• search
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ, ಕೊಡಗು ನೆರೆ: ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ ಕರಾವಳಿ ಬೀಚ್ ಗಳು

By ಗುರುರಾಜ ಕೆ.
|

ಮಂಗಳೂರು, ಆಗಸ್ಟ್ 23: ಕೇರಳ, ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಪರಿಣಾಮ ಕರಾವಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೇರಳ ಮತ್ತು ಮಡಿಕೇರಿಯಲ್ಲಿ ಉಂಟಾದ ಜಲಪ್ರಳಯದ ಪರಿಣಾಮ ಶೇಕಡ. 80 ರಷ್ಟು ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂದು ಅಂದಾಜಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಸ್ಥಳೀಯರು ಸೇರಿದಂತೆ ರಾಜ್ಯ, ಹೊರರಾಜ್ಯಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಬೀಚ್ ಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ. ಮಳೆಗಾಲದಲ್ಲಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಮಲ್ಪೆ, ಪಣಂಬೂರು ಬೀಚ್ ಗಳು ಜನರಿಲ್ಲದೆ ಈಗ ಬಿಕೋ ಎನ್ನುತ್ತಿವೆ.

ಕಳೆದ ಕೆಲವು ದಿನಗಳಿಂದ ಸುರಿದ ಮಹಾಮಳೆ ಜೊತೆಗೆ ಗಾಳಿಯ ಅಬ್ಬರದ ಹಿನ್ನಲೆಯಲ್ಲಿ ಸ್ಥಳೀಯರು ಕೂಡ ಬೀಚ್ ಕಡೆ ಮುಖ ಮಾಡುತ್ತಿಲ್ಲ. ಮಳೆಗಾಲದ ಸಂದರ್ಭದಲ್ಲಿ ದಿನನಿತ್ಯ ಸುಮಾರು 2 ಸಾವಿರಕ್ಕೂ ಅಧಿಕ ಬರುತ್ತಿದ್ದ ಬೀಚ್ ಗಳಲ್ಲಿ ಕಳೆದ ಭಾನುವಾರು ಕೇವಲ 150 ರಿಂದ 200 ರಷ್ಟು ಮಂದಿ ಮಾತ್ರ ಬೀಚ್ ನಲ್ಲಿ ಸುತ್ತಾಡುತ್ತಿರುವುದು ಕಂಡು ಬಂದಿದೆ.

ಧುಮ್ಮಿಕ್ಕುತ್ತಿರುವ ಜೋಗದ ವೈಭವ ನೋಡಲು ಮುಗಿಬಿದ್ದ ಪ್ರವಾಸಿಗರು

ಮಂಗಳೂರಿನ ಪಣಂಬೂರು ಬೀಚ್, ಉಳ್ಳಾಲ ಸೋಮೇಶ್ವರ ಬೀಚ್ ಸೇರಿದಂತೆ ಉಡುಪಿಯ ಮಲ್ಪೆ ಬೀಚ್, ಸೈಂಟ್ ಮೇರಿಸ್, ಮರವಂತೆ, ಮುರುಡೇಶ್ವರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಕೇರಳದ ರಾಜ್ಯದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.

 ಪ್ರವಾಸಿಗರು ಬರುವುದು ಕಷ್ಟಸಾಧ್ಯ

ಪ್ರವಾಸಿಗರು ಬರುವುದು ಕಷ್ಟಸಾಧ್ಯ

ಅದರಲ್ಲೂ ಸೈಂಟ್ ಮೇರಿಸ್ ದ್ವೀಪಕ್ಕೆ ಮತ್ತು ಮಲ್ಪೆ ಬೀಚ್ ಹಾಗೂ ಪಣಂಬೂರು ಬೀಚ್ ಗಳಿಗೆ ಬರುವ ಪ್ರವಾಸಿಗರಲ್ಲಿ ಕೇರಳದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಕೇರಳ ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಹಿನ್ನಲೆಯಲ್ಲಿ ಇನ್ನು ಕೆಲವು ತಿಂಗಳು ಕೇರಳ ಪ್ರವಾಸಿಗರು ಆಗಮಿಸುವುದು ಕಷ್ಟ ಸಾಧ್ಯ ಎಂದು ಹೇಳಲಾಗಿದೆ.

 ಸಣ್ಣ ಅಂಗಡಿಗಳು ತೆಗೆದಿರುತ್ತವೆ

ಸಣ್ಣ ಅಂಗಡಿಗಳು ತೆಗೆದಿರುತ್ತವೆ

ಜಲಪ್ರವಾಹದ ಪರಿಣಾಮ ಪ್ರವಾಸಿಗರನ್ನೇ ನಂಬಿರುವ ಹೋಟೆಲ್ ಹಾಗೂ ಲಾಡ್ಜ್ ಉದ್ಯಮಕ್ಕೂ ಕೇರಳ ಹಾಗೂ ಮಡಿಕೇರಿಯ ಜಲಪ್ರಳಯದ ಬಿಸಿ ತಟ್ಟಿದೆ. ಪ್ರವಾಸಿಗರು ಬರದ ಹಿನ್ನಲೆಯಲ್ಲಿ ಬೀಚ್ ಪರಿಸರದಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ಅಂಗಡಿಗಳು ಬಾಗಿಲು ಹಾಕಿವೆ.

