ಮಂಗಳೂರು: ಅನಂತಪದ್ಮನಾಭನಿಗೆ ವೈಭವದ ಬ್ರಹ್ಮಕಳಶೋತ್ಸವ
ಮಂಗಳೂರು, ಫೆಬ್ರವರಿ 08: ಇಲ್ಲಿನ ಕುಡುಪುವಿನ ಅನಂತಪದ್ಮನಾಭ ದೇವಾಲಯದಲ್ಲಿ ಫೆಬ್ರವರಿ 18ರಿಂದ 25ರ ವರೆಗೆ ಬ್ರಹ್ಮಕಳಶೋತ್ಸವ ಆಯೋಜಿಸಲಾಗಿದೆ.
ಫೆಬ್ರವರಿ 25ರಂದು ದೇವರಿಗೆ ಬ್ರಹ್ಮಕಳಶೋತ್ಸವ ನಡೆಯಲಿದೆ. ವಾರಗಳ ಕಾಲ ನಡೆಯುವ ಬ್ರಹ್ಮಕಳಶೋತ್ಸವ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತದಿಂದ ಭಕ್ತಾದಿಗಳು ಆಗಮಿಸಲಿದ್ದಾರೆ.
ಬ್ರಹ್ಮಕಳಶೋತ್ಸವಕ್ಕೆ ಆಗಮಿಸುವ ಭಕ್ತಾದಿಗಳು ದೇವರಿಗೆ ಹಸಿರು ಹೊರೆ ಕಾಣಿಕೆ ಅರ್ಪಿಸುವುದು ಮುಂಚಿನಿಂದಲೂ ನಡೆದು ಬಂದಿರುವ ಪ್ರತೀತಿ.

ಬ್ರಹ್ಮಕಳಶೋತ್ಸವದ ಬಗ್ಗೆ ಹಾಗೂ ಹೊರೆ ಕಾಣಿಕೆ ಬಗ್ಗೆ ಪೂರ್ಣ ಮಾಹಿತಿಯನ್ನು ನಾಳೆ (ಫೆ.09) ಮಧ್ಯಾಹ್ನ 12ಗಂಟೆಗೆ ನಗರದ ವುಡ್‌ಲ್ಯಾಂಡ್ ಹೊಟೆಲ್‌ನಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಬ್ರಹ್ಮಕಳಶೋತ್ಸವ ಸಮಿತಿಯ ಕಡಂಬೋಡಿ ಮಹಾಬಲ ಪೂಜಾರಿ, ವಾಸುದೇವ ರಾವ್, ಪುಷ್ಪರಾಜ ಪೂಜಾರಿ ಹೇಳಿದ್ದಾರೆ.












Click it and Unblock the Notifications