ಭಾಸ್ಕರ ಶೆಟ್ಟಿ ಕೊಲೆ ಆರೋಪಿ ರಾಜೇಶ್ವರಿ ಶೆಟ್ಟಿ ಆಸ್ಪತ್ರೆಗೆ
ಮಂಗಳೂರು, ಜೂನ್ 10: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ದೇವಿಯನ್ನು ಅನಾರೋಗ್ಯದ ಕಾರಣಕ್ಕೆ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ರಾತ್ರಿ ರಾಜೇಶ್ವರಿ ದೇವಿ ತನಗೆ ತಲೆ ತಿರುಗುತ್ತಿದೆ, ಹೊಟ್ಟೆ ನೋವು ಎಂದು ಗೋಳಿಟ್ಟಿದ್ದರು. ನಂತರ ಆಕೆಯನ್ನು ಆಗಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

"ರಕ್ತದ ಒತ್ತಡ ಹೆಚ್ಚಾಗಿರುವುದು ಕಂಡು ಬಂದಿದೆ. ಇನ್ನಿತರ ಪರೀಕ್ಷೆಗಳನ್ನು ಮಾಡಬೇಕಿದೆ," ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಕಳೆದ 9 ತಿಂಗಳುಗಳಿಂದ ರಾಜೇಶ್ವರಿ ಶೆಟ್ಟಿ ಜೈಲಿನಲ್ಲಿದ್ದಾರೆ. ಸದ್ಯ ಅವರು ಜಾಮೀನು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವ ಸಿದ್ಧತೆ ನಡೆಸಿದ್ದಾರೆ.












Click it and Unblock the Notifications