ಕರ್ನಾಟಕಕ್ಕೆ ಬ್ಲಿಂಕಿಟ್ ಗುಡ್‌ನ್ಯೂಸ್: ಈ ನಗರದಲ್ಲೂ ಸೇವೆ ಪ್ರಾರಂಭ!
ರಾಜ್ಯದ ಮತ್ತೊಂದು ಪ್ರಮುಖ ನಗರದಲ್ಲಿ ಬ್ಲಿಂಕಿಟ್ ತನ್ನ ಸೇವೆಗಳನ್ನು ನೀಡುವುದಕ್ಕೆ ಮುಂದಾಗಿದೆ. 10 ನಿಮಿಷದಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ತಲುಪಿಸುವ ಬ್ಲಿಂಕಿಟ್ ಇದೀಗ ಬೆಂಗಳೂರು ಮಹಾನಗರದ ನಂತರ ಮತ್ತೊಂದು ಪ್ರಮುಖ ನಗರದಲ್ಲಿ ಹೊಸ ಸೇವೆ ಪ್ರಾರಂಭಿಸುವುದಕ್ಕೆ ಮುಂದಾಗಿದೆ. ಅದರ ವಿವರ ಇಲ್ಲಿದೆ. ಬ್ಲಿಂಕಿಟ್ ಸಹ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಅವರು ಈ ಬಗ್ಗೆ ಅಪ್ಡೇಟ್‌ವೊಂದನ್ನು ಕೊಟ್ಟಿದ್ದಾರೆ.
ದೇಶದಾದ್ಯಂತ ಬ್ಲಿಂಕಿಟ್ ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಬ್ಲಿಂಕಿಟ್‌ಗೆ ಅಪಾರ ಪ್ರಮಾಣದ ಗ್ರಾಹಕರು ಇದ್ದಾರೆ. ಇದೀಗ ಬ್ಲಿಂಕಿಟ್ ತನ್ನ ಸೇವೆಯನ್ನು ಕರ್ನಾಟಕದ ಮತ್ತೊಂದು ಪ್ರಮುಖ ನಗರವಾದ ಮಂಗಳೂರಿನಲ್ಲೂ ತನ್ನ ಸೇವೆಯನ್ನು ವಿಸ್ತರಿಸುತ್ತಿರುವುದಾಗಿ ಹೇಳಿದೆ. ಈ ಮೂಲಕ ಬೆಂಗಳೂರಿನಂತೆಯೇ ಮಂಗಳೂರಿನ ಜನರಿಗೂ ಗುಡ್‌ನ್ಯೂಸ್ ಕೊಡಲಾಗಿದೆ. ಮಂಗಳೂರಿನ ಯಾವೆಲ್ಲ ಭಾಗದಲ್ಲಿ ಬ್ಲಿಂಕಿಟ್ ತನ್ನ ಸೇವೆ ಪ್ರಾರಂಭಿಸುತ್ತಿದೆ ಎನ್ನುವ ವಿವರ ಮುಂದಿದೆ.

ಬ್ಲಿಂಕಿಟ್ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಪ್ರಮುಖ ಇ - ಕಾಮರ್ಸ್‌ಗಳಲ್ಲಿ ಒಂದಾಗಿದೆ. ಮಾರುಕಟ್ಟೆಗೆ ಬಂದ ಕೆಲವೇ ತಿಂಗಳುಗಳಲ್ಲಿ ಬ್ಲಿಂಕಿಟ್ ತನ್ನ ಸೇವೆಯನ್ನ ವಿಸ್ತರಿಸಿಕೊಳ್ಳುವುದರ ಮೂಲಕ ದೈತ್ಯ ಇ - ಕಾಮರ್ಸ್‌ಗಳಿಗೆ ಶಾಕ್ ಕೊಟ್ಟಿದೆ. ರಾಜ್ಯದಲ್ಲೂ ಇದರ ಸೇವೆ ವಿಸ್ತರಣೆ ಆಗುತ್ತಿದೆ. ಗ್ರಾಹಕರಿಗೆ ಬೇಕಾಗುವ ತುರ್ತು ವಸ್ತುಗಳನ್ನು ಅಥವಾ ಅಗತ್ಯ ವಸ್ತುಗಳನ್ನು ಕೆಲವೇ ನಿಮಿಷಗಳಲ್ಲಿ ತಲುಪಿಸುವ ಮೂಲಕ ಈ ಕಂಪನಿ ಫೇಮಸ್ ಆಗಿದೆ. ಇದೀಗ ಈ ಕಂಪನಿ ಮಂಗಳೂರಿನಲ್ಲೂ ತನ್ನ ಸೇವೆಯನ್ನ ಪ್ರಾರಂಭಿಸಲು ಮುಂದಾಗಿದೆ. ಮಂಗಳೂರಿನಲ್ಲೂ ಸೇವೆ ಪ್ರಾರಂಭಿಸುತ್ತಿರುವ ಬಗ್ಗೆ ಬ್ಲಿಂಕಿಟ್ ಸಹ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ಸ್ ಕೊಟ್ಟಿದ್ದಾರೆ.
