ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಬುಧವಾರದ ಚುಟುಕು ಸುದ್ದಿಗಳು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ. 22 : ಮಂಗಳೂರು ಜಿಲ್ಲೆಯಲ್ಲಿ ಬುಧವಾರ(ಫೆ.22) ಬೆಳಗ್ಗೆಯಿಂದ ಸಂಜೆ ವರೆಗೆ ನಡೆದ ಪ್ರತಿಭಟನೆಗಳು, ಸಾವು ಸೇರಿದಂತೆ ಮತ್ತಿತರ ಹಲವು ಚಿಕ್ಕ-ಚಿಕ್ಕ ಸುದ್ದಿಗಳನ್ನು ನಾವು ನಿಮಗೆ ಇಲ್ಲಿ ತಿಳಿಸುತ್ತಿದ್ದೇವೆ.

ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತೊಕ್ಕೊಟ್ಟು ಮೇಲ್ಸೇತುವ ಬಳಿ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಉಳ್ಳಾಲ ಒಂಬತ್ತುಕೆರೆ ನಿವಾಸಿ ವೆಂಕಪ್ಪ ಪೂಜಾರಿ(56) ಎಂದು ಗುರುತಿಸಲಾಗಿದೆ.[ಮಂಗಳೂರು - ತುಂಬಿದ ತುಂಬೆ, ತುಂಬದ ರೈತರ ತುತ್ತಿನ ಚೀಲ]

ವೆಂಕಪ್ಪ ಪೂಜಾರಿ ಹಳಿ ದಾಟುತ್ತಿದ್ದ ವೇಳೆ ಈ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ತನಿಖೆ ಮುಂದುವರೆದಿದೆ.

56 year old man hit by train while crossing the track at Thokkottu in Mangaluru

ಕಸ ಸಂಗ್ರಹ ಕಾರ್ಮಿಕರ ಧರಣಿ : ಮಂಗಳೂರು ಮಹಾನಗರ ಪಾಲಿಕೆ ಕಸ ಸಂಗ್ರಹ ಕಾರ್ಮಿಕರು ಸರಿಯಾಗಿ ವೇತನ ಸಿಗದೆ ಬೇಸತ್ತು ಮನೆ-ಮನೆ ಕಸ ಸಂಗ್ರಹವನ್ನು ಸ್ಥಗಿತಗೊಳಿಸಿ ನಗರದ ಬಂಟ್ಸ್ ಹಾಸ್ಟೆಲ್ ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.[ಮಂಗ್ಳೂರಿನಿಂದ ಬೆಂಗ್ಳೂರಿಗೆ ವಿಮಾನ ಮೂಲಕ ಹಾರಿತು ಜೀವಂತ ಹೃದಯ]

ಸರಿಯಾಗಿ ವೇತನ ಸಿಗದಿರದ ಕಾರಣದಿಂದ ಆಕ್ರೋಶಗೊಂಡ ಮನಪಾ ಕಸ ಸಂಗ್ರಹ ಕಾರ್ಮಿಕರು ನಗರದ ತ್ಯಾಜ್ಯ ವಿಲೇವಾರಿ ಉಸ್ತುವಾರಿ ವಹಿಸಿಕೊಂಡಿರುವ ಆಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೇತನ ಸಮಸ್ಯೆ ಬಗೆಹರಿಯುವವರೆಗೆ ಕಸ ಸಂಗ್ರಹಿಸದಿರಲು ನಿರ್ಧರಿಸಿದ್ದಾರೆ.

ಹೆಲ್ಮೆಟ್ ಬಗ್ಗೆ ಜಾಗೃತಿ: ಪುತ್ತೂರು ಜಿಲ್ಲೆಯಲ್ಲಿ ಜನರು ಹೆಲ್ಮೆಟ್ ಇಲ್ಲದೆ ಸಂಚರಿಸುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಪುತ್ತೂರಿನ ಮುಖ್ಯ ರಸ್ತೆಗಳಲ್ಲಿ ಯಾರೆಲ್ಲಾ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಾರೋ ಅವರಿಗೆಲ್ಲಾ ಪೊಲೀಸ್ ಸಿಬ್ಬಂದಿಗಳಿಂದ ಗುಲಾಬಿ ಹೂ ಕೊಟ್ಟು ಸನ್ಮಾನಿಸಲಾಯಿತು.

ಈ ಗುಲಾಬಿ ಹೂ ಕೊಡುವ ಮೂಲಕ ಪುತ್ತೂರು ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಹಾಕುವುದರ ಮಹತ್ವದ ಬಗ್ಗೆ ತಿಳಿ ಹೇಳುವ ಮೂಲಕ ಜಾಗೃತಿ ಮೂಡಿಸಿದರು.

English summary
A 56-year-old man died after he was hit by a train while crossing the railway track at Thokkottu here on February 22.The deceased has been identified as Venkappa Poojary (56), a resident of Ombattukere Ullal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X