ಪ್ರಧಾನಿ ಮೋದಿ ಸ್ವಾಗತಕ್ಕೆ ಕಡಲನಗರಿ ಸಜ್ಜು; 2 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ, ಬಿಗಿ ಭಧ್ರತೆ

ಮಂಗಳೂರು, ಸೆಪ್ಟೆಂಬರ್ 2: ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಕಡಲನಗರಿ ಮಂಗಳೂರು ಸಜ್ಜಾಗಿದೆ. ಮಂಗಳೂರು ನಗರ ಹೊರವಲಯದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೆಳಗ್ಗಿನಿಂದಲೇ ಜನಸಾಗರವೇ ಹರಿದುಬರುತ್ತಿದೆ. ಸಂಪೂರ್ಣ ಖಾಕಿ ಭದ್ರತೆಯೊಂದಿಗೆ ಕಾರ್ಯಕ್ರಮದ ಮೈದಾನಕ್ಕೆ ಸಾರ್ವಜನಿಕರನ್ನು ಒಳಬಿಡಲಾಗುತ್ತಿದೆ.

ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿ ಮಧ್ಯಾಹ್ನ 12.55 ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ, ಕೇಂದ್ರ ಸಚಿವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಿದ್ದಾರೆ.. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.20ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ಪಣಂಬೂರು ನಲ್ಲಿರುವ ಎನ್ ಎಂ ಪಿ ಎ ಹೆಲಿಪ್ಯಾಡ್‌ಗೆ ಬರಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ಎನ್ ಎಂ ಪಿ ಎ ಹೆಲಿಪ್ಯಾಡ್‌ನಿಂದ ಒಂದೂವರೆ ಕೀಮೀ ದೂರದಲ್ಲಿರುವ ಬಂಗ್ರಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆಯುವ ಮಂಗಳೂರು ಬಂದರಿನ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಕಾಮಗಾರಿಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮ ಮಧ್ಯಾಹ್ನ 2.55 ರವರೆಗೆ ನಡೆಯಲಿದ್ದು, ಮತ್ತೆ ಪ್ರಧಾನಿ ಮೋದಿ ರಸ್ತೆ ಮಾರ್ಗದ ಮೂಲಕ ಎನ್ ಎಂ ಪಿ ಎ ಹೆಲಿಪ್ಯಾಡ್‌ನತ್ತ ತೆರಳಲಿದ್ದಾರೆ. ಬಳಿಕ ಒಂದು ಗಂಟೆ ಎನ್ ಎಂ ಪಿ ಎ ಯಲ್ಲಿ ಪಕ್ಷದ ಪ್ರಮುಖ ರೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. 4 ಗಂಟೆಗೆ ಎನ್ ಎಂ ಪಿ ಎ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

City Ready to Welcome Prime minister Narendra Modi

ಕಾರ್ಯಕರ್ತರನ್ನು 11.30ರ ಒಳಗೆ ಮೈದಾನ ಸೇರುವಂತೆ ಈಗಾಗಲೇ ಬಿಜೆಪಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜನರಲ್ಲಿ ಮನವಿ ಮಾಡಿದೆ. ಎಡಿಜಿಪಿ ಅಲೋಕ್ ಕುಮಾರ್, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮೈದಾನಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ

ಮೈದಾನಕ್ಕೆ ಒಳಪ್ರವೇಶಿಸುವ ಜನರು ನೀರಿನ ಬಾಟಲ್, ಕತ್ತರಿ, ಚೂರಿ ತರಬಾರದು. ಕಪ್ಪು ಬಟ್ಟೆಯನ್ನು ಧರಿಸಬಾರದು ಎಂದು ಈಗಾಗಲೇ ಭಧ್ರತೆ ದೃಷ್ಟಿಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ‌‌. ಮೈದಾನದಲ್ಲಿ ಹಾಕಲಾಗಿರುವ ಪೆಂಡಾಲ್ ಒಳಗೆ 80 ಸಾವಿರಕ್ಕೂ ಅಧಿಕ ಜನ ಕುಳಿತು ಕಾರ್ಯಕ್ರಮ ನೋಡಬಹುದಾಗಿದೆ.

City Ready to Welcome Prime minister Narendra Modi

ದ.ಕ ಕನ್ನಡ ಉಡುಪಿ ಜಿಲ್ಲೆಯಿಂದ ಎರಡು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ಸಾಧ್ಯತೆಗಳಿವೆ. ರಾಷ್ಟ್ರೀಯ ಹೆದ್ದಾರಿ ಬಳಿ ಕಾರ್ಯಕ್ರಮದ ಮೈದಾನ ಬರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಉಡುಪಿಗೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಗೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಭದ್ರತೆಗೆಂದು ಮೂರು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+