ಮಂಗಳೂರು; ಭೀಕರ ಅಪಘಾತ, ನವ ದಂಪತಿ ದುರ್ಮರಣ
ಮಂಗಳೂರು, ಅಕ್ಟೋಬರ್ 27: ಬೈಕ್ ಮತ್ತು ಲಾರಿ ನಡುವೆ ಅಪಘಾತ ನಡೆದು ದಂಪತಿಗಳು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ಸಂಜೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪ ಈ ಅಪಘಾತ ನಡೆದಿದೆ. ಬೈಕ್‌ನಲ್ಲಿದ್ದ ಪ್ರಿಯಾ ಫೆರ್ನಾಂಡಿಸ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ರಾಯನ್ ಫೆರ್ನಾಂಡಿಸ್ (34) ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು.
ಚಲಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ, ಬೈಕ್ ಮೇಲೆ ಹರಿದಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ದಂಪತಿಗಳು ಮೃತಪಟ್ಟಿದ್ದಾರೆ. ಭಾರಿ ಗಾತ್ರದ ಟ್ರಕ್ ಹರಿದಿದ್ದರಿಂದ ಬೈಕ್ ಜಖಂಗೊಂಡಿದೆ.

ಮಂಗಳೂರಿನ ಬಜಾಲ್ ಮೂಲದ ರಾಯನ್ ಫೆರ್ನಾಂಡಿಸ್ ಹತ್ತು ದಿನಗಳಿಂದ ಉಳ್ಳಾಲ ಮಾಸ್ತಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾಯನ್ ಮತ್ತು ಪ್ರಿಯಾ ದಂಪತಿಗಳಿಬ್ಬರೂ ಕಂಕನಾಡಿ ಫಾದರ್ ಮುಲ್ಸರ್ಸ್ ಆಸ್ಪತ್ರೆಯ ಸಿಬ್ಬಂದಿಗಳು.
ಮಂಗಳವಾರ ಆಸ್ಪತ್ರೆಯಿಂದ ಕೆಲಸ ಮುಗಿಸಿಕೊಂಡು ವಾಪಸ್ ಆಗುವಾಗ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪ್ರಿಯಾ ಮತ್ತು ರಾಯನ್ ಕೆಲವು ದಿನಗಳ ಹಿಂದೆಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಬಳಿಕ ರಸ್ತೆಯಲ್ಲಿ ಕೆಲವು ಸಮಯ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಬೈಕ್ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.












Click it and Unblock the Notifications