ಜನನುಡಿ ಸಮ್ಮೇಳನಕ್ಕೆ ನುಗ್ಗಲು ಯತ್ನ: ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ
ಮಂಗಳೂರು, ಡಿಸೆಂಬರ್ 1: ಮಂಗಳೂರಿನಲ್ಲಿ ಆಯೋಜಿಸಿರುವ ಜನನುಡಿ ಸಮಾವೇಶದಲ್ಲಿ ನಟ ಪ್ರಕಾಶ್ ರೈ ವಿರುದ್ಧ ಘೋಷಣೆ ಕೂಗಲು ಮುಂದಾದ ಆರೋಪದಲ್ಲಿ ಐದು ಮಂದಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ನಡೆದಿದೆ.
ಮಂಗಳೂರಿನ ನಂತೂರು ವೃತ್ತದಲ್ಲಿರುವ ಶಾಂತಿ ಕಿರಣ ಸಭಾಂಗಣದಲ್ಲಿ ಅಭಿಮತ ಸಂಘಟನೆ ವತಿಯಿಂದ ಎರಡು ದಿನಗಳ ಜನನುಡಿ- 2018 ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಂತಿ ಕಿರಣ ಆವರಣ ಪ್ರವೇಶಿಸಲು ಹಿಂದೂ ಜಾಗರಣ ವೇದಿಕೆಯ ಐವರು ಕಾರ್ಯಕರ್ತರು ಯತ್ನಿಸಿದ್ದಾರೆ. ಇದನ್ನು ತಡೆದ ಪೊಲೀಸರು, ಅವರನ್ನು ಬಂಧಿಸಿದ್ದಾರೆ.

ಪ್ರಕಾಶ್ ರೈ ಭಾಗಿಯಾಗಿರುವ ಜನನುಡಿ ಕಾರ್ಯಕ್ರಮಕ್ಕೆ ನುಗ್ಗಿ ಇವರು ದಾಂಧಲೆ ನಡೆಸಲು ಸಜ್ಜಾಗಿದ್ದರು ಎಂದು ಹೇಳಲಾಗಿದೆ. ಬಂಧಿತ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಶರತ್ ಪದವಿನಂಗಡಿ, ಸುಭಾಷ್, ಪ್ರವೀಣ್, ಸುನಿಲ್ ಶರತ್ ಎಂದು ಗುರುತಿಸಲಾಗಿದೆ.












Click it and Unblock the Notifications