ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುದ್ದಿನ ನಾಯಿ ರಕ್ಷಿಸಲು ಮಡಿಕೇರಿಯಿಂದ ನಡೆದುಕೊಂಡು ಬಂದ ಯುವಕ

|
Google Oneindia Kannada News

Recommended Video

ಮಂಗಳೂರಿನ ಈ ಯುವಕನಿಗೆ ತನ್ನ ಸಾಕುನಾಯಿಯ ಮೇಲಿರುವ ಪ್ರೀತಿಗೆ ನಿಜಕ್ಕೂ ಮೆಚ್ಚಲೇಬೇಕು | Oneindia Kannada

ಮಂಗಳೂರು, ಆಗಸ್ಟ್ 20: ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೊಡಗಿನ ಜೋಡುಪಾಳ, ಮೊಣ್ಣಂಗೇರಿ, ಮಾದೆನಾಡು ಸುತ್ತಮುತ್ತ ಸಂಭವಿಸಿದ ಜಲಪ್ರಳಯ ಹಾಗು ಭಾರೀ ಭೂಕುಸಿತದಲ್ಲಿ ಸಂಭವಿಸಿದ ದುರಂತ ದೃಶ್ಯಗಳು ಒಂದೊಂದಾಗಿ ಹೊರ ಜಗತ್ತಿಗೆ ಗೋಚರಿಸುತ್ತಿವೆ.

ಜೋಳುಪಾಳ , ಮೊಣ್ಣಂಗೇರಿ, ಮಾದೆನಾಡು ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಪಾಯದಲ್ಲಿದ್ದವರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

ಜೋಡುಪಾಳದ ದುರಂತ ಮಾನವನ ಸಂಬಂಧಗಳನ್ನೂ ತಟ್ಟುವ ಕೆಲ ಅಪರೂಪದ ಪ್ರಸಂಗಗಳಿಗೂ ಸಾಕ್ಷಿಯಾಗಿದೆ. ಜೋಡುಪಾಳದ ಮನೆಯೊಂದರಲ್ಲಿ ಅನಾಥವಾಗಿ ಉಳಿದಿದ್ದ ಮುದ್ದಿನ ಸಾಕು ನಾಯಿಯನ್ನು ರಕ್ಷಣೆ ಮಾಡಲು ಯುವಕ ಸಾವು ಬದುಕಿನ ದಾರಿಯ ನಡುವೆ ಮಡಿಕೇರಿಯಿಂದ 15 ಕೀ.ಮೀ ನಡೆದುಕೊಂಡು ಬಂದು ನಾಯಿಯನ್ನು ರಕ್ಷಣೆ ಮಾಡಿದ್ದಾನೆ.

A young man walked 15 km from Madikeri and protected the dog

ಆ ಯುವಕನ ಹೆಸರು ಜೋಡುಪಾಳದ ನಿತಿನ್ ಭರತ್ . ಆಗಸ್ಟ್ 17 ರಂದು ಸಂಭವಿಸಿದ ಅತಿವೃಷ್ಟಿ ಹಾಗು ಭಾರೀ ಭೂಕುಸಿತದಿಂದ ನಿತಿನ್ ಭರತ್ ಅವರ ಮನೆ ಅಪಾಯಕ್ಕೆ ಸಿಲುಕಿತ್ತು. ಆದರೆ ನಿತಿನ್ ಕುಟುಂಬ ಆ ಸಂದರ್ಭದಲ್ಲಿ ಜೋಡುಪಾಳದಲ್ಲಿರಲ್ಲಿಲ್ಲ.

"ನನ್ನ ಪರಿಸ್ಥಿತಿಯನ್ನು ಬೆಂಗಳೂರಿನಲ್ಲಿರುವ ಮಗಳಿಗೆ ತಿಳಿಸಲು ಸಾಧ್ಯವೇ?"

ಆದರೆ ಜೋಡುಪಾಳದ ನೆರೆ ಆವರಿಸಿದ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಗೂಡಿನೊಳಗೆ ನಿತಿನ್ ಭರತ್ ಅವರ ಮುದ್ದಿನ ನಾಯಿ ಸ್ಯಾಂಡಿ ಸಿಲುಕಿಕೊಂಡಿತ್ತು.