ಅದರಲ್ಲಿ ಕೆಲವೊಂದು ಸಣ್ಣ ಅಂಗಡಿಗಳು ಮಾತ್ರ ಸಂಜೆಯ ಸಮಯದಲ್ಲಿ ಬಾಗಿಲು ತೆರೆದು ಪ್ರವಾಸಿಗರಿಗಾಗಿ ಕಾದು ಕುಳಿತಿರುತ್ತಾರೆ.

 ಗಾಳಿ ಸೇವನೆಗೆ ಮಾತ್ರ ಬರುತ್ತಾರೆ

ಗಾಳಿ ಸೇವನೆಗೆ ಮಾತ್ರ ಬರುತ್ತಾರೆ

ಬೀಚ್ ಪರಿಸರದಲ್ಲಿ ಸುಮಾರು 50 ರಿಂದ 80 ರಷ್ಟು ಅಂಗಡಿಗಳಿದ್ದು, ಪ್ರವಾಸಿಗರಿಲ್ಲದೆ ಬಾಗಿಲು ಹಾಕಿವೆ. ಕಳೆದ 10 ದಿನಗಳಿಂದ ದಿನಕ್ಕೆ 200 ರೂಪಾಯಿ ವ್ಯಾಪಾರವೂ ಕಷ್ಟವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ ಗೂಡಂಗಡಿಯ ವ್ಯಾಪಾರಸ್ಥರು.

ಕರಾವಳಿಯ ಬಹುತೇಕ ಬೀಚ್ ಗಳಲ್ಲಿಯೂ ಇದೇ ರೀತಿ ಪರಿಸ್ಥಿತಿ ಇದ್ದು, ಸಂಜೆ ಹೊತ್ತು ಸ್ಥಳೀಯರು ಮಾತ್ರ ಗಾಳಿ ಸೇವನೆಗೆ ಬೀಚ್ ಕಡೆ ಬರುತ್ತಿದ್ದಾರೆ.

 ಕಾಪು ಬೀಚ್ ಕೂಡ ಖಾಲಿ

ಕಾಪು ಬೀಚ್ ಕೂಡ ಖಾಲಿ

ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕಾಪು ಬೀಚ್ ಕೂಡ ಈಗ ಖಾಲಿ ಖಾಲಿಯಾಗಿದೆ. ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುತ್ತಿದ್ದ ಕಾಪು ಬೀಚ್ ಈಗ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.

ಬಕ್ರೀದ್ ದಿನವಾದರೂ ಕೂಡ ಹೆಚ್ಚಿನ ಪ್ರವಾಸಿಗರು ಬರುತ್ತಾರೆ ಎಂದು ನಿರೀಕ್ಷೆ ಇಟ್ಟಿದ್ದ ಸ್ಥಳೀಯ ವ್ಯಾಪಾರಿಗಳಿಗೆ ನಿರಾಸೆಯಾಗಿದ್ದು, ಕೆಲವೆಡೆ ಬೆರಳೆಣಿಕೆಯ ಪ್ರವಾಸಿಗರು ಆಗಮಿಸಿದ್ದಾರೆ ಎನ್ನಲಾಗಿದೆ. ಕೇರಳ ಹಾಗೂ ಕೊಡಗು ಜಲಪ್ರಳಯ ಪ್ರವಾಸಿಗರನ್ನೇ ನಂಬಿಕೊಂಡಿದ್ದ ವ್ಯಾಪಾರಿಗಳ ಜೀವನದ ಮೇಲೆ ಭಾರಿ ಹೊಡೆತ ನೀಡಿದೆ.

ದಕ್ಷಿಣ ಕನ್ನಡ ರಣಕಣ
ಡೆಮೊಗ್ರಫಿಕ್ಸ್
ಜನಸಂಖ್ಯೆ
20,89,649
ಜನಸಂಖ್ಯೆ
 • ಗ್ರಾಮೀಣ
  52.33%
  ಗ್ರಾಮೀಣ
 • ನಗರ
  47.67%
  ನಗರ
 • ಎಸ್ ಸಿ
  7.09%
  ಎಸ್ ಸಿ
 • ಎಸ್ ಟಿ
  3.94%
  ಎಸ್ ಟಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Coastal beaches are vacant without tourists. Malpe and Panambur beaches are now empty without people. About 80% of visitors are not coming to the beach.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more