ಮಂಡ್ಯ ಫಲಿತಾಂಶ: ಮೂರು ಗುಪ್ತಚರ ಮಾಹಿತಿ ನಡುವಿನ ವ್ಯತ್ಯಾಸ ಏನು?
Recommended Video
ಮಂಡ್ಯ, ಮೇ 13: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಕುರಿತು ಗುಪ್ತಚರ ಇಲಾಖೆಯ ಮೂರನೇ ಹಾಗೂ ಅಂತಿಮ ವರದಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೈ ಸೇರಿದೆ ಎನ್ನುವ ಕುರಿತು ಉನ್ನತ ಮೂಲಗಳು ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಪೈಕಿ ಹೆಚ್ಚು ಸುದ್ದಿಯಲ್ಲಿರುವುದು ಮಂಡ್ಯ ಕ್ಷೇತ್ರವೊಂದೇ, ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣದಲ್ಲಿದ್ದಾರೆ.
ಚುನಾವಣೆಯೂ ಮುಗಿದಿದೆ ಆದರೆ ಫಲಿತಾಂಶ ಬರುವವರೆಗೂ ಗೊಂದಲಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಮಂಡ್ಯ ಲೋಕಸಭೆ ಕ್ಷೇತ್ರದ ಮತದಾನ ಪ್ರಕ್ರಿಯೆ ಕುರಿತು ಗುಪ್ತಚರ ಇಲಾಖೆಯ ಅಂತಿಮ ವರದಿ ಬಂದ ಹಿನ್ನೆಲೆಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಫಲಿತಾಂಶದ ಕುರಿತು ಮತ್ತು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿನ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಳೆಯ ವರದಿಗೂ ಈ ವರದಿಗೂ ವ್ಯತ್ಯಾಸ ಇದೆಯಾ?
ಹಾಗಾದರೆ ಈ ಹಿಂದೆ ಎರಡು ಬಾರಿ ಗುಪ್ತಚರ ಇಲಾಖೆ ನೀಡಿದ್ದ ವರದಿಗೂ ಈಗ ನೀಡಿರುವ ಮೂರನೇ ಹಾಗೂ ಅಂತಿಮ ವರದಿಯಲ್ಲಿ ಏನಾದರೂ ವ್ಯತ್ಯಾಸ ಇದೆಯಾ ಎನ್ನುವುದನ್ನು ನೋಡಬೇಕಿದೆ. ಜತೆಗೆ ಗುಪ್ತಚರ ವರದಿಯಲ್ಲಿ ಮಂಡ್ಯ, ಮಳವಳ್ಳಿ, ಮದ್ದೂರು ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮೂರೂ ವರದಿಯಲ್ಲಿ ಅಷ್ಟೇನು ವ್ಯತ್ಯಾಸ ಕಂಡುಬರುತ್ತಿಲ್ಲ.

ನಿಖಿಲ್ ಕುಮಾರಸ್ವಾಮಿಗೆ ಹಿನ್ನಡೆಯಾದರೆ ಎಂಬ ಭಯ
ಇದೀಗ ಕುಮಾರಸ್ವಾಮಿಯವರಿಗೆ ಆತಂಕ ಆರಂಭವಾಗಿದ್ದು, ಮಗನನ್ನು ಗೆಲ್ಲಿಸುವುದು ಪ್ರತಿಷ್ಠೆಯ ವಿಷಯವಾಗಿ ಏರ್ಪಟ್ಟಿದೆ. ಸುಮಲತಾಗೆ ಹೋಲಿಸಿದರೆ ನಿಖಿಲ್ಗೆ ಲೀಡ್ ಕಮ್ಮಿ ಇದೆ ಎಂಬುದು ವರದಿಯಲ್ಲಿ ಇರುವುದಾಗಿ ತಿಳಿದುಬಂದಿದೆ. ಫಲಿತಾಂಶಕ್ಕೂ ಮುನ್ನ ಹೊರಬಿದ್ದಿರುವ ಕೆಲವು ವರದಿಗಳ ಮೇಲಿನ ಚರ್ಚೆ ನಡೆಯುತ್ತಿದೆ. ಈ ಸಾಲಿಗೆ ಇದೀಗ ಗುಪ್ತಚರ ಇಲಾಖಾ ವರದಿಯೂ ಕೂಡ ಸೇರಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚುನಾವಣೆ ನಡೆದಿದ್ದು ಯಾವತ್ತು?
ಮೊದಲನೇ ಹಂತದಲ್ಲಿ ಏಪ್ರಿಲ್ 18ರಂದು ಮಂಡ್ಯ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು-ಕೊಡಗು, ಬೆಂಗಳೂರು ಸೆಂಟ್ರಲ್, ಉಡುಪಿ-ಚಿಕ್ಕಮಗಳೂರು, ಚಿತ್ರದರ್ಗ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.

ಮಹಿಳಾ ಮತ್ತು ಯುವ ಮತದಾರರ ಬಗ್ಗೆ ವರದಿ ಏನು ಹೇಳುತ್ತೆ?
ಮಹಿಳಾ ಮತ್ತು ಯುವ ಮತದಾರರ ಬಗ್ಗೆ ಗುಪ್ತಚರ ಇಲಾಖೆ ನಿಖರ ವರದಿ ನೀಡುವಲ್ಲಿ ವಿಫಲವಾಗಿದೆ ಎಂಬ ಮಾಹಿತಿ ಇದ್ದು, ಮಂಡ್ಯದ ಬಿಜೆಪಿ, ರೈತ ಸಂಘ ಮತ್ತು ಜೆಡಿಎಸ್ ನ ಕೆಲ ಅತೃಪ್ತರು ಸುಮಲತಾಗೆ ಬೆಂಬಲ ನೀಡಿರುವುದು ಸಿಎಂಗೆ ನುಂಗಲಾರದ ತುಪ್ಪವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ











Click it and Unblock the Notifications