ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ ಪೆಗಾಸಸ್‌: ಬೆಂಗಳೂರಿನಿಂದ ಚೆನ್ನೈ, ಮಂಗ್ಳೂರಿಗೆ ವಿಮಾನ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 14: ದೇಶಿ ವಿಮಾನಯಾನದಲ್ಲಿ ಹೊಸ ಹುರುಪು ತುಂಬುತ್ತಿರುವ ಏರ್ ಪೆಗಾಸಸ್ ಸಂಸ್ಥೆ ಈಗ ಬೆಂಗಳೂರಿನಿಂದ ಚೆನ್ನೈ, ಮಂಗಳೂರಿಗೆ ನೇರ ವಿಮಾನಯಾನವನ್ನು ವಿಸ್ತರಿಸಿದೆ.

ಆಗಸ್ಟ್ 20ರಂದು ಬೆಂಗಳೂರಿನಿಂದ ಚೆನ್ನೈಗೆ ಪ್ರತಿನಿತ್ಯ ವಿಮಾನ ಸಂಚಾರ ಆರಂಭಿಸಲಿದೆ.ಆಗಸ್ಟ್‌ 21ರಿಂದ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಹಾರಲಿದೆ.

ಮಂಗಳೂರು ಮಾರ್ಗದ ವಿಮಾನಗಳು ಪ್ರತಿನಿತ್ಯ ಬೆಳಗ್ಗೆ 10.40ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.50 ರ ಸುಮಾರಿಗೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 12.15ಕ್ಕೆ ಹೊರಟು 1.25ಕ್ಕೆ ಬೆಂಗಳೂರಿಗೆ ಬರಲಿದೆ.

Air Pegasus to launch daily flights between Bengaluru and Chennai

ಚೆನೈ ಮಾರ್ಗದ ವಿಮಾನ ಬೆಳಗ್ಗೆ 10.25ಕ್ಕೆ ಬೆಂಗಳೂರಿನಿಂದ ಹೊರಟು 11.25ಕ್ಕೆ ಚೆನ್ನೈ ತಲುಪಲಿದೆ. ಚೆನ್ನೈನಿಂದ 11.50ಕ್ಕೆ ಹೊರಟು 12.50ಕ್ಕೆ ಬೆಂಗಳೂರು ಸೇರಲಿದೆ ಎಂದು ಏರ್ ಪೆಗಾಸಸ್ ಸಂಸ್ಥೆ ನಿರ್ದೇಶಕ ಶೈಸನ್ ಥಾಮಸ್ ಹೇಳಿದ್ದಾರೆ.
ಇದರ ಜೊತೆಗೆ ಬೆಂಗಳೂರು-ಹುಬ್ಬಳ್ಳಿ ವಿಮಾನಯಾನವನ್ನು ದಿನಕ್ಕೆ ಒಂದರಿಂದ ಎರಡು ಬಾರಿಗೆ ವಿಸ್ತರಿಸಲಾಗಿದೆ. ವಾರಕ್ಕೆ ಮೂರು ದಿನ ಸಂಚರಿಸುತ್ತಿದ್ದ ಬೆಂಗಳೂರು -ಮದುರೈ ವಿಮಾನ ಪ್ರತಿನಿತ್ಯ ಸಂಚಾರಕ್ಕೆ ವಿಸ್ತಾರಗೊಂಡಿದೆ. ಹುಬ್ಬಳ್ಳಿ, ತಿರುವನಂತಪುರಂ, ಮದುರೈ ಹಾಗೂ ಕಡಪ ಮುಂದಿನ ವಿಸ್ತರಣಾ ನಿಲ್ದಾಣಗಳಾಗಿವೆ ಎಂದು ಸಂಸ್ಥೆ ಪ್ರಕಟಿಸಿದೆ.

English summary
Air Pegasus will launch a daily flight connecting Bengaluru to Chennai starting August 20. Air Pegasus also has launched a daily flight from Bengaluru to Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X