ಮಂಗಳೂರಿನಲ್ಲಿ ಯೋಗೇಂದ್ರ ಯಾದವ್ ಮತ ಬೇಟೆ
ಮಂಗಳೂರು, ಏ. 14 : ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಪರ್ಯಾಯವಾಗಿ ರಾಜಕೀಯ ಶಕ್ತಿಯೊಂದನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ಆರ್.ವಾಸುದೇವ್ ಪರವಾಗಿ ಯೋಗೇಂದ್ರ ಯಾದವ್ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಸ್ತುತ ಇರುವ ರಾಜಕೀಯ ಶಕ್ತಿಗಳಿಗೆ ಪರ್ಯಾಯವಾಗಿ ಸಮರ್ಥ ರಾಜಕೀಯ ಶಕ್ತಿಯೊಂದನ್ನು ನಿರ್ಮಾಣ ಮಾಡುವ ಅಗತ್ಯವಿದೆ ಎಂದರು. [ಚಿತ್ರಗಳಲ್ಲಿ ನೋಡಿ ಯೋಗೇಂದ್ರ ಯಾದವ್ ಪ್ರಚಾರ]
ಹೊಸ ರಾಜಕೀಯ ಶಕ್ತಿ ನಿರ್ಮಾಣ ಮಾಡುವುದು ಆಮ್ ಆದ್ಮಿ ಪಕ್ಷದ ಗುರಿಯಾಗಿದೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷ 400ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಯೋಗೇಂದ್ರ ಯಾದವ್ ತಿಳಿಸಿದರು. ವಾರಣಸಿಯಲ್ಲಿ ನಮ್ಮ ಸ್ಪರ್ಧೆ ಕೇವಲ ಸಾಂಕೇತಿಕವಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಚಿತ್ರಗಳಲ್ಲಿ ನೋಡಿ ಯೋಗೇಂದ್ರ ಯಾದವ್ ಪ್ರಚಾರ [ಚಿತ್ರಗಳು: ಐಸಾಕ್ ರಿಚರ್ಡ್]

ಯೋಗೇಂದ್ರ ಯಾದವ್ ಪ್ರಚಾರ
ಆಮ್ ಆದ್ಮಿ ಪಕ್ಷದ ಮುಖಂಡ ಯೋಗೇಂದ್ರ ಯಾದವ್ ಮಂಗಳೂರಿನ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ಆರ್.ವಾಸುದೇವ್ ಪರವಾಗಿ ಭಾನುವಾರ ಪ್ರಚಾರ ನಡೆಸಿದರು. ದೇಶದಲ್ಲಿ ಪ್ರಸ್ತುತ ಇರುವ ರಾಜಕೀಯ ಶಕ್ತಿಗಳಿಗೆ ಪರ್ಯಾಯವಾಗಿ ಸಮರ್ಥ ರಾಜಕೀಯ ಶಕ್ತಿಯೊಂದನ್ನು ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಗುಜರಾತ್ ರಾಜ್ಯದಲ್ಲಿ ಏನು ಅಭಿವೃದ್ಧಿ ಆಗಿದೆ?
ಬಿಜೆಪಿ ಗುಜರಾತ್ ರಾಜ್ಯದ ಮಾದರಿಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದೆ. ಆದರೆ, ಗುಜರಾತ್ ನಲ್ಲಿ ಒಂದು ವರ್ಗ ಮಾತ್ರ ಅಭಿವೃದ್ಧಿಯಾಗಿದೆ. ಶಿಕ್ಷಣ, ಆರೋಗ್ಯ, ಮಕ್ಕಳ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ರಾಜ್ಯ ಹಿಂದುಳಿದಿದೆ. ರಾಜ್ಯದ ಪ್ರತಿ ಜನರ ಅಭಿವೃದ್ಧಿಯಾದಾಗ ಮಾತ್ರ ಅದನ್ನು ಅಭಿವೃದ್ಧಿ ಎಂದು ಕರೆಯಬಹುದು ಎಂದರು.

ನಂಬರ್ ಗೇಮ್ ರಾಜಕೀಯ ಮಾಡಲು ಬಂದಿಲ್ಲ
ಕಾಂಗ್ರೆಸ್ ನೇತೃತ್ವದ ಯುಪಿಎಗೆ ಬಿಜೆಪಿ ನೇತೃತ್ವದ ಎನ್ ಡಿಎ ಕೇವಲ ಬದಲಿ ಮಾತ್ರ ಆಗಬಲ್ಲದು ಆದರೆ, ಪರ್ಯಾಯ ರಾಜಕೀಯ ಶಕ್ತಿಯಾಗಲಾರದು. ಆಮ್ ಆದ್ಮಿ ಪಕ್ಷ ನಂಬರ್ ಗೇಮ್ ರಾಜಕೀಯ ಮಾಡಲು ಬಂದಿಲ್ಲ. ಪರ್ಯಾಯ ರಾಜಕೀಯ ಶಕ್ತಿ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು.

ಜಿಂದಾಲ್ ಒಬ್ಬ ಸಾಮಾನ್ಯ ವ್ಯಕ್ತಿ
ಆಮ್ ಆದ್ಮಿ ಕಾರ್ಯಕರ್ತರಿಗೆ ಜಿಂದಾಲ್‌ನಿಂದ ಹಣ ಪಾವತಿಯಾಗುತ್ತದೆ ಎಂಬ ಅಶ್ವಿನಿ ಉಪಾಧ್ಯಾಯ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಯಾದವ್, ಜಿಂದಾಲ್ ಎಂಬವರು ಹರ್ಯಾಣ ರಾಜ್ಯದ ಓರ್ವ ಸಾಮಾನ್ಯ ವ್ಯಕ್ತಿಯಾಗಿದ್ದರು. ಅವರು ಜನ ಲೋಕಪಾಲ್ ಹೋರಾಟಕ್ಕೆ ದೇಣಿಗೆ ನೀಡಿದ್ದರು ಎಂದರು.

ಸ್ಪರ್ಧೆ ಕೇವಲ ಸಾಂಕೇತಿಕವಲ್ಲ
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ದ ಕೇವಲ ಸಾಂಕೇತಿಕವಾಗಿ ಸ್ಪರ್ಧಿಸುತ್ತಿಲ್ಲ. ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು ಆಮ್ ಆದ್ಮಿ ಪಕ್ಷಕ್ಕೆ ಬಗ್ಗೆ ಇಡೀ ಕ್ಷೇತ್ರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.












Click it and Unblock the Notifications