ತುಳುನಾಡಿನ ಇತಿಹಾಸ ಸಾರುವ ಅಪೂರ್ವ ಶಾಸನ ಪತ್ತೆ

ಮಂಗಳೂರು, ಸೆಪ್ಟೆಂಬರ್ 18: ತುಳುನಾಡಿನ ಇತಿಹಾಸ ಸಾರುವ ಅಪೂರ್ವ ಶಾಸನವೊಂದು ಪತ್ತೆಯಾಗಿದೆ. ಶ್ರೀ ಕ್ಷೇತ್ರ ಪೊಳಲಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದೆ.

ಬಂಟ್ವಾಳದ ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ತ್ವರಿತಗತಿಯಿಂದ ಸಾಗುತ್ತಿದ್ದು ಈ ಸಂದರ್ಭದಲ್ಲಿ ನಡೆಯುತ್ತಿದ್ದ ಕಾಮಗಾರಿ ವೇಳೆ ಈ ಅಪೂರ್ವ ಶಿಲಾಶಾಸನ ಪತ್ತೆಯಾಗಿದೆ. ಈ ಶಾಸನ ಅಳುಪ ವಂಶದ ಅರಸ ಕುಲಶೇಖರನ ಆಳ್ವಿಕೆಯ ಕಾಲದ್ದು ಎಂದು ಹೇಳಲಾಗಿದೆ.

A unique inscription found at Sri Polali Temple, Bantwal

ಈ ಶಾಸನ ಸುಮಾರು 28 ಇಂಚು ಎತ್ತರ ಹಾಗೂ ಮೇಲ್ಭಾಗದಲ್ಲಿ ಸುಮಾರು 24 ಇಂಚು ಅಗಲವಿದ್ದು, ನೋಡಲು ಸುಂದರವಾಗಿದೆ. ಈ ಶಿಲಾ ಫಲಕದಲ್ಲಿ ಅಕ್ಷರಗಳನ್ನು ಇಪ್ಪತ್ತು ಸಾಲುಗಳಲ್ಲಿ ಅತ್ಯಂತ ಸ್ಫುಟವಾಗಿ ಕೆತ್ತಲಾಗಿದೆ. ಶಾಸನ ಫಲಕದ ತಳಭಾಗದಲ್ಲಿ ಎರಡು ಸಿಂಹಗಳ ಮಧ್ಯೆ ಒಬ್ಬ ವ್ಯಕ್ತಿಯು ರಾಜ ಭಂಗಿಯಲ್ಲಿ ಸ್ತ್ರೀಯೊಂದಿಗೆ ಆಸೀನರಾಗಿರುವ ಚಿತ್ರವಿದೆ.

ಈ ಶಾಸನವನ್ನು ಪರಿಶೀಲಿಸಿ ಅಧ್ಯಯನ ಮಾಡಿದ ಇತಿಹಾಸ ಸಂಶೋಧಕ ಡಾ. ಗಣಪಯ್ಯ ಭಟ್ ಇದರ ಕುರಿತು ವಿವರಣೆ ನೀಡಿದ್ದಾರೆ. "ಅಳುಪ ವಂಶದ ಅರಸನಾದ ಕುಲಶೇಖರ ವೀರ ಸಾಹಸ ಮೆರೆದ ವಿಚಾರವನ್ನು ಈ ಶಾಸನದಲ್ಲಿ ವಿವರಿಸುತ್ತದೆ" ಎಂದಿದ್ದಾರೆ.

A unique inscription found at Sri Polali Temple, Bantwal

ಪ್ರಸ್ತುತ ಪೊಳಲಿಯಲ್ಲಿ ಬೆಳಕಿಗೆ ಬಂದಿರುವ ಕುಲಶೇಖರ ಪಾಂಡ್ಯ ಪಟ್ಟಿ ದೇವನ ಈ ಶಾಸನವು ಅಳುಪ ಯುಗದ ತುಳುನಾಡಿನ ಇತಿಹಾಸದ ಒಂದು ಮಹತ್ವಪೂರ್ಣ ದಾಖಲೆ ಎಂದು ಪರಿಗಣಿಸಲಾಗಿದೆ. ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಶಾಸನ ಮಾತ್ರವಲ್ಲದೆ ಮೂರು ವೀರಗಲ್ಲು ಕೂಡಾ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+