ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ. ಕನ್ನಡ ಜಿಲ್ಲೆಯಲ್ಲಿ ದಾಖಲೆಯ ಮತದಾನ, 1 ಗಂಟೆ ಹೊತ್ತಿಗೆ ಶೇ. 47

|
Google Oneindia Kannada News

ಮಂಗಳೂರು ಮೇ 12: ಕರಾವಳಿ ಜಿಲ್ಲೆಗಳಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ ಹೊತ್ತಿಗೆ ಶೇಕಡಾ 47 ಮತದಾನವಾಗಿದ್ದು ರಾಜ್ಯದಲ್ಲೇ ಅತೀ ಹೆಚ್ಚು ಜನರು ಮತ ಚಲಾಯಿಸಿದ ಜಿಲ್ಲೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳ 1,858 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಅಖಾಡದಲ್ಲಿರುವ ಘಟಾನುಘಟಿ 58 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುತ್ತಿದೆ.

LIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.37 ರಷ್ಟು ಮತದಾನ ದಾಖಲುLIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.37 ರಷ್ಟು ಮತದಾನ ದಾಖಲು

ಜಿಲ್ಲೆಯಲ್ಲಿ ಒಟ್ಟು 17,11,878 ಮತದಾರರಿದ್ದಾರೆ. ಅವರಲ್ಲಿ 8,41,073 ಪುರುಷ ಹಾಗು 8,70,675 ಮಹಿಳಾ ಮತದಾರರು . ಇದಲ್ಲದೇ ಜಿಲ್ಲೆಯಲ್ಲಿ ಈ ಬಾರಿ 100 ಮಂದಿ ಲೈಂಗಿಕ ಅಲ್ಪ ಸಂಖ್ಯಾತರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

47 % votes casted in Dakshina Kannada district

ಮಧ್ಯಾಹ್ನ 1 ಗಂಟೆ ಹೊತ್ತಿಗೆ ಕ್ಷೇತ್ರವಾರು ನಡೆದ ಮತದಾನ ಪ್ರಮಾಣ ಹೀಗಿದೆ,

ಬೆಳ್ತಂಗಡಿ - ಶೇ. 52

ಮೂಡಬಿದ್ರೆ - ಶೇ. 43

ಮಂಗಳೂರು ನಗರ ಉತ್ತರ - ಶೇ. 48

ಮಂಗಳೂರು ನಗರ ದಕ್ಷಿಣ - ಶೇ. 39

ಮಂಗಳೂರು - ಶೇ. 47

ಬಂಟ್ವಾಳ - ಶೇ. 53

ಪುತ್ತೂರು - ಶೇ. 51

ಸುಳ್ಯ - ಶೇ. 43

ಜಿಲ್ಲೆಯಲ್ಲಿ ಒಟ್ಟು 17,11,878 ಮತದಾರರಿದ್ದಾರೆ. ಅವರಲ್ಲಿ 8,41,073 ಪುರುಷ ಹಾಗು 8,70,675 ಮಹಿಳಾ ಮತದಾರರು . ಇದಲ್ಲದೇ ಜಿಲ್ಲೆಯಲ್ಲಿ ಈ ಬಾರಿ 100 ಮಂದಿ ಲೈಂಗಿಕ ಅಲ್ಪ ಸಂಖ್ಯಾತರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

47 % votes casted in Dakshina Kannada district

ಮುಂಜಾನೆಯಿಂದಲೇ ಮತಗಟ್ಟೆಗಳ ಎದುರು ಜನರ ಸಾಲು ಕಂಡು ಬರುತ್ತಿದೆ. ಹೊತ್ತು ಏರುತ್ತಿದ್ದಂತೆ ಕರಾವಳಿಯಲ್ಲಿ ಬಿಸಿಲ ಝಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾನೆಯೇ ಹೆಚ್ಚಿನ ಜನರು ಮತ ಚಲಾಯಿಸಿದ್ದಾರೆ.

ಮೊದಲ ಮೂರು ತಾಸಿನಲ್ಲೇ ಶೇ.10ರಷ್ಟು ಹೆಚ್ಚು ಮತದಾನ!ಮೊದಲ ಮೂರು ತಾಸಿನಲ್ಲೇ ಶೇ.10ರಷ್ಟು ಹೆಚ್ಚು ಮತದಾನ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 243 ಮತಗಟ್ಟೆಗಳಿದ್ದು 2,18,880 ಮತದಾರರಿದ್ದಾರೆ. ಮೂಡಬಿದ್ರಿ ಕ್ಷೇತ್ರದಲ್ಲಿ 221 ಮತಗಟ್ಟೆಗಳಿದ್ದು 2,00,045 ಮತದಾರರಿದ್ದಾರೆ.

ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ 245‌ ಮತಗಟ್ಟೆಗಳಿದ್ದು 2,34,826 ಮತದಾರರಿದ್ದಾರೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 238 ಮತಗಟ್ಟೆಗಳಲ್ಲಿ 2,40,057 ಮತದಾರರು ಮತ ಚಲಾಯಿಸಲಿದ್ದಾರೆ.

47 % votes casted in Dakshina Kannada district

ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 210 ಮತಗಟ್ಟೆಗಳಿದ್ದು 1,95,735 ಮತದಾರರಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ 249 ಮತಗಟ್ಟೆಗಳಿವೆ. ಇಲ್ಲಿ 2,21,735 ಜನರು ಇಂದು ಮತ ಚಲಾಯಿಸಲಿದ್ದಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಪುತ್ತೂರು ವಿಧಾನ ಸಭಾ ಕ್ಷೆತ್ರದಲ್ಲಿ 223 ಮತಗಟ್ಟೆಗಳಿದ್ದು 2,01,884 ಮತದಾರರಿದ್ದಾರೆ.
ಸುಳ್ಯ ಕ್ಷೇತ್ರ ದಲ್ಲಿ229 ಮತಗಟ್ಟೆ ಗಳಲ್ಲಿ 1,98, 686 ಮತದಾರರು ಇಂದು ಮತಚಲಾಯಿಸಲಿದ್ದಾರೆ.

47 % votes casted in Dakshina Kannada district

ಜಿಲ್ಲೆಯ 1,858 ಮತಗಟ್ಟೆಗಳಲ್ಲಿ 7,569 ಮತ ಯಂತ್ರ ಒದಗಿಸಲಾಗಿದ್ದು ಇವುಗಳ ಪೈಕಿ ಶೇಕಡಾ 20 ರಷ್ಟು ಮತಯಂತ್ರಗಳು ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಒಟ್ಟು 13,176 ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಧಿಕಾರಿ , 4 ಮತಗಟ್ಟೆ ಅಧಿಕಾರಿ ಮತ್ತು ಒಬ್ಬ ಡಿ ವರ್ಗ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1858 ಮತಗಟ್ಟೆಗಳ ಪೈಕಿ 517 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಪೈಕಿ 97 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 221 ಮತಗಟ್ಟೆಗಳಲ್ಲಿ ಮೈಕ್ರೋ ವಿಕ್ಷಕರನ್ನು ಚುನಾವಣಾ ಆಯೋಗ ನಿಯೋಜಿಸಿದೆ.

47 % votes casted in Dakshina Kannada district

ಮುಕ್ತ ಹಾಗು ಶಾಂತಿಯುತ ಮತದಾನ ಪ್ರಕ್ರಿಯೆ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಿಆರ್ ಪಿಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

English summary
Karnataka assembly elections 2018: Polling for state assembly elections is going on in Dakshina Kannada district. Till 1 pm 47% of voters casted their votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X