ಮಂಗಳೂರು ಸೇರಿದಂತೆ 5 ವಿಮಾನ ನಿಲ್ದಾಣ ನಿರ್ವಹಣೆ ಅದಾನಿ ಸಂಸ್ಥೆಗೆ
ನವದೆಹಲಿ, ಫೆಬ್ರವರಿ 25: ದೇಶದ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗೀಕರಣಗೊಳಿಸಿರುವ ಕೇಂದ್ರ ಸರ್ಕಾರವು ವಿವಿಧ ನಿಲ್ದಾಣಗಳ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗಿತ್ತು. 6 ವಿಮಾನ ನಿಲ್ದಾಣಗಳ ಪೈಕಿ 5 ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಸಂಸ್ಥೆ ವಹಿಸಿಕೊಂಡಿದೆ ಎಂದು ಭಾರತೀಯ ವಿಮಾನ ಪ್ರಾಧಿಕಾರಿ(ಎಎಐ) ಹೇಳಿದೆ.
ಅಹಮದಾಬಾದ್, ತಿರುವನಂತಪುರಂ, ಲಕ್ನೋ, ಮಂಗಳೂರು ಹಾಗೂ ಜೈಪುರದ ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿ ಖಾಸಗಿ ಸಂಸ್ಥೆಗಳಿಂದ ಬಿಡ್ ಮಾಡಲಾಗಿತ್ತು. ಅತಿ ಹೆಚ್ಚು ಮೌಲ್ಯದ ಬಿಡ್ಡಿಂಗ್ ಮಾಡಿದ ಅದಾನಿ ಸಂಸ್ಥೆ ಈ ಐದು ವಿಮಾನ ನಿಲ್ದಾಣಗಳ ನಿರ್ವಹಣೆ ಗುತ್ತಿಗೆಯನ್ನು ಸೋಮವಾರ(ಫೆ.25) ಪಡೆದುಕೊಂಡಿದೆ. ಗುವಹಾಟಿ ವಿಮಾನ ನಿಲ್ದಾಣದ ಟೆಂಡರ್ ಮಂಗಳವಾರದಂದು ನಡೆಯಲಿದೆ.
ಪ್ರತಿ ತಿಂಗಳ ಪ್ರಯಾಣಿಕರ ಶುಲ್ಕ ಆಧಾರದ ಮೇಲೆ ಬಿಡ್ಡಿಂಗ್ ವಿಜೇತರನ್ನು ಎಎಐ ಆಯ್ಕೆ ಮಾಡಲಿದೆ. ಒಟ್ಟಾರೆ,6 ವಿಮಾನ ನಿಲ್ದಾಣ ನಿರ್ವಹಣೆಗಾಗಿ 10 ಕಂಪನಿಗಳಿಂದ 32 ತಾಂತ್ರಿಕ ಬಿಡ್ಡಿಂಗ್ ಗಳನ್ನು ಸ್ವೀಕರಿಸಲಾಗಿದೆ ಎಂದು ಎಎಐ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 6 ಎಎಐ ಅಧೀನ ವಿಮಾನನಿಲ್ದಾಣಗಳನ್ನು ನಿರ್ವಹಣೆಗೆ ವಹಿಸಲು ಕಳೆದ ನವೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿತ್ತು.ಅಹಮದಾಬಾದ್ ಹಾಗೂ ಜೈಪುರ ವಿಮಾನ ನಿಲ್ದಾಣಗಳಿಗೆ ತಲಾ 7 ಬಿಡ್, ಲಕ್ನೋ ಹಾಗೂ ಗುವಾಹಟಿ ನಿಲ್ದಾಣಕ್ಕಾಗಿ ತಲಾ 6 ಬಿಡ್ ಗಳು, ಮಂಗಳೂರು ಹಾಗೂ ತಿರುವನಂತಪುಂಗಾಗಿ ತ್ಲಾ ಮೂರು ಬಿಡ್ ಗಳು ಬಂದಿತ್ತು. ವಿಶ್ವದರ್ಜೆಯ ಮೂಲ ಸೌಕರ್ಯ ಒದಗಿಸುವುದು ಹಾಗೂ ದೈನಂದಿನ ನಿರ್ವಹಣೆಯನ್ನು ಈ ಸಂಸ್ಥೆಗಳು ನಡೆಸಲಿವೆ.(ಪಿಟಿಐ)












Click it and Unblock the Notifications