• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿಗೆ ಬಂದಿಳಿದ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್

|

ಮಂಗಳೂರು, ಫೆಬ್ರವರಿ 24: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಜನರಿಗೆ ಇಂದು ಭಾನುವಾರ ಅಚ್ಚರಿ ಕಾದಿತ್ತು. ಪ್ರಯಾಣಿಕರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದವರಿಗೆ ನಿಜಕ್ಕೂ ಪರಮಾಶ್ಚರ್ಯ.

ಐಶ್ವಯಾ ರೈ ಮಗಳು ಆರಾಧ್ಯ ಭಾರತದ ಭವಿಷ್ಯದ ಪ್ರಧಾನಿ!

ಯಾಕಂದ್ರೆ ವಿಮಾನ ನಿಲ್ದಾಣದಲ್ಲಿ ನೆರೆದಿದ್ದವರಿಗೆ ತುಳುನಾಡಿನ ಕುಡಿ, ಖ್ಯಾತ ಬಾಲಿವುಡ್ ತಾರೆ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ದರ್ಶನವಾಗಿತ್ತು.

ಚಿತ್ರಗಳು : ಮಂಗಳೂರಿಗೆ ಬಂದ ಐಶ್ವರ್ಯ ರೈ

ಇಂದು ಐಶ್ವರ್ಯಾ ರೈ ಬಚ್ಚನ್ ಹಾಗೂ ಪತಿ ಅಭಿಷೇಕ್ ಬಚ್ಚನ್ ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರು ಮೂಲದವರಾಗಿರುವ ಐಶ್ವರ್ಯಾ ರೈ ತನ್ನ ಚಿಕ್ಕಪ್ಪನ ಶ್ರಾದ್ಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ್ದಾರೆ.

ಹೊಲ್ಲಾಂಡೆ ಜೊತೆ ಬನಾರಸಿ ಸೀರೆಯುಟ್ಟ ಐಶ್ವರ್ಯಾ ರೈ ಪೋಸ್

ಪತಿ ಅಭಿಷೇಕ್ ಬಚ್ಚನ್ ಕೂಡ ಪತ್ನಿ ಜೊತೆ ಆಗಮಿಸಿದ್ದು, ಐಶ್ವರ್ಯಾ ರೈ ಕುಟುಂಬಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಬರಮಾಡಿಕೊಂಡರು.ಆದರೆ ಐಶ್ - ಅಭಿಷೇಕ್ ಬಚ್ಚನ್ ದಂಪತಿ ಮುದ್ದಿನ ಮಗಳಾದ ಆರಾಧ್ಯ ಮಾತ್ರ ಆಗಮಿಸಿಲ್ಲ.

English summary
Bollywood Actress Aishwarya Rai Bachchan arrived to Mangalore today.Her husband Abhishek Bachchan has come along with her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X