ಗೋವಾದಿಂದ ಮೀನಿನ ಮೇಲೆ ನಿಷೇಧ: ಮಾತುಕತೆಗೆ ಮುಂದಾದ ಕರ್ನಾಟಕ
ಮಂಗಳೂರು, ನವೆಂಬರ್ 18: ಗೋವಾ ಸರ್ಕಾರವು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳ ಮೀನುಗಳನ್ನು 6 ತಿಂಗಳ ಕಾಲ ನಿರ್ಬಂಧಿಸಿರುವುದರ ಬಗ್ಗೆ ಮಾತುಕತೆ ನಡೆಸುವುದಾಗಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಗೋವಾ ಸರ್ಕಾರದ ನಿರ್ಧಾರದಿಂದ ನಮ್ಮ ರಾಜ್ಯದ ಜನರ ಹಿತದೃಷ್ಟಿಗೆ ಧಕ್ಕೆ ಉಂಟಾಗಲು ಬಿಡುವುದಿಲ್ಲ ಎಂದಿದ್ದಾರೆ.
ಗೋವಾ ಸರ್ಕಾರ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳ ಮೀನುಗಳನ್ನು 6 ತಿಂಗಳ ಕಾಲ ನಿರ್ಬಂಧಿಸಿದೆ. ರಾಜ್ಯದ ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸರ್ಕಾರ ಹೇಳಿದೆ.
ಆರಂಭಿಕ ಹಂತದಲ್ಲಿ 6 ತಿಂಗಳ ಕಾಲ ಹೊರ ರಾಜ್ಯಗಳ ಮೀನುಗಳನ್ನು ನಿರ್ಭಂದಿಸುತ್ತಿದ್ದೇವೆ. ಪ್ರಯೋಗಾಲಯ ತೆರೆಯುವುದು ತಡವಾದಲ್ಲಿ ನಿರ್ಬಂಧ ಮತ್ತೆ ಆರು ತಿಂಗಳು ವಿಸ್ತರಣೆಯಾಗಬಹುದು' ಎಂದು ಅಲ್ಲಿನ ಸಚಿವರು ವಿವರಣೆ ನೀಡಿದ್ದಾರೆ.

ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಯುಟಿ ಖಾದರ್, ಗೋವಾ ಸರ್ಕಾರದ ಕ್ರಮ ಆಧಾರ ರಹಿತವಾಗಿದೆ. ನಿಷೇಧ ಹಿಂಪಡೆಯದಿದ್ದರೆ, ರಾಜ್ಯ ಸರ್ಕಾರವು ಮಾತುಕತೆ ನಡೆಸಲಿದೆ. ಆದರೆ, ಇದಕ್ಕೂ ಒಪ್ಪದಿದ್ದರೆ, ರಾಜ್ಯದಿಂದ ಗೋವಾ ಕಡೆಗೆ ಮೀನು ಹರಿಯದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.
ಇಂಥ ನಿರ್ಧಾರ ಕೈಗೊಳ್ಳುವ ಮುನ್ನ ಅಕ್ಕ ಪಕ್ಕದ ರಾಜ್ಯಗಳ ಜತೆ ಮಾತುಕತೆ ನಡೆಸುವ ಸೌಜನ್ಯವನ್ನು ಇಟ್ಟುಕೊಂಡಿಲ್ಲ ಎಂದು ಗೋವಾ ಸರ್ಕಾರದ ಮೇಲೆ ಕಿಡಿಕಾರಿದರು.












Click it and Unblock the Notifications