ಮನುಜನ ಬದುಕಲ್ಲಿ ನಾಯಿಯ ಪಾತ್ರ, ಮಧುರ ಬಾಂಧವ್ಯ!ಮನುಜನ ಬದುಕಲ್ಲಿ ನಾಯಿಯ ಪಾತ್ರ, ಮಧುರ ಬಾಂಧವ್ಯ!

ತನ್ನ ಮುದ್ದಿನ ನಾಯಿ ಸ್ಯಾಂಡಿಯ ರಕ್ಷಣೆಗೆ ಗುಡ್ಡ ಕುಸಿತದ ಪ್ರದೇಶಗಳ ನಡುವೆ ರಾತ್ರಿ ಹಗಲು ನಡೆದುಕೊಂಡು ಬಂದಿದ್ದರು ನಿತಿನ್ ಭರತ್. ಸ್ಯಾಂಡಿ ತನ್ನ ಪ್ರೀತಿಯ ಒಡೆಯ ಕಿಶೋರ್ ಭರತ್ ರನ್ನು ಕಂಡ ಕ್ಷಣವೇ ಖುಷಿಯಾಗಿದೆ.

A young man walked 15 km from Madikeri and protected the dog

ತನ್ನ ರಕ್ಷಣೆಗೆ ಬಂದ ನಿತಿನ್ ಅವರನ್ನು ಕಂಡ ಕೂಡಲೇ ಸ್ಯಾಂಡಿಯ ಹರ್ಷದ ತೋರ್ಪಡಿಕೆ ಅಕ್ಷರಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದನ್ನು ನೋಡಿಯೇ ಆನಂದಿಸಬೇಕು. ಈಗ ಸ್ಯಾಂಡಿ ತನ್ನ ಪ್ರೀತಿಯ ಒಡೆಯ ನಿತಿನ್ ಭರತ್ ಜೊತೆ ಸುರಕ್ಷಿತವಾಗಿ ಮರಳಿ ಮಡಿಕೇರಿಗೆ ತೆರಳಿದೆ.

ಅಂದಹಾಗೆ ನಿತಿನ್ ಭರತ್ ಬೆಂಗಳೂರಿನ ಆಕ್ಸ್ ಫರ್ಡ್ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂಟೆಕ್ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ನಿತಿನ್ ಕಾರ್ಯ ಎಲ್ಲರ ಪ್ರಶಂಸೆಗೆ ಒಳಗಾಗಿದ್ದು, ತನಗೆ ಅಪಾಯವಿದೆ ಎಂದು ತಿಳಿದಿದ್ದರೂ ಪ್ರವಾಹದ ನಡುವೆಯೇ ನಾಯಿಯನ್ನು ರಕ್ಷಿಸಿರುವುದನ್ನು ಕಂಡು ಸ್ಥಳೀಯರಿಂದ ಹಿಡಿದು ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಹೇಳಲೇಬೇಕಾದ ಸಂಗತಿ ಎಂದರೆ ನಿತಿನ್ ತಮ್ಮ ಮುದ್ದು ನಾಯಿಯನ್ನಷ್ಟೇ ಅಲ್ಲದೇ 15 ಜನ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಹೌದು, ನಾಯಿಯನ್ನು ರಕ್ಷಿಸಿದ ನಂತರ ಆರ್ಮಿಯವರ ಬಳಿ ಬಂದು ಕಾರ್ಮಿಕರು ಸಂಕಷ್ಟದಲ್ಲಿರುವವನ್ನು ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅವರು ಕಾರ್ಮಿಕರನ್ನು ಕಷ್ಟದಿಂದ ಪಾರು ಮಾಡಿದ್ದಾರೆ.

English summary
A young man walked 15 km from Madikeri and protected the dog. Kishore Bharat's pet dog Sandy was there in the jodupala house for three days. From flood situation in jodupala and everyone is refugee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X