುದರ್ಶನ ವಿಜಯ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.

ಪಣಂಬೂರು ವಾಸು ಐತಾಳ್ ಅವರ ನೇತೃತ್ವದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿಯವರೊಂದಿಗೆ ಪ್ರೊ.ಎಂ.ಎಲ್.ಸಾಮಗ, ಕಲಾವಿದರಾದ ಪದ್ಮನಾಭ ಉಪಾಧ್ಯಾಯ, ಚೈತನ್ಯಕೃಷ್ಣ ಪದ್ಯಾಣ, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಮೋಹನ್‌ ಬೆಳ್ಳಿಪಾಡಿಯವರು ಕಡಲಾಚೆ ಯಕ್ಷಗಾನದ ಕಲರವ ಮೂಡಿಸಲಿದ್ದಾರೆ.

ಈಗಾಗಲೇ ಯಕ್ಷಗಾನ ಬಯಲಾಟಗಳು ತಮ್ಮ ಪ್ರದರ್ಶನ ನಿಲ್ಲಿಸಿದ್ದು, ಮಳೆಗಾಲ ಮುಗಿದ ಬಳಿಕ ಮತ್ತೆ ಯಕ್ಷಗಾನ ಪ್ರದರ್ಶನ ಆರಂಭಗೊಳ್ಳಲಿದೆ. ಮುಂದಿನ ಎರಡು ತಿಂಗಳು ಅಲ್ಲಲ್ಲಿ ಕಲಾವಿದರ ತಂಡಗಳು ಆಹ್ವಾನಿತ ಪ್ರದರ್ಶನ ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ITI ವಿದ್ಯಾರ್ಥಿಗಳಿಂದ ಸಾಧನೆ

ಮಾನ್ವಿ ಪಟ್ಟಣದ ಬಸವ ಐಟಿಐ ಕಾಲೇಜು ವಿದ್ಯಾರ್ಥಿಗಳು ಜೀಪ್ ಮಾದರಿಯಲ್ಲಿ ವಿನೂತನವಾದ ಪರಿಸರ ಸ್ನೇಹಿ ಸೋಲಾರ್ ಎಲೆಕ್ಟ್ರಿಕ್ ವಾಹನ ತಯಾರಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಬಸವ ಐಟಿಐ ಕಾಲೇಜಿನ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗದ ಅಂತಿಮ ವರ್ಷದ ಮೂರ್ತಿ ಶೇಷ ಚಾಗಬಾವಿ ಕ್ಯಾಂಪ್, ಸಿದ್ದಪ್ಪ ಮಾಡಗಿರಿ, ವಿ.ಎಸ್. ರುತಿನ್ ಬಲ್ಲಟಗಿ, ಅಶೋಕ ಹರವಿ, ಶ್ರೀನಿವಾಸ ಬಲ್ಲಟಗಿ ಇತರ 16 ಜನ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ ಹಾಗೂ ಕಿರಿಯ ತರಬೇತಿ ಅಧಿಕಾರಿ ಶಿವಪುತ್ರ ಅವರ ಮಾರ್ಗದರ್ಶನದಲ್ಲಿ ಈ ವಾಹನ ಸಿದ್ಧಪಡಿಸಿದ್ದಾರೆ.

ಎರಡು ಸೋಲಾರ್ ಪ್ಯಾನಲ್, 70 ಎಎಚ್ ಬ್ಯಾಟರಿ , 1 ಕಿಲೋವ್ಯಾಟ್ ಬಿಎಲ್‌ಡಿಸಿ ಮೋಟಾರ್ ಜತೆಗೆ ಕಂಟ್ರೋಲರ್, ಎಕ್ಸಲೇಟರ್, ಡಿಸ್ಕ್ ಬ್ರೇಕ್, ಬ್ಯಾಕ್ ವ್ಹೀಲ್ ಡಿಫರೆನ್ಷಿಯಲ್, ಹೆಡ್ ಲೈಟ್, ಇಂಡಿಕೇಟರ್‌ಗಳನ್ನು ಬಳಸಿ ನಾಲ್ಕು ಸೀಟುಗಳನ್ನು ಹೊಂದಿರುವ ಈ ವಾಹನ ತಯಾರಿಸಲಾಗಿದೆ.

ಈ ವಾಹನವು ಪ್ರತಿ ಗಂಟೆಗೆ 35ರಿಂದ 40 ಕಿ.ಮೀ. ಚಲಿಸುವ ಸಾಮರ್ಥ್ಯ ಹೊಂದಿದೆ. ಈ ವಾಹನಕ್ಕೆ 5ರಿಂದ 6 ಕಿಲೋವ್ಯಾಟ್ ಸಾಮರ್ಥ್ಯದ ಮೋಟಾರ್ ಬಳಸಿದರೆ ಪ್ರತಿ ಗಂಟೆಗೆ 100ರಿಂದ 120 ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಎಂದು ಪ್ರಾಂಶುಪಾಲ ತಿಪ್ಪಣ್ಣ ಎಂ.ಹೊಸಮನಿ ವಿವರಿಸಿದ್ದಾರೆ.

ಪೆಟ್ರೋಲ್ ಅಥವಾ ಡೀಸೆಲ್ ಬಳಸದೆ ಸೌರಶಕ್ತಿಯ ಮೂಲಕ ಬಳಸಲ್ಪಡುವ ಈ ಸೋಲಾರ್ ಎಲೆಕ್ಟ್ರಿಕ್ ವಾಹನ ವಾಯು ಮಾಲಿನ್ಯ ತಡೆಗಟ್ಟಲು ಪೂರಕ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ. ಹೊರನೋಟಕ್ಕೆ ಜೀಪಿನಂತೆ ಕಾಣುವ ಈ ವಾಹನದಲ್ಲಿ ವಿದ್ಯಾರ್ಥಿಗಳು ಮಾನ್ವಿ ಪಟ್ಟಣದಲ್ಲಿ ಸಂಚರಿಸುವ ಮೂಲಕ ಸ್ಥಳೀಯರ ಗಮನ ಸೆಳೆಯುತ್ತಿದ್ದಾರೆ.

ಕಳೆದ ವರ್ಷ ಇದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸೋಲಾರ್ ಇ-ಬೈಸಿಕಲ್ ತಯಾರಿಸಿ ಸಾಧನೆ ಮಾಡಿದ್ದರು. ಅಂತರರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರದ ಯುಎನ್‌ಡಿಪಿ ಸಂಸ್ಥೆ, ಪ್ರಾಜೆಕ್ಟ್ ಕೋಡ್ ಉನ್ನತಿ, ರಾಜ್ಯ ಸರ್ಕಾರದ ಕೌಶಲಾಭಿವೃದ್ಧಿ ಇಲಾಖೆ ಹಾಗೂ ಎಸ್‌ಎಪಿ ಲ್ಯಾಬ್ಸ್ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಹಾಗೂ ಕೌಶಲಾಭಿವೃದ್ಧಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಹೊಸ ಆವಿಷ್ಕಾರಗಳ ಸ್ಪರ್ಧೆಯಲ್ಲಿ ಬಸವ ಐಟಿಐ ಕಾಲೇಜು ವಿದ್ಯಾರ್ಥಿಗಳು ಆವಿಷ್ಕರಿಸಿದ ಸೋಲಾರ್ ಇ-ಬೈಸಿಕಲ್ ಬಗ್ಗೆ ತೀರ್ಪುಗಾರರಿಂದ ಪ್ರಶಂಸೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ₹1ಲಕ್ಷ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+