ಸೋನು ಸೂದ್ ಮೆಚ್ಚುಗೆ ಪಡೆದ ಬಂಟ್ವಾಳದ ಛಾಯಾಗ್ರಾಹಕ
ಮಂಗಳೂರು, ಜುಲೈ 05; ದೇಶದಲ್ಲಿ ಕೊರೊನಾ ಸಂಕಷ್ಟದ ಕಾಲದಲ್ಲಿ ಹೆಚ್ಚು ಸುದ್ದಿಯಲ್ಲಿರುವ ನಟ ಸೋನು ಸೂದ್. ಬಡಜನರ ನೆರವಿಗೆ ನಿಂತ ಬಾಲಿವುಡ್ ನಟ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ದೇಶಾದ್ಯಾಂತ ಸೋನು ಸೂದ್ ಅಭಿಮಾನಿಗಳು ಒಂದಲ್ಲಾ ಒಂದು ರೀತಿ ಅಭಿಮಾನವನ್ನು ಪ್ರದರ್ಶನ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಭಿಮಾನಿ ತೋರಿಸಿದ ಪ್ರೀತಿಗೆ ಸ್ವತಃ ಸೋನು ಸೂದ್ ಸಂತಸಗೊಂಡಿದ್ದಾರೆ.
ಬಂಟ್ವಾಳದ ಛಾಯಾಗ್ರಾಹಕ ಶ್ರೀಪ್ರಸಾದ್ ಆಚಾರ್ಯ ಸೋನು ಸೋದ್ ಮೇಲಿನ ಅಭಿಮಾನವನ್ನು ತನ್ನ ಕಾರಿನ ತುಂಬಾ ಫೋಟೋ, ಕೋವಿಡ್ ಸಂದರ್ಭದ ನೆರವಿನ ಚಿತ್ರಗಳು, ಲೇಖನಗಳನ್ನು ಸ್ಟಿಕ್ಕರಿಂಗ್ ಮಾಡುವ ಮೂಲಕ ತೋರಿಸಿದ್ದಾರೆ.

ಶ್ರೀ ಪ್ರಸಾದ್ ಆಚಾರ್ಯ ಇಯಾನ್ ಕಾರಿನ ಮೇಲೆಲ್ಲಾ ಸೋನು ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಕಾರಿನ ಬಾನೆಟ್‌ನಲ್ಲಿ ಸೋನು ಸೂದ್ ಚಿತ್ರವನ್ನು ಹಾಕಿದ್ದಾರೆ. ಇನ್ನುಳಿದ ಗಾಡಿಯ ಭಾಗದಲ್ಲಿ ಸೋನು ಸೂದ್ ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆಯ ವಿವರವಿದೆ.
ಶ್ರೀಪ್ರಸಾದ್ ಮತ್ತು ಅವರ ತಂಗಿ ಉಷಾ ಜಗದೀಶ್ ಆಚಾರ್ಯ ಸೋನು ಸೋದ್ ಅವರ ಅಪ್ಪಟ ಅಭಿಮಾನಿಗಳು. ಕಾರಿನಲ್ಲಿ ಸ್ಟಿಕ್ಕರಿಂಗ್ ಮಾಡುವ ಮೂಲಕ ಅಭಿಮಾನವನ್ನು ತೋರಿಸಿದ್ದಾರೆ. ಕಾರ್ ಮರುವಿನ್ಯಾಸಗೊಳಿಸಲು ತಂಗಿ ಉಷಾ ನೀಡಿದ ಸಲಹೆಯೇ ಕಾರಣವಾಗಿದೆ.

"ಕೋವಿಡ್ ಸಂದರ್ಭದಲ್ಲಿ ಸೋನು ಸೂದ್ ನೀಡಿದ ಸೇವೆ ಎಂದಿಗೂ ಅಮರವಾಗಿರುತ್ತದೆ. ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೆಂದು ತಿಳಿಯದೇ ಈ ಮೂಲಕ ಗೌರವ ತೋರಿಸಿದ್ದೇವೆ" ಎನ್ನುತ್ತಾರೆ ಶ್ರೀ ಪ್ರಸಾದ್ ಆಚಾರ್ಯ.












Click it and Unblock the Notifications