• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಥಿಂಥ ಉಪ್ಪಿನಕಾಯಿ ನೀನಲ್ಲ, ನಿನ್ನಂಥ ಉಪ್ಪಿನಕಾಯಿ ಇನ್ನಿಲ್ಲ!

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಏಪ್ರಿಲ್ 25: ಉಪ್ಪಿನಕಾಯಿ ಇಷ್ಟಪಡದವರೇ ವಿರಳ. ಮೃಷ್ಟಾನ್ನವನ್ನೇ ಬಡಿಸಿ. ಆದರೆ, ಬಟ್ಟಲ ತುದಿಯಲ್ಲಿ ಉಪ್ಪಿನಕಾಯಿ ಇದ್ದರೆ ಊಟದ ಮಜವೇ ಬೇರೆ ಎಂಬುದು ಊಟ ಬಲ್ಲವರ ಮಾತು. ಆದರೆ, ಉಪ್ಪಿನಕಾಯಿ ಆರೋಗ್ಯ ಕೆಡಿಸುತ್ತದೆ; ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಉಪ್ಪಿನಕಾಯಿಗೆ ಕಡಿವಾಣ ಹಾಕುವವರಿಗೊಂದು ಸಿಹಿ ಸುದ್ದಿಯಿದೆ.

ರುಚಿಕರವಾದ ಊಟ ಹಾಗೂ ಆರೋಗ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಳಕೆಯ ಸುವರ್ಣ ಕ್ಲಿನಿಕ್‍ನ ಸಂಶೋಧನಾ ನಿರತ ವೈದ್ಯರು ಆಯುರ್ ಎಂಬ ಹೆಸರಿನ ಆಯುರ್ವೇದ ಉಪ್ಪಿನಕಾಯಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.[ಪ್ರಚೋದನಕಾರಿ ಪೋಸ್ಟ್, 'ವೀರ ಕೇಸರಿ' ಫೇಸ್ಬುಕ್ ಪೇಜ್ ವಿರುದ್ಧ ಕೇಸ್]

ಅರ್ವ ಪ್ರೋಡಕ್ಟ್ಸ್ ಸಂಸ್ಥೆಯಿಂದ ಆಯುರ್ ಡಯಟ್ ಉಪ್ಪಿನಕಾಯಿ ಮಾರುಕಟ್ಟೆಗೆ ಬಂದಿದ್ದು ರುಚಿಯುಕ್ತ ಉತ್ಪನ್ನಗಳು ಆರೋಗ್ಯ ರಕ್ಷಣಾ ವಿಷಯದಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಸಫಲವಾಗಿವೆ. ಆಯುರ್ ಡಯಟ್ ಉತ್ಪನ್ನಗಳು ರೋಗಿಗಳಲ್ಲಿ ಪಥ್ಯಾಹಾರವಾಗಿ ಕೆಲಸ ಮಾಡುವುದರಿಂದ ರೋಗ ಲಕ್ಷಣಗಳು ಬೇಗನೆ ವಾಸಿಯಾಗುತ್ತವೆ ಎಂಬುದು ಗಮನಾರ್ಹ.[ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]

ಆಯುರ್ವೇದ ಕಲ್ಪನೆಯಲ್ಲಿ ತಯಾರಾದ ಉಪ್ಪಿನಕಾಯಿ

ಆಯುರ್ವೇದ ಕಲ್ಪನೆಯಲ್ಲಿ ತಯಾರಾದ ಉಪ್ಪಿನಕಾಯಿ

ಆಯುರ್ವೇದ ಔಷಧದ ಕಲ್ಪನೆಯಲ್ಲಿ ನಿಂಬೂಕ, ಸೈಂಧವ, ಅಶ್ವಗಂಧ, ವಚಾ, ಗೋಕ್ಷುರ ಔಷಧ ಗಿಡಮೂಲಿಕೆಗಳನ್ನು ಬಳಸಿ ಲಿಂಬೆ ಹುಳಿಯ ಉಪ್ಪಿನಕಾಯ ತಯಾರಿಸಲಾಗಿದೆ. ಇದು ರಕ್ತದೊತ್ತಡ, ಮಧುಮೇಹ, ಕೊಲೆಸ್ಟೆರಾಲ್ ನಿಯಂತ್ರಣ ಹಾಗೂ ರೋಗ ಪ್ರತಿಬಂಧಕವಾಗಿ ಮತ್ತು ಕಾಮಾಲೆ ರೋಗಿಗಳಲ್ಲಿ ಪಥ್ಯಾಹಾರವಾಗಿ ಕೆಲಸ ಮಾಡುತ್ತದೆ.

ನೆಲ್ಲಿಕಾಯಿ ಉಪ್ಪಿನಕಾಯಿ

ನೆಲ್ಲಿಕಾಯಿ ಉಪ್ಪಿನಕಾಯಿ

ಇದೇ ರೀತಿ ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ಶಂಖಪುಷ್ಪ, ವಚಾ, ಅಮೃತ ಸಾರಗಳಿಂದ ತಯಾರಿಸ್ಪಟ್ಟಿದ್ದು, ಕೂದಲ ರಕ್ಷಣೆ, ಕಣ್ಣುಗಳ ದೃಷ್ಟಿ ಹಾಗೂ ನರಮಂಡಲಗಳ ರಕ್ಷಣೆಗೆ ಸಹಾಯಕವಾಗಿವೆ.

