Get Updates
Get notified of breaking news, exclusive insights, and must-see stories!

ವಿದ್ಯಾರ್ಥಿ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಬೆರೆತ ಸಿಎಂ ಬೊಮ್ಮಾಯಿ

ಮಂಗಳೂರು, ಜೂ. 2: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ತಾನು ಕಾಮನ್ ಸಿಎಂ ಎಂದು ನಿರೂಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಮಕ್ಕಳೊಂದಿಗೆ ಮಕ್ಕಳ ಹಾಗೆ ಬೆರೆತು ವಿದ್ಯಾರ್ಥಿಗಳ ಗಮನ ಸೆಳೆದಿದ್ದಾರೆ. ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೆರೆದಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಕ್ಕಳೊಂದಿಗೆ ಉತ್ಸಾಹಭರಿತರಾಗಿ ಸಂವಹನ ಮಾಡಿದ್ದಾರೆ.

ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಪ್ರಯೋಜನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಸಂವಾದ ನಡೆಸಿದ್ದಾರೆ. ಮಂಗಳೂರಿನ ವಿವಿಧ ಕಾಲೇಜಿನ ಆಯ್ದ ಹತ್ತು ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ ಮಾಡಿದ್ದಾರೆ.ವಿದ್ಯಾರ್ಥಿಗಳ ಪ್ರಶ್ನೆ ಸುಧೀರ್ಘವಾದಾಗ ಮಧ್ಯಪ್ರವೇಶಿಸಿದ ನಿರೂಪಕ ರನ್ನು ತಡೆದ ಸಿಎಂ,ಮಕ್ಕಳನ್ನು ನೀವು ಮಧ್ಯ ಪ್ರವೇಶ ಮಾಡಬೇಡಿ, ಮಕ್ಕಳು ಮುಕ್ತವಾಗಿ ಮಾತನಾಡಲಿ ಅಂತಾ ಹೇಳಿದರು.

ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ನೋಡುವ ಭಾಗ್ಯ ನನ್ನದಾಗಿದೆ

ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ನೋಡುವ ಭಾಗ್ಯ ನನ್ನದಾಗಿದೆ

ಬಳಿಕ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿದ್ಯಾರ್ಥಿಗಳು ಯೋಜನೆಯ ಸದುಪಯೋಗ ಪಡೆದುಕೊಂಡಿರುವುದನ್ನು ಅರಿತು ನನ್ನ ಶಕ್ತಿ ಇಮ್ಮಡಿಯಾಗಿದೆ. ನಾವೆಲ್ಲರೂ ಸೇರಿ ಯುವಕರನ್ನು ಬೆಳೆಸಿ, ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡೋಣ ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ನೋಡುವ ಭಾಗ್ಯ ನನ್ನದಾಗಿದೆ. ವಿಶ್ವಮಾನ್ಯ ಇರುವ ವಿದ್ಯಾ ಸಂಸ್ಥೆ ಆಳ್ವಾಸ್ ನಲ್ಲಿ 25 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.. ನಾನೂ ನಿಮ್ಮ ಜೊತೆ ಅಲ್ಲಿ ಬಂದು ಕೂತು ಕೊಳ್ಳಬೇಕು ಅಂತಾ ಅನಿಸುತ್ತಿದೆ. ಸಭೆಯಲ್ಲಿ ಹಿಂದೆ ಕೂತು ನಾನೂ ಗಲಾಟೆ ಮಾಡುತ್ತಿದೆ ಅಂತಾ ವಿದ್ಯಾರ್ಥಿಗಳನ್ನು ನಗೆಕಡಲಿನಲ್ಲಿ ಸಿಎಂ ತೇಲಿಸಿದರು. ಜೋಷ್ ನಲ್ಲಿರುವ ಎಲ್ಲರೂ ಆತ್ಮೀಯ ಮಿತ್ರರು.ಯುವಕರೆಂದರೆ ಎನರ್ಜಿ.ಇಲ್ಲಿರುವ ವಿದ್ಯುತ್ 33 ವ್ಯಾಟ್, ನೂರು ವೋಲ್ಡ್ ಅಲ್ಲ ಲಕ್ಷಾಂತರ ವ್ಯಾಟ್ ಇರುವ ಗ್ರಿಡ್ ಇದಾಗಿದೆ..ದೇಶ ಕಟ್ಟುವ ಶಕ್ತಿ ಆಳ್ವಾಸ್ ವಿದ್ಯಾರ್ಥಿ ಗಳಿಗಿದೆ ಅಂತಾ‌ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ವಿದ್ಯಾರ್ಥಿಗಳು ತಾರ್ಕಿಕ ಚಿಂತನೆ ಮಾಡಬೇಕು: ಸಿಎಂ ಸಲಹೆ

