ಮಂಗಳೂರು: ಆಕ್ಸಿಸ್ ಬ್ಯಾಂಕ್ ಹಣದೊಂದಿಗೆ ನಾಪತ್ತೆಯಾಗಿದ್ದ ಇಬ್ಬರ ಬಂಧನ
ಮಂಗಳೂರಿನ ಯೆಯ್ಯಾಡಿಯಲ್ಲಿರುವ ಆಕ್ಸಿಸ್ ಬ್ಯಾಂಕ್‌ನ ಕರೆನ್ಸಿ ಚೆಸ್ಟ್ ನಿಂದ 7.5 ಕೋಟಿ ರೂ. ನಗದು ಹಣವನ್ನು ದೋಚಿದ್ದ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಇಂದು ಬಂಧಿಸಲಾಗಿದೆ
ಮಂಗಳೂರು, ಮೇ 16: ಮಂಗಳೂರಿನ ಯೆಯ್ಯಾಡಿಯಲ್ಲಿರುವ ಆಕ್ಸಿಸ್ ಬ್ಯಾಂಕ್‌ನ ಕರೆನ್ಸಿ ಚೆಸ್ಟ್ ನಿಂದ 7.5 ಕೋಟಿ ರೂ. ನಗದು ಹಣವನ್ನು ದೋಚಿದ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಇಂದು ಬಂಧಿಸಲಾಗಿದೆ.
ಮಂಗಳೂರಿನ ಯೆಯ್ಯಾಡಿಯಲ್ಲಿರುವ ಆಕ್ಸಿಸ್ ಬ್ಯಾಂಕ್‌ನ ಕರೆನ್ಸಿ ಚೆಸ್ಟ್ ನಿಂದ ಬೆಂಗಳೂರಿನ ಕೋರಮಂಗಲದ ಆಕ್ಸಿಸ್ ಬ್ಯಾಂಕ್ ಶಾಖೆಗೆ ಹಣ ಸಾಗಿಸುತ್ತಿದ್ದ ನಾಲ್ವರು ಸಿಬ್ಬಂದಿಗಳು, ಹಣದ ಸಮೇತ ಮೇ 11 ಗುರುವಾರದಂದು ನಾಪತ್ತೆಯಾಗಿದ್ದರು.[ಮಂಗಳೂರು: ಬ್ಯಾಂಕಿನ 7.5 ಕೋಟಿ ರು ಹಣದೊಂದಿಗೆ ನಾಲ್ವರು ಎಸ್ಕೇಪ್]

ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರು ಬೀಸಿದ್ದ ಬಲೆಗೆ, ಕಾರ್ ಚಾಲಕ ಕರಿಬಸವ ಮತ್ತು ಪೂವಣ್ಣ ಸಿಕ್ಕಿಹಾಕಿಕೊಂಡಿದ್ದಾರೆ.
ಈ ಇಬ್ಬರನ್ನೂ ಇಂದು ಮಡಿಕೇರಿ ಪೊಲೀಸರು ಬಂಧಿಸಿದರು.












Click it and Unblock the Notifications