ಕ್ಯಾರೆಟ್ ಉಪ್ಪಿನಕಾಯಿಯಲ್ಲಿ ಅರ್ಜುನ, ಲಶುನ, ಜೀರಕ, ದಾಲ್ಚಿನ್ನಿ ಸಾರವನ್ನು ಬಳಸಲಾಗಿದ್ದು ಹೃದಯ ಬಲವರ್ಧಕ, ಕೊಲೆಸ್ಟೆರಾಲ್ ನಿಯಂತ್ರಣ, ಇಮ್ಯುನಿಟಿ ಮತ್ತು ವಿಟಮಿನ್ ಕೊರತೆಯನ್ನು ನಿವಾರಿಸುತ್ತದೆ.[ಹೊಸ ಸ್ಕೂಟಿ ಜತೆ ಮಂಗಳೂರಲ್ಲಿ ವಿಷಕಾರಿ ಹಾವು ಫ್ರೀ]

ಕಾಂತಿವರ್ಧಕ ಉಪ್ಪಿನಕಾಯಿ

ಕಾಂತಿವರ್ಧಕ ಉಪ್ಪಿನಕಾಯಿ

ಬಿಲಿಂಬಿ ಉಪ್ಪಿನಕಾಯಿಯು ಮಂಜಿಷ್ಠ, ವಿಡಂಗ, ರಾಸ್ನಾ, ಅಗ್ನಿಮಂಥ ಗುಣಗಳನ್ನು ಹೊಂದಿದ್ದು ಸಂಧಿವಾತ, ಕೆಮ್ಮು, ಮೊಡವೆ ನಿವಾರಣೆ, ಕಾಂತಿವರ್ಧಕ ಹಾಗೂ ಶರೀರದ ಬೊಜ್ಜು ನಿಯಂತ್ರಣ ಮಾಡುತ್ತದೆ.

ಇನ್ನು ಕರೇಲ ಉಪ್ಪಿನಕಾಯಿಯು ನಿಂಬ, ಬಿಲ್ವ, ಕಟುಕಿ, ಹರಿದ್ರಾ ಅಂಶಗಳನ್ನು ಹೊಂದಿದ್ದು ಮಧುಮೇಹ, ಚರ್ಮರೋಗ ಮತ್ತು ಅಲರ್ಜಿ ನಿಯಂತ್ರಣ ಮಾಡುತ್ತದೆ.

ಮಾವಿನ ಉಪ್ಪಿನ ಕಾಯಿಯೂ ಇದೆ

ಮಾವಿನ ಉಪ್ಪಿನ ಕಾಯಿಯೂ ಇದೆ

ಅಜಮೋದ, ಪಿಪ್ಪಲಿ, ದೇವದಾರು, ಚಿತ್ರಕ ವನಸ್ಪತಿಗಳ ಮಿಶ್ರಣಗಳಿಂದ ತಯಾರಿಸಲಾಗಿರುವ ಮಾವಿನಕಾಯಿ ಪಿಕ್ಕಲ್ ರುಚಿ ಕಾರಕ, ಜೀರ್ಣ ವರ್ಧಕ, ಪ್ರೋ ಬಯೋಟಿಕ್ ಹಾಗೂ ಸಂತುಲಿತ ಆಹಾರ ಉತ್ಪನ್ನವಾಗಿರುತ್ತದೆ.

ಮಾದಿಫಲ ಪಿಕ್ಕಲ್ ಮಾತುಲುಂಗ, ನಾಗಕೇಸರ, ಶತಪುಷ್ಪ, ಲೋದ್ರ, ಜಪಾಕುಸುಮ ಒಳಗೊಂಡ ಔಷಧೀಯ ಉಪ್ಪಿನಕಾಯಿಯಾಗಿದ್ದು, ಹೃದಯ ಬಲವರ್ಧಕ, ಕೆಮ್ಮು, ದಮ್ಮು, ಬಸುರಿಯರಲ್ಲಿ ಕಂಡುಬರುವ ವಾಂತಿ, ಅಧಿಕ ಋತುಸ್ರಾವ, ಅಗ್ನಿಮಾಂದ್ಯಗಳಲ್ಲಿ ಉಪಯುಕ್ತವಾಗಿದೆ.

ಉಪ್ಪಿನಕಾಯಿ ಬೇಕಾ?

ಉಪ್ಪಿನಕಾಯಿ ಬೇಕಾ?

ಬೃಹದಾಮ್ಲ, ಕೃಷ್ಣಜೀರಕ, ಶತಾವರಿ, ಆದ್ರಕ, ಕುಂಕುಮ ಕೇಸರಯುಕ್ತ ಕ್ಯಾರಂಬೋಲ ಪಿಕ್ಕಲ್ ಕ್ಯಾನ್ಸರ್, ಕರುಳಿನ ಹುಣ್ಣು ನಿವಾರಣೆಗೆ ಉಪಯುಕ್ತ ಹಾಗೂ ರೋಗನಿರೋಧಕ, ಸ್ಥೌಲ್ಯನಿವಾರಕವಾಗಿದೆ.

ಈ ಉಪ್ಪಿನ ಕಾಯಿಗಳು 400 ಮತ್ತು 250 ಗ್ರಾಮ್‍ಗಳ ಪ್ಯಾಕೆಟ್‍ಗಳಲ್ಲಿ ಲಭ್ಯ. ರುಚಿ ನೋಡಿ ಆಹಾರ ಸೇವಿಸುವವರಿಗೆಂದೇ ರುಚಿಕರ ಹಾಗೂ ಆರೋಗ್ಯಕರ ಉಪ್ಪಿನಕಾಯಿ ಸಿದ್ಧಗೊಂಡಿದೆ. ಆಯುರ್ ಕುರಿತ ಹೆಚ್ಚಿನ ಮಾಹಿತಿಗೆ ಡಾ. ಹರಿಪ್ರಸಾದ್ ಸುವರ್ಣರ 9449616356 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ayur Ayurveda pickle, which is disease free product created by Dr Hariprasad Suvarna of Mangaluru. This pickle sets you free from all dangerous infirmities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more