ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಕ್ಕೆ ಸುಬ್ರಹ್ಮಣ್ಯದಲ್ಲಿ 134 ಭಕ್ತರಿಂದ ಎಡೆ ಮಡೆ ಸ್ನಾನ ಸೇವೆ

|
Google Oneindia Kannada News

ಮಂಗಳೂರು, ಡಿಸೆಂಬರ್ 12: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವದ ಸಂದರ್ಭದಲ್ಲಿ ಎಡೆಮಡೆ ಸ್ನಾನವನ್ನು ನೂರಾರು ಭಕ್ತರು ನೆರವೇರಿಸಿದರು.

ಉಡುಪಿಯ ಶ್ರೀಕೃಷ್ಣ ಮಠದದಲ್ಲಿ ಮಡೆಸ್ನಾನದ ಬದಲಿಗೆ ಎಡೆಸ್ನಾನಉಡುಪಿಯ ಶ್ರೀಕೃಷ್ಣ ಮಠದದಲ್ಲಿ ಮಡೆಸ್ನಾನದ ಬದಲಿಗೆ ಎಡೆಸ್ನಾನ

ನಿನ್ನೆ ಮಂಗಳವಾರ (ಡಿಸೆಂಬರ್ 11) ಚಂಪಾಷಷ್ಠಿಯ ಮೊದಲ ದಿನ‌ 134 ಭಕ್ತರಿಂದ ಎಡೆಮಡೆ ಸ್ನಾನ ಉರುಳು ಸೇವೆ ನೆರವೇರಿದೆ. ದೇವರ ನೈವೇದ್ಯದ ಮೇಲೆ ಎಡೆಮಡೆ ಉರುಳು ಸೇವೆಯನ್ನು ಭಕ್ತರು ನೆರವೇರಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದ ಷಷ್ಠಿ ಜಾತ್ರೆಯಲ್ಲಿ ಎಡೆಸ್ನಾನ ಹರಕೆ ತೀರಿಸಿದ ಭಕ್ತರುಕುಕ್ಕೆ ಸುಬ್ರಹ್ಮಣ್ಯದ ಷಷ್ಠಿ ಜಾತ್ರೆಯಲ್ಲಿ ಎಡೆಸ್ನಾನ ಹರಕೆ ತೀರಿಸಿದ ಭಕ್ತರು

ಆಗಮ ಪಂಡಿತರ ಮಾರ್ಗದರ್ಶನದಲ್ಲಿ ಎಡೆಮಡೆ ಸ್ನಾನ ನೆರವೇರಿದ್ದು, ಇಂದು ಮತ್ತು ನಾಳೆ ಕೂಡ ಎಡೆ ಮಡೆ ಸ್ನಾನ ಸೇವೆ ನಡೆಯಲಿದೆ. ಚೌತಿ, ಪಂಚಮಿ ಹಾಗೂ ಷಷ್ಟಿ ದಿನದಂದು ಸೇವೆ ನೆರವೇರಲಿದೆ.

Champa shasti celebration in Kukke Subramanya

ಕ್ಷೇತ್ರದಲ್ಲಿ ಅನಾದಿ‌ ಕಾಲದಿಂದ ನಡೆದುಕೊಂಡು ಬರುತ್ತಿದ್ದಂತಹ ಮಡೆ ಸ್ನಾನಕ್ಕೆ ನ್ಯಾಯಾಲಯ ನಿಷೇಧ ಹೇರಿದೆ. ಬ್ರಾಹ್ಮಣರು ತಿಂದು ಉಳಿಸಿದಂತಹ ಎಲೆಯ ಮೇಲೆ ಭಕ್ತಾಧಿಗಳು ಈ‌ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಸೇವೆಗೆ ಇತ್ತೀಚಿನ ಕೆಲವು ವರ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

ಮಡೆಸ್ನಾನ ನಮ್ಮ ಹಕ್ಕು, ಅದಕ್ಕೆ ಅಡ್ಡ ಬರಬೇಡಿಮಡೆಸ್ನಾನ ನಮ್ಮ ಹಕ್ಕು, ಅದಕ್ಕೆ ಅಡ್ಡ ಬರಬೇಡಿ

ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಪದ್ಧತಿಯನ್ನು ನಿಷೇಧಗೊಳಿಸಿ ಆದೇಶ ಹೊರಡಿಸಿದ ಬಳಿಕ ಕ್ಷೇತ್ರದಲ್ಲಿ ದೇವರಿಗೆ ನೈವೇದ್ಯವಿಟ್ಟ ಅನ್ನವನ್ನು ಗೋವುಗಳಿಗೆ ತಿನ್ನಿಸಿದ ಬಳಿಕ ಆ ಎಲೆಯ ಮೇಲೆ ಭಕ್ತಾಧಿಗಳು ಉರುಳು‌ಸೇವೆ ಮಾಡುವ ಎಡೆಮಡೆಸ್ನಾನ ಪದ್ಧತಿಯನ್ನು ಆರಂಭಿಸಲಾಗಿದೆ.

English summary
134 devotees offered yede made snana during champa shasti celebration in Kukke Subramanya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X