ವಿದ್ಯಾರ್ಥಿಗಳು ತಾರ್ಕಿಕ ಚಿಂತನೆ ಮಾಡಬೇಕು: ಸಿಎಂ ಸಲಹೆ

ಹಿಂದೆ ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕ ಎಂಬ ಚಿಂತನೆಯಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ 130 ಕೋಟಿ ಜನರು, ಅದರಲ್ಲೂ ಶೇ. 46 ರಷ್ಟಿರುವ ಯುವಜನರು ನಮ್ಮ ದೇಶವನ್ನು ಮುನ್ನಡೆಸುವ ಶಕ್ತಿ ಎಂದರು. ಬೇರೆ ಯಾವ ದೇಶದಲ್ಲಿಯೂ ಈ ಪ್ರಮಾಣದಲ್ಲಿ ಯುವಜನರ ಸಂಖ್ಯೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

'ನಿಮ್ಮ ವಯಸ್ಸು ವಿದ್ಯಾರ್ಜನೆ ಮಾಡುವ, ಆಟ-ಪಾಠದಲ್ಲಿ ತೊಡಗಿಸಿಕೊಳ್ಳುವ ವಯಸ್ಸು. ಜಗತ್ತನ್ನು ತಿಳಿದುಕೊಳ್ಳುವ ವಯಸ್ಸು. ಆದ್ದರಿಂದ ನೀವು ತಾರ್ಕಿಕ ಚಿಂತನೆ ಮಾಡಬೇಕು. ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಕಂಡುಕೊಳ್ಳಬೇಕು. ತಾರ್ಕಿಕ ಚಿಂತನೆಯಿಂದ ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು.

