ಮಂಗ್ಳೂರು: ಪುಕ್ಕಟೆ ಪಟಾಕಿ ನೀಡದ್ದಕ್ಕೆ ಅಂಗಡಿ ಮಾಲೀಕನಿಗೆ ಬೆದರಿಕೆ
ಮಂಗಳೂರು, ನವೆಂಬರ್, 13 : ಪಟಾಕಿಯನ್ನು ಪುಕ್ಕಟ್ಟೆ ನೀಡಲು ಒಪ್ಪದ ಅಂಗಡಿ ಮಾಲೀಕನಿಗೆ ಪಟಾಕಿ ಅಂಗಡಿಯನ್ನು ಸುಟ್ಟು ನಾಶಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಬುಧವಾರ ನಗರದ ಬಂದರ್ ಬಳಿ ನಡೆದಿದೆ.
ಅಂಗಡಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿದ ಆರೋಪಿ ಬಂದರು ಗೌರಿ ಮಠ ಸುಬ್ರಮಣ್ಯ ದೇವಸ್ಥಾನದ ಹಿಂಬದಿಯ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಪುಕ್ಕಟೆ ಪಟಾಕಿ ನೀಡಲು ಸಮ್ಮತಿ ನೀಡದಿರುವುದೇ ಈ ಬೆದರಿಕೆಗೆ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.[ಬೆಂಗಳೂರಲ್ಲಿ ರಾತ್ರಿ 10ರ ನಂತರ ಪಟಾಕಿ ಹೊಡೆಯುವಂತಿಲ್ಲ]

ನಗರದ ಬಂದರಿನ ಬೀಬೀ ಅಲಾಬಿ ರಸ್ತೆಯಲ್ಲಿ ಗೌರಿ ಮಠ ನಿವಾಸಿ ಮುರಳೀಧರ ಪೈ ಎಂಬಾತ ಮಂಜುನಾಥ ಕ್ರಕರ್ಸ್ ಪ್ಯಾಲೇಸಿನಲ್ಲಿ ಪಟಾಕಿ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದರು. ನವೆಂಬರ್ 11ರ ಬುಧವಾರ ದೀಪಾವಳಿ ಹಬ್ಬದ ಪ್ರಯುಕ್ತ ಎಂದಿನಂತೆ ಮುರಳೀಧರ ಪೈ ಅಂಗಡಿ ತೆರೆದಿದ್ದಾರೆ.
ರಾತ್ರಿ ಸುಮಾರು 8.30ಕ್ಕೆ ಬಂದ ಆರೋಪಿ ರಮೇಶ್ ಪುಕ್ಕಟ್ಟೆಯಾಗಿ ಪಟಾಕಿ ನೀಡಬೇಕೆಂದು ಒತ್ತಾಯಪಡಿಸಿದ್ದಾರೆ. ಪಟಾಕಿ ನೀಡಲು ಸುತರಾಂ ಒಪ್ಪದ ಕಾರಣ ಅಂಗಡಿ ಮಾಲೀಕರ ವಿರುದ್ದ ರಮೇಶ್ ಆಕ್ರೋಶಗೊಂಡು ಅವಾಜ್ ಹಾಕಿದ್ದಾರೆ.[ದೀಪಾವಳಿ ಪಟಾಕಿಯೊಂದಿಗೆ ನಮ್ಮ 'ಇಗೋ' ಸುಟ್ಟರೆ ಹೇಗೆ?]
ಈ ವೇಳೆ ಅಂಗಡಿಯಲ್ಲಿ ಮಾಲೀಕನ ಅಕ್ಕನ ಮಗ ವರುಣ್ ಪ್ರಭು , ಕೆಲಸಗಾರರಾದ ಸಿಂಥಿಯಾ ಮೋರಸ್ , ನರೇಶ್ ಮತ್ತು ಕೆಲನ್ ಡಿ ಸೋಜಾ ಅವರು ಕೂಡಾ ಇದ್ದರು. ಆರೋಪಿ ರಮೇಶ್ ವಿರುದ್ದ ಮಂಗಳೂರು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications