ಕಾಸರಗೋಡು-ಬೈಂದೂರು ರೈಲಿನ ವೇಳಾಪಟ್ಟಿ
ಮಂಗಳೂರು, ಫೆ.9 : ಕಾಸರಗೋಡು-ಬೈಂದೂರು ಪ್ಯಾಸೆಂಜರ್ ರೈಲು ಸಂಚಾರಕ್ಕೆ ಸೋಮವಾರ ಚಾಲನೆ ದೊರೆಯಲಿದೆ. ಕೇಂದ್ರ ಸರ್ಕಾರ ಕಳೆದ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಈ ರೈಲನ್ನು ಘೋಷಣೆ ಮಾಡಿತ್ತು. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ದೆಹಲಿಯಿಂದಲೇ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
ಈ ರೈಲು ಸಂಚಾರದಿಂದಾಗಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜನರಿಗೆ ಸಹಾಯಕವಾಗಲಿದೆ. ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡಲಿರುವ ಭಕ್ತಾದಿಗಳಿಗೂ ಅನುಕೂಲವಾಗಲಿದೆ. [ರೈಲ್ವೆ ಯೋಜನೆಗಳಿಂದ ರಾಜ್ಯಕ್ಕೆ ಹೊರೆ : ಸಿದ್ದರಾಮಯ್ಯ]

ರೈಲು ಸಂಖ್ಯೆ 56666/ 56665ರ ಈ ರೈಲು 16 ಬೋಗಿಗಳನ್ನು ಹೊಂದಿದ್ದು ಕಾಸರಗೋಡು, ಬೈಂದೂರು ಸೇರಿ 18 ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಫೆ. 10ರಿಂದ ಈ ರೈಲು ಸಂಚಾರ ಆರಂಭಿಸಲಿದೆ. [ಬೆಂಗಳೂರು : 4 ನೂತನ ರೈಲುಗಳ ವೇಳಾಪಟ್ಟಿ]
ರೈಲಿನ ವೇಳಾಪಟ್ಟಿ : ಕಾಸರಗೋಡಿನಿಂದ ಪ್ರತಿದಿನ ಬೆಳಗ್ಗೆ 6.40ಕ್ಕೆ ಹೊರಡುವ ರೈಲು ಮಧ್ಯಾಹ್ನ 11.50ಕ್ಕೆ ಬೈಂದೂರು ತಲುಪಲಿದೆ. ಬೈಂದೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಟು ಸಂಜೆ 6.10ಕ್ಕೆ ಕಾಸರಗೋಡು ತಲುಪಲಿದೆ. [ವಿಜಯವಾಡ-ಹುಬ್ಬಳ್ಳಿ ನೂತನ ರೈಲಿನ ವೇಳಾಪಟ್ಟಿ]
ನಿಲ್ದಾಣಗಳು : ಈ ರೈಲು ಬಿಜೂರು, ಸೇನಾಪುರ, ಕುಂದಾಪುರ, ಬಾರ್ಕೂರು, ಉಡುಪಿ, ಇನ್ನಂಜೆ, ಪಡುಬಿದ್ರಿ, ನಂದಿಕೂರು, ಮೂಲ್ಕಿ, ಸುರತ್ಕಲ್, ತೋಕೂರು, ಮಂಗಳೂರು ಜಂಕ್ಷನ್, ತೊಕ್ಕೊಟ್ಟು, ಉಳ್ಳಾಲ, ಮಂಜೇಶ್ವರ, ಉಪ್ಪಳ ಹಾಗೂ ಕುಂಬ್ಳೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.












Click it and Unblock the Notifications