Get Updates
Get notified of breaking news, exclusive insights, and must-see stories!

ಅಪಘಾತಕ್ಕೀಡಾದ ಟ್ರಾಲ್ ಬೋಟ್ ನಲ್ಲಿದ್ದ 9 ಮೀನುಗಾರರ ರಕ್ಷಣೆ

ಮಂಗಳೂರು, ಆಗಸ್ಟ್ 30: ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ಒಂದು ಅಪಘಾತಕ್ಕೀಡಾಗಿ ಅಪಾಯದಲ್ಲಿದ್ದ 9 ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

Recommended Video

      Shobith, Real Hero Saved 22 Passengers Who Were In The Boat

      ಮಂಗಳೂರಿನ ಅಳಿವೆ ಬಾಗಿಲಿನಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ. ಪದ್ಮನಾಭ ಎಂಬುವರಿಗೆ ಸೇರಿದ ಸಿ ಮಾಸ್ಟರ್ ಟ್ರಾಲ್ ಬೋಟ್ ಮಂಗಳವಾರ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ದಡಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಬೋಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಮುದ್ರ ಮಧ್ಯೆ ಕೆಟ್ಟು ನಿಂತಿತ್ತು .

      9 Fishermen rescued at the middle of the sea in Mangaluru

      ಈ ಹಿನ್ನೆಲೆಯಲ್ಲಿ ಮತ್ತೊಂದು ಮೀನುಗಾರಿಕಾ ದೋಣಿಗೆ ಕೆಟ್ಟು ನಿಂತ ಮೀನುಗಾರಿಕಾ ಬೋಟನ್ನು ಹಗ್ಗದಿಂದ ಬಿಗಿದು ದಡಕ್ಕೆ ಎಳೆ ತರುವ ಪ್ರಯತ್ನ ಮಾಡಲಾಯಿತು. ಈ ಸಂದರ್ಭದಲ್ಲಿ ಬೋಟ್ ನ ಪ್ರೊಫೆಲ್ಲರ್ ಫ್ಯಾನ್ ಗೆ ಹಗ್ಗ ಸುತ್ತಿಕೊಂಡ ಪರಿಣಾಮ ಹಗ್ಗ ತುಂಡಾಗಿತ್ತು.

      ಹೀಗಾಗಿ ನಿಯಂತ್ರಣ ಕಳೆದುಕೊಂಡ ಮೀನುಗಾರಿಕಾ ಟ್ರಾಲ್ ಬೋಟ್ ಮರಳು ದಿಣ್ಣೆಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮೀನುಗಾರಿಕಾ ದೋಣಿ ಮುಳುಗಲು ಆರಂಭಿಸಿದೆ. ಈ ಸಂದರ್ಭದಲ್ಲಿ ಅಪಾಯದಲ್ಲಿದ್ದ 9 ಮಂದಿ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ .

      ಘಟನೆ ಕುರಿತು ಮಾಹಿತಿ ಪಡೆದ ಪಣಂಬೂರು ಪೊಲೀಸ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ . ಅಪಘಾತಕ್ಕೀಡಾದ ಟ್ರಾಲ್ ಬೋಟ್ ಮುಳುಗಿದ ಹಿನ್ನೆಲೆಯಲ್ಲಿ 63 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+