ಆರ್ಥಿಕವಾಗಿ ಸಬಲರಾಗಬೇಕು: ಮುಖ್ಯಮಂತ್ರಿ ಕಿವಿಮಾತು

ಆರ್ಥಿಕವಾಗಿ ಸಬಲರಾಗಬೇಕು: ಮುಖ್ಯಮಂತ್ರಿ ಕಿವಿಮಾತು

ರೈತ ಮಣ್ಣು, ಬಿಸಿಲು, ಕಲ್ಲು, ಮಳೆ, ಗಾಳಿ ಚಳಿಯೆನ್ನದೆ ದುಡಿಯುತ್ತಾನೆ. ಅವನ ಕೈಯ ರೇಖೆಗಳು ಅಳಿದರೂ ದುಡಿಮೆಯ ಮೂಲಕ ತನ್ನ ಹಣೆಬರಹ ಬರೆಯುತ್ತಾನೆ; ದೇಶದ ಹಣೆಬರಹವನ್ನೂ ಬರೆಯುತ್ತಾನೆ. ದೇವರು ಕಾರ್ಮಿಕರ ಶ್ರಮದಲ್ಲಿದ್ದಾನೆ; ರೈತರ ಬೆವರಿನಲ್ಲಿದ್ದಾನೆ ಎಂದು ಕವಿ ರವೀಂದ್ರನಾಥ ಟ್ಯಾಗೋರರು ಹೇಳಿದ್ದಾರೆ. ಇಂತರ ರೈತರ ಬಗ್ಗೆ ಗೌರವ ಇರಬೇಕು. ಬೆಲೆ ಕೊಡಬೇಕು. ಆದರೆ ರೈತ ಸಂಕಷ್ಟದಲ್ಲಿದ್ದಾನೆ. ಇದನ್ನು ಹಳ್ಳಿಗಳಿಗೆ ಭೇಟಿ ನೀಡಿದಾಗ ತಾವು ಕಣ್ಣಾರೆ ಕಂಡಿರುವುದಾಗಿ ಸೋದಾಹರಣವಾಗಿ ವಿವರಿಸಿದರು. ರೈತರ ಮಕ್ಕಳೂ ಉನ್ನತ ಸಾಧನೆ ಮಾಡಬೇಕು. ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಅಧಿಕಾರಕ್ಕೆ ಬಂದು ನಾಲ್ಕೇ ಘಂಟೆಯಲ್ಲಿ ಈ ಯೋಜನೆಯನ್ನು ಘೋಷಿಸಲಾಯಿತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ದೇಶದ ಒಟ್ಟು ಆದಾಯಕ್ಕೆ ಶೇ. 30 ರಷ್ಟು ಜನರು ಮಾತ್ರ ಕೊಡುಗೆ ನೀಡುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು , ಅದರಲ್ಲೂ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕಾಗಿ 4 ಲಕ್ಷ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಾರ್ಮಿಕರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ನಿಮ್ಮ ಕೋಣೆಯ ಗೋಡೆಯಲ್ಲಿ ಬರೆದಿಡಿ

ನಿಮ್ಮ ಕೋಣೆಯ ಗೋಡೆಯಲ್ಲಿ ಬರೆದಿಡಿ

"ನನ್ನ ಹಣೆಬರಹ ನಾನೇ ಬರೆಯುತ್ತೇನೆ"; ತಂದೆ ತಾಯಿಗಳ ಕನಸು ನನಸು ಮಾಡುತ್ತೇನೆ ಎಂದು ನಿಮ್ಮ ಕೋಣೆಯ ಗೋಡೆಯಲ್ಲಿ ಬರೆದಿಡಿ. ಅದಕ್ಕೆ ತಕ್ಕಂತೆ ಹೆಚ್ಚಿನ ಪರಿಶ್ರಮ ವಹಿಸಿ, ಸಾಧನೆ ಮಾಡಿ ಎಂದು ಸಲಹೆ ನೀಡಿದರು. 21ನೇ ಶತಮಾನ ಜ್ಞಾನದ ಶತಮಾನ. ಆದ್ದರಿಂದ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಜ್ಞಾನಾರ್ಜನೆ ಮಾಡಿ ಉತ್ತಮ ಸಾಧನೆ ಮಾಡಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಆತ ತನ್ನ ಸಾಧನೆಗಳ ಮೂಲಕ ಜೀವಂತ ಇರುತ್ತಾನೆ. ನೀವು ಕೂಡ ಇಂತಹ ಉನ್ನತ ಸಾಧನೆ ಮಾಡಬೇಕು. ಜನರು ನಿಮ್ಮನ್ನು ಪ್ರೀತಿಸುವಂತಹ, ಗೌರವಿಸುವಂತಹ ಸಾಧನೆ ಮಾಡಬೇಕು. ಆ ಮೂಲಕ ನಿಮ್ಮತನ ಉಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ಆರ್. ಅಶೋಕ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಗಳ ಸಂವಾದದಲ್ಲಿ ವಿದ್ಯಾರ್ಥಿ ಮತ್ತು ಸಿಎಂ‌ ನಡುವೆ ನಡೆದ ಸಂವಾದ ಈ ತರ ಇದೆ..

ಪೃಥ್ವಿ ಎಚ್ ಎಸ್-ನಾನು ವಿದ್ಯಾರ್ಥಿ ನಿಧಿ ಯೋಜನೆಯ ಹಣವನ್ನು ನನ್ನ ತಂದೆಗೆ ತೋಟದ ಕೆಲಸಕ್ಕೆ ನೀಡಿದೆ..ತಂದೆಗೆ ಖುಷಿಯಾಯಿತು

ಸಿಎಂ- ನಾನು ಹಣ ನೀಡಿರೋದು ನಿಮ್ಮ ವಿದ್ಯಾರ್ಜನೆಗೆ.ಆದರೂ ತೊಂದರೆಯಿಲ್ಲ.ಚೆನ್ನಾಗಿ ಕಲಿತು ದೊಡ್ಡ ಸ್ಥಾನದಲ್ಲಿ ಕೂತು ನಿನ್ನ ತಂದೆ ತಾಯಿಯನ್ನು ಚೆನ್ಬಾಗಿ ನೋಡು

ಲೋಹಿತ್- ಸರ್, ವಿದ್ಯಾನಿಧಿಯ ಮೊತ್ತವನ್ನು ಏರಿಕೆ ಮಾಡಬೇಕು

ಸಿಎಂ- ನೀನು ವಿದ್ಯಾನಿಧಿ ಯೋಜನೆಯ ಹಣವನ್ನು ಏನು ಮಾಡಿದೆ?ಮೊದಲು ಈ ಯೋಜನೆ ಯ ಹಣ ವಿದ್ಯಾರ್ಜನೆಗೆ ಬಳಕೆಯಾಗಲಿ..ನೀವು ಪರೀಕ್ಷೆ ಗಳಲ್ಲಿ ಉತ್ತಮ ಸಾಧನೆ ಮಾಡಿ..ನಿಮ್ಮ ಸಾದನೆ ನೋಡಿ ಹೆಚ್ಚಳ ಮಾಡುತ್ತೇನೆ

ಭಾವನಾ- ಸರ್ ರೈತರ ಮಕ್ಕಳಿಗೆ, ಬಡ ಮಕ್ಕಳಿಗೆ ಸರ್ಕಾರಿ ಕಾಂಪಿಟೇಟಿವ್ ಎಕ್ಸಾಂ ಗಳೊಗೆ ಕೋಚಿಂಗ್ ಸೆಂಟರ್ ಮಾಡಬಹುದಾ?

ಸಿಎಂ- ನಿಮ್ಮ ಸಲಹೆ ಚೆನ್ನಾಗಿದೆ.

ಭಾವನಾ- ಸರ್ ರೈತರ ಮಕ್ಕಳಿಗೆ, ಬಡ ಮಕ್ಕಳಿಗೆ ಸರ್ಕಾರಿ ಕಾಂಪಿಟೇಟಿವ್ ಎಕ್ಸಾಂ ಗಳೊಗೆ ಕೋಚಿಂಗ್ ಸೆಂಟರ್ ಮಾಡಬಹುದಾ?

ಸಿಎಂ- ನಿಮ್ಮ ಸಲಹೆ ಚೆನ್ನಾಗಿದೆ.ಮತ್ತು ಒಳ್ಳೆಯ ಕೋರಿಕೆಯಾಗಿದೆ..ಮುಖ್ಯಮಂತ್ರಿ ಮಾರ್ಗದರ್ಶಿ ಆ್ಯಪ್ ಮೂಲಕ ಕಾಂಪಿಟೇಟಿವ್ ಪರೀಕ್ಷೆ ಬರೆಯಲು ನೆರವಾಗಲಿದೆ.

ಹಿತಾಶ್ರೀ- ನನ್ನ ತಂದೆ ರೈತರು, ರೈತ ನಿಧಿಯಿಂದ ಕಾಲೇಜಿನ ಫೀಸ್ ಕಟ್ಟಿದೆ. ಮತ್ತು ನೀಟ್ ಎಕ್ಸಾಂ ಗೆ ಹಣ ವಿನಿಯೋಗಿಸಿದೆ.

ಸಿಎಂ- ಪಿಯುಸಿ ಆದ್ಮೇಲೆ ನೀಟ್, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸರ್ಕಾರ ನೆರವು ನೀಡುವ ಯೋಚನೆಯನ್ನು ಮಾಡಿದೆ

ಅಕ್ಷತಾ- ರೈತ ನಿಧಿಯ ಹಣ ಬಂದಾಗ ಆಶ್ಚರ್ಯವಾಗಿತ್ತು..ಪಿಜಿಗೆ ಹಣವನ್ನು ವಿನಿಯೋಗಿಸಿದೆ

ಸಿಎಂ- ಒಳ್ಳೆಯದಾಗಲಿ, ಚೆನ್ನಾಗಿ ಓದು

ಜೋಯಿಸ್ಟನ್- ಪಾಸ್ ಬುಕ್ ಗಮನಿಸಿದಾಗ ಹಣ ಬಂದಿರುವ ವಿಚಾರ ಗೊತ್ತಾಯಿತು. ಮನೆಯಿಂದ ಕಾಲೇಜಿಗೆ 60ಕೀಮೀ ಇದೆ. ಪ್ರಯಾಣದ ಖರ್ಚಿಗೆ ಉಪಯೋಗಿಸುತ್ತಿದ್ದೇನೆ

ಸಿಎಂ- ಒಳ್ಳೆಯದಾಗಲಿ

ಸಾನ್ವಿಕಾ ಶೆಟ್ಟಿ- ರೈತ ವಿದ್ಯಾ ನಿಧಿಯಿಂದ ತುಂಬಾ ಉಪಯೋಗ ಆಗಿದೆ.ಊಹಿಸಿರಲಿಲ್ಲ

ಸಿಎಂ- ಬೇರೆ ಸ್ಕಾಲರ್ಶಿಪ್ ಇದ್ದರೂ ರೈತ ವಿದ್ಯಾ ನಿಧಿ ಬರುತ್ತದೆ

ಡೇನಿಶಾ- ತುಂಬಾ ಧನ್ಯವಾದಗಳು

ಸಿಎಂ- ಶುಭವಾಗಲಿ

ನಿಶ್ಮಿತಾ- ರೈತ ವಿದ್ಯಾ ನಿಧಿ ಯನ್ನು ಪ್ರಾಜೆಕ್ಟ್ ವರ್ಕ್ ಗೆ ಉಪಯೋಗಿಸಿದ್ದೇನೆ.ರೈತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಬಹುದಾ?

ಸಿಎಂ- ಸರ್ಕಾರಕ್ಕೆ ಈ ಬಗ್ಗೆ ಚಿಂತನೆ ಇದೆ

ಮಂಜುನಾಥ್- ನನ್ನ ಕಾಲೇಜು ಫೀಸ್ ಕಟ್ಟಲು ಈ ಹಣ ನೆರವಾಯಿತು..ಮೊದಲು ಸಣ್ಣ ಅಮೌಂಟ್ ಅಂತಾ ಬೇಸರ ಆಯಿತು.ಆದರೆ ಅದೇ ಹಣ ಕಷ್ಟ ನಿವಾರಿಸಿತು..ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನ್ನು ಖಾಸಗಿ ಕಾಲೇಜು ರೀತಿ ಮಾಡಬಹುದಾ?

ಸಿಎಂ- ಒಳ್ಳೆಯ ವಿಚಾರ..ಮುಂದಿನ ದಿನದಲ್ಲಿ ಎಲ್ಲಾ ಪಾಲಿಟೆಕ್ನಿಕ್ ಕಾಲೇಜನ್ನು ಅಪ್ ಗ್ರೇಡ್ ಮಾಡುತ್ತೇವೆ..ಈ ಬಗ್ಗೆ ಸರ್ಕಾರ ಕ್ಕೆ ಯೋಚನೆ ಇದೆ..

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+