ಮಂಗಳೂರಿನ ಈ ಭಾಗದಲ್ಲಿ ಬ್ಲಿಂಕಿಟ್ ಸೇವೆ: ಮಂಗಳೂರಿನಲ್ಲಿ ಬ್ಲಿಂಕಿಟ್ ಸೇವೆ ಪ್ರಾರಂಭವಾಗುತ್ತಿದೆ. ಮಂಗಳೂರು ಕೇಂದ್ರವಾಗಿ ಉರ್ವ, ಲೇಡಿಹಿಲ್, ಅತ್ತಾವರ, ಬೆಜೈ, ಕದ್ರಿ, ಕೊಟ್ಟಾರ, ಪಿವಿಎಸ್ ಹಾಗೂ ಕಂಕನಾಡಿ ಭಾಗದಲ್ಲಿ ಬ್ಲಿಂಕಿಟ್ ಸೇವೆ ಪ್ರಾರಂಭವಾಗಲಿದೆ ಎಂದು ಸಂಸ್ಥೆ ಘೋಷಿಸಿದೆ. ಇದು ಈ ಭಾಗದ ಜನರಲ್ಲಿ ಸಂತೋಷನ್ನುಂಟು ಮಾಡಿದೆ.
ಕರ್ನಾಟಕದ ಪ್ರಮುಖ ನಗರಗಳಲ್ಲಿ ಮಂಗಳೂರು ಸಹ ಒಂದಾಗಿದೆ. ಇದೀಗ ಇನ್ಮುಂದೆ ಇಲ್ಲೂ ಈ ಸಂಸ್ಥೆಯ ಸೇವೆ ಸಿಗಲಿದ್ದು. ಜನ ಅವರಿಗೆ ಬೇಕಾದ ವಸ್ತುಗಳನ್ನು ಕಡಿಮೆ ಅವಧಿಯಲ್ಲಿ ಅಥವಾ ಕೊನೆ ಕ್ಷಣದಲ್ಲಿ ತೆಗೆದುಕೊಳ್ಳಲು ಅನುಕೂಲ ಆಗಲಿದೆ. ಅಗತ್ಯ ವಸ್ತುಗಳನ್ನು ಕೆಲವೇ ನಿಮಿಷದಲ್ಲಿ ಈ ಕಂಪನಿ ಗ್ರಾಹಕರಿಗೆ ತಲುಪಿಸುತ್ತಿದೆ. ಸಣ್ಣ ಸಣ್ಣ ಸ್ಟೋರ್‌ಗಳ ಮೂಲಕ ಈ ಕಂಪನಿ ಕನೆಕ್ಟ್ ಆಗಿದೆ.
ಇನ್ನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನಾಚರಣೆ ಬರುವ ಹಿನ್ನೆಲೆಯಲ್ಲಿ ಇದರ ಬೇಡಿಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೊಸ ವರ್ಷ ಹಾಗೂ ವರ್ಷಾಂತ್ಯದಲ್ಲಿ ಬ್ಲಿಂಕಿಟ್‌ಗೆ ಭಾರೀ ಬೇಡಿಕೆ ಬಂದಿತ್ತು. ಇದೀಗ ಪ್ರೇಮಿಗಳ ದಿನಾಚರಣೆ ಸಮೀಪವಿರುವಾಗಲೇ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ.












Click it and Unblock the Notifications