ನಮ್ಮ ಸಿಎಂ ಸಿದ್ದರಾಮಯ್ಯ ಅಲ್ಲ 'ಸಿದ್ಧ ರಾವಣ' : ಸಂಜೀವ ಮಠಂದೂರು
ಮಂಗಳೂರು, ಸೆಪ್ಟೆಂಬರ್ 6: ಬಿಜೆಪಿ ಯುವ ಮೋರ್ಚಾ ಬೈಕ್ ಜಾಥಾಗೆ ನಿರ್ಬಂಧ ಹೇರಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ದಕ್ಷಿಣ ಕನ್ನಡದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ. ಅವರು "ಸಿದ್ದ ರಾವಣ" ಎಂದು ಗುಡುಗಿದ್ದಾರೆ.

"ಅಮಾನವೀಯವಾಗಿ ಬಿಜೆಪಿ ನಾಯಕರ ಬಂಧನವಾಗಿದೆ. ಬಿಜೆಪಿ ಮುಖಂಡರು ಹೇಗೆ ಕಾನೂನು ಉಲ್ಲಂಘಿಸಿದ್ದಾರೆ," ಎನ್ನುವುದನ್ನು ಸರ್ಕಾರ ತಿಳಿಸಲಿ ಎಂದು ಸವಾಲು ಹಾಕಿದರು.
ಸೆಪ್ಟೆಂಬರ್ 7 ರಂದು ಬಿಜೆಪಿ ಸಮಾವೇಶ ನಡೆಯುತ್ತದೆ. ದಕ್ಷಿಣ ಕನ್ನಡದಲ್ಲಿ ಬೈಕ್ ಜಾಥಾ ಕೂಡಾ ನಡೆಯುತ್ತದೆ ಎಂದು ಅವರು ಹೇಳಿದರು.
"ನಮ್ಮ ಕಾರ್ಯಕರ್ತರು ಬಸ್ ಗಳಲ್ಲಿ ಮಂಗಳೂರಿಗೆ ಬರುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಸಮಾವೇಶ ನಡೆಯುತ್ತದೆ. ಇದರಿಂದ 'ಮಂಗಳೂರು ಚಲೋ' ದೇಶಕ್ಕೆ ಮಾದರಿಯಾಗಲಿದೆ," ಎಂದು ಆಶಯ ವ್ಯಕ್ತಪಡಿಸಿದರು.
ಪೊಲೀಸರು ಸರ್ಕಾರದ ಕೈಗೊಂಬೆಯಾಗಿದ್ದು ವಿಷಾದನೀಯ. ಮತ್ತು ಜಾಥಾಗೆ ನಿರ್ಬಂಧ ಹೇರುವುದರ ಹಿಂದೆ ಮಂಗಳೂರಿನ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕೈವಾಡ ಇದೆ. ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.











Click it and Unblock the Notifications