ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದ ಅಪ್ಡೇಟ್
Bengaluru-Mangaluru Vande Bharat Train: ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಐಷಾರಾಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಮಾಡುತ್ತಿವೆ. ಇದೀಗ ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು ನಡುವೆ ಈ ರೈಲು ಸೇವೆಯ ಬಿಗ್ ಅಪ್ಡೇಟ್‌ವೊಂದನ್ನು ಸಚಿವ ವಿ.ಸೋಮಣ್ಣ ಅವರು ಹೊರಹಾಕಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಅಗತ್ಯ ಇರುವ ವಿದ್ಯುತ್ ಸಂಪರ್ಕದ ಕಾಮಗಾರಿಯಲ್ಲಿ 22 ಕಿಲೋ ಮೀಟರ್ ಪೂರ್ಣಗೊಂಡಿದೆ. ಉಳಿದ 33 ಕಲೋ ಮೀಟರ್ ಕಾಮಗಾರಿ ಪ್ರಗತಿಯಲ್ಲಿದೆ. ಇದು ನಾಲ್ಕು ಜಿಲ್ಲೆಯ ಜನರಿಗೆ ಅನುಕೂಲ ಆಗಲಿದೆ. ಬೆಂಗಳೂರು, ತುಮಕೂರು, ಹಾಸನ, ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಮಾಡಲಿದ್ದು,ಈ ಜಿಲ್ಲೆಗಳ ಜನರಿಗೆ ಭಾರೀ ಅನುಕೂಲ ಆದಂತಾಗಲಿದೆ.

ಹಾಸನ-ಮಂಗಳೂರು ನಡುವಿನ ರೈಲ್ವೆ ಮಾರ್ಗದಲ್ಲಿ 57 ಸುರಂಗ, 700 ಸೇತುವೆಗಳಿವೆ. ಡಬ್ಲಿಂಗ್ ಮಾಡಲು ಸರ್ವೆ ಮಾಡಲಾಗಿದೆ. 50,000 ಕೋಟಿ ರೂಪಾಯಿ ಅಗತ್ಯವಿದೆ. ಈ ಸಂಬಂಧ ಡಿಪಿಆರ್ ಮಾಡಿ ಟೆಂಡರ್ ಕರೆಯಲಾಗುವುದು ಎಂದು ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.
ಬೇಲೂರು-ಹಾಸನ ರೈಲ್ವೆ ಮಾರ್ಗಕ್ಕೆ ಅಗತ್ಯ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಜುಲೈ 20ರೊಳಗೆ ಹಸ್ತಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಡೂರು, ಚಿಕ್ಕಮಗಳೂರು, ಬೇಲೂರು ಮಾರ್ಗದ 68 ಕಿಲೋ ಮೀಟರ್ ಕಾಮಗಾರಿ ಪ್ರಗತಿಯಲ್ಲಿದೆ. ಇದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಇತ್ತೀಚೆಗಷ್ಟೇ ತಿಳಿಸಿದ್ದರು.
ಕರ್ನಾಟಕದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 10 ಮಾರ್ಗಗಳಲ್ಲಿ ಸಂಚಾರ ಮಾಡುತ್ತಿದೆ. ಬೆಂಗಳೂರು - ಧಾರವಾಡ, ಮಂಗಳೂರು - ಮಡಗಾಂವ್, ಹುಬ್ಬಳ್ಳಿ - ಪುಣೆ, ಬೆಂಗಳೂರು - ಕಲಬುರಗಿ, ಮೈಸೂರು - ಚೆನ್ನೈ, ಬೆಂಗಳೂರು - ಹೈದರಾಬಾದ್, ಮಂಗಳೂರು - ತಿರುವನಂತಪುರಂ, ಮೈಸೂರು - ಚೆನ್ನೈ, ಬೆಂಗಳೂರು - ಕೊಯಂಬತ್ತೂರು, ಬೆಂಗಳೂರು - ಮಧುರೈ ಒಟ್ಟು ಮಾರ್ಗಗಳಲ್ಲಿ ಸಂಚಾರ ಮಾಡುತ್ತಿದೆ. ಇನ್ನೂ ಬೆಂಗಳೂರು-ಮಂಗಳೂರು ಮಾರ್ಗ ಆದ್ರೆ ಒಟ್ಟು 11 ಮಾರ್ಗಗಳಲ್ಲಿ ವಂದೇ ಭಾರತ್ ಸಂಚಾರ ಮಾಡಿದಂತಾಗಲಿದೆ.












Click it and Unblock